ಧಾರವಾಡ : ನಗರದ ಮರಾಠ ವಿದ್ಯಾ ಪ್ರಸಾರಕ ಮಂಡಳದ ಪ್ರಾಥಮಿಕ ಪ್ರೌಢ ಪದವಿಪೂರ್ವ ಪದವಿ ಹಾಗೂ ಸ್ನಾತಕೋತರ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಅಂಗ ಸಂಸ್ಥೆಗಳ ವತಿಯಿಂದ ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.
ಮರಾಠ ವಿದ್ಯಾ ಪ್ರಸಾರಕ ಮಂಡಲದ ನಿರ್ದೇಶಕರಾದ ಸುನಿಲ್ ಮೋರೆ ಮಾತನಾಡಿದರು ಇಂದು, ದಾಸ ಸಾಹಿತ್ಯದ ಮೇರು ಪರ್ವತ ಹಾಗೂ ದಾಸ ಸಾಹಿತ್ಯದ ಬನದ ಕೋಗಿಲೆ ಎಂದೇ ಪ್ರಖ್ಯಾತರಾದ ಶ್ರೀ ಕನಕದಾಸರ ಜಯಂತಿ, ಕನಕದಾಸರು ಪುರಂದರದಾಸರ ಸಮಕಾಲೀನರು ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು ನಮ್ಮಗಳ ನಿತ್ಯ ಜೀವನದ ಬದುಕು ಯಾವತ್ತೂ ಹತಾಶೆದಿಂದ ಕೂಡಿರಬಾರದು ಎಂದು “ತಲ್ಲಣಸದಿರು ಕಂಡೆ ತಾಳೆಲೆ ಮನವೆ” ಎಂಬ ದಿವ್ಯ ಸಂದೇಶ ನೀಡಿದ ಇವರ ಕೀರ್ತನೆಗಳು ಮನುಕುಲವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಂತದ್ದು,ಕನಕದಾಸರು ” ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನಾದರು ಬಲ್ಲಿರಾ ” ಎಂದು ಹೇಳಿ ಕುಲವನ್ನು ಮೀರಿ ನಿಂತ ಮಹಾನ್ ಸಂತ ” ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ”ಎಂದು ಭಕ್ತಿಯ ಮಾರ್ಗ ತೋರಿದ ಮಹಾನ್ ಭಕ್ತ ” ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ” ಎಂದು ಸ್ವತ; ತಮ್ಮ ಅದಮ್ಯ ಭಕ್ತಿಯ ಮೂಲಕ ಶ್ರೀ ಕೃಷ್ಣನು ತನ್ನೆಡೆಗೆ ತಿರುಗುವಂತೆ ಮಾಡಿದ ಭಕ್ತ ಶ್ರೇಷ್ಠ, ಕನಕದಾಸರು ಅನೇಕ ಕೀರ್ತನೆ ಸಾಹಿತ್ಯದ ಮೂಲಕ ಅನರ್ಘ್ಯ ಕೊಡುಗೆ ನೀಡಿದ ಮಹಾನ್ ದಾರ್ಶನಿಕ ಎಂದು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆ ಸಹ ಕಾರ್ಯದರ್ಶಿಯಾದ ಮಲ್ಲೇಶಪ್ಪ ಶಿಂದೆ. ನಿರ್ದೇಶಕರಾದ ಅನಿಲ್ ಬೋಸ್ಲೆ ಪ್ರಸಾದ ಹಂಗಳಕಿ ಉಪಸ್ಥಿತರಿದ್ದರು. ಎ ಬಿ ಬಾಬರ್ , ಎಂ ಎಸ್ ಗಾಣಿಗೇರ್ , ಎಸ್ಎಂ ಸಂಕೋಜಿ ,ಮೀನಾಕ್ಷಿ ಘಾಟಿಗೆ , ಸವಿತಾ ಮುಳಕಿನವರ್ ಉಪಸ್ಥಿತರಿದ್ದರು. ವಿ ಎಂ ಹೂಲಿ ಸ್ವಾಗತಿಸಿದರು, ಎ ಪಿ ಕೇಮ್ ಕರ್ ನಿರೂಪಿಸಿದರು ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.