ಧಾರವಾಡ : ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಿಸುತ್ತಾ ಅವರ ಆದರ್ಶಗಳನ್ನ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಮಾಜಿ ಮಹಾಪೌರ ಈರೇಶ ಅಂಚಟಗೇರಿ ಹೇಳಿದರು.ಅವರು ಎತ್ತಿನಗುಡದಲ್ಲಿ ಹಮ್ಮಿಕೊಂಡ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮೇಶ್ವರರ ಪ್ರತಿಮೆಗೆ ಪುಷ್ಪನಮನಗಳನ್ನು ಸಲ್ಲಿಸಿ, ನಾಡಿನ ಜನತೆಗೆ ಒಳಿತಾಗಲೆಂದು ಪ್ರಾರ್ಥಿಸಿ, ಶ್ರೀ ಗುರು ಸಿದ್ಧರಾಮೇಶ್ವರ ಜಯಂತಿ ಶುಭಾಶಯಗಳು ಕೋರಿ ಮಾತನಾಡುತ್ತಾ . 12ನೇ ಶತಮಾನದ ಬಸವಣ್ಣವರ ಸಮಕಾಲಿನವರಾದ ಶ್ರೀ ಸಿದ್ದರಾಮೇಶ್ವರರು ವಚನ ಸಾಹಿತ್ಯದಲ್ಲಿ ಅದ್ಭುತ ಸಾಧನೆ ಮಾಡಿದವರು. ಕಾಯಕ ದೊಂದಿಗೆ ತಮ್ಮ ಬದುಕಿನ ಉದ್ದಕ್ಕೂ ಶಿವಶರಣರೊಂದಿಗೆ ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದವರು.
ಬಸವಣ್ಣವರ ಅನುಭವ ಮಂಟಪದಲ್ಲಿ ಶೂನ್ಯ ಪೀಠದ ಅಧ್ಯಕ್ಷರಾಗಿದವರು. ಭೋವಿ ವಡ್ಡರ ಸಮಾಜದ ಗುರುಗಳಾದ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಪ್ರತಿ ವರ್ಷ ಅರ್ಥಪೂರ್ಣವಾಗಿ ಆಚರಿಸುತ್ತಿರುವ ಎತ್ತಿ ಗುಡ್ಡದ ಸಮಾಜದವರಿಗೆ ಅಭಿನಂದನೆ ಸಲ್ಲಿಸಿದರು.ಈ ವೇಳೆ ಮಾಜಿಮಹಾಪೌರರನ್ನ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಸಮಯದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶಂಕರ್ ಶೇಳಕೆ. ಮತ್ತು ಭಾರತೀಯ ಜನತಾ ಪಾರ್ಟಿ ಯುವ ಮುಖಂಡ ಸಿದ್ದು ಕಲ್ಯಾಣ ಶೆಟ್ಟಿ ಹಾಗೂ ಮಂಜುನಾಥ್ ನಡಕಟ್ಟಿ ಸೇರಿದಂತೆ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.ಭಾರತೀಯ ಜನತಾ ಪಾರ್ಟಿಯ 71ರ ಅಧ್ಯಕ್ಷರಾಗಿ ಆಯ್ಕೆಯಾದ ಪಾಲಿಕೆ ಸದಸ್ಯರಾದ ಶಂಕರ ಶಿಳಕೆ ಅವರನ್ನು ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಸವರಾಜು ರುದ್ರಪುರ್. ಮಂಜುನಾಥ್ ನಡಕಟ್ಟಿ ಬಸವರಾಜ ಆನೆಗುಂದಿ ರಾಜು ರುದ್ರಪುರ್ ಲಕ್ಷ್ಮಣ್ ಗರಗ, ಸಿದ್ದು ಕಲ್ಯಾಣಶೆಟ್ಟಿ ಸರ್ ಅಂತ ಮೊದಲಾದವರು ಇದ್ದರು.
ಈ ಸಮಾರಂಭದಲ್ಲಿ ಬಸವರಾಜು ರುದ್ರಪುರ್,ನಿಂಗಪ್ಪ ಮಾದೇವಪ್ಪ ತೇಗೂರು, ಬಸಪ್ಪ ರುದ್ರಪುರ್, ಬಸವರಾಜ್ ಆನೆಗುಂದಿ, ರಾಜು ರುದ್ರಾಪುರ್, ಮಂಜುನಾಥ್ ಹಿರೇಮನಿ, ಶ್ರೀನಿವಾಸ ಶ್ರೀನಿವಾಸ್ ಅವರೊಳ್ಳಿ,ತಿಪ್ಪಣ್ಣ ಬಂಡಿವಡ್ಡರ ಲಕ್ಷ್ಮಣ್ ಗರಗ,ರಾಮಣ್ಣ ರುದ್ರಪುರ್, ಹನುಮಂತ್ ರುದ್ರಾಪುರ್, ಹನುಮಂತ ಬಂಡಿ ವಡ್ಡರ್, ತಿಮ್ಮಣ್ಣ ಬಂಡಿವಡ್ಡರ ಸಂತೋಷ್ ರುದ್ರಾಪುರ್,ನರಸಪ್ಪ ರುದ್ರಪುರ್ ಭಾಗವಹಿಸಿದ್ದರು.