ಧಾರವಾಡ : ಧಾರವಾಡದ ನೋಂದಣಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ,ಆಸ್ತಿ ಮಾರಾಟ , ಖರೀದಿದಾರರು ಪರದಾಡಿದ ಪ್ರಸಂಗ ನಡೆದಿದೆ.
ವಿದ್ಯುತ್ ಬಾಕಿ ಇರಿಸಿಕೊಂಡಿದ್ದರಿಂದ ಹೆಸ್ಕಾಂ ನವರು ವಿದ್ಯುತ್ ಕಡಿತ ಮಾಡಿದ್ದಾರೆ. ದೂರದ ಊರಿನಿಂದ ಜಮೀನು, ನಿವೇಶನ ಖರೀದಿಗೆ ಬಂದವರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ರಾಜಸ್ವ ಸಂಗ್ರಹಿಸಿ ಖಜಾನೆ ತುಂಬುವ ಸರ್ಕಾರದ ಪ್ರಮುಖ ಇಲಾಖೆ ವಿದ್ಯುತ್ ಬಿಲ್ ಪಾವತಿ ಮಾಡದಷ್ಟು ಬರಗೆಟ್ಟಿದೇಯಾ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.