ಧಾರವಾಡ : ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಇದೇ ತಿಂಗಳ 14 ರಂದು ಶನಿವಾರ ಮುಂಜಾನೆ 10.30 ಕ್ಕೆ ಎಮ್. ಆರ್. ಬಾಳಿಕಾಯಿ ಆರ್ಟ್ ಗ್ಯಾಲರಿ ಸಂಸ್ಥೆ ಸದಸ್ಯರು, ಪರಿವಾರದವರು, ಕಲಾವಿದರು, ಶಿಷ್ಯರು, ಆತ್ಮೀಯ ಸ್ನೇಹಿತರು, ಹಾಗೂ ಕಲಾಸಕ್ತರು ಸೇರಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಬಸವರಾಜ ಎಚ್ ಕುರಿಯವರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದ ಸಾನಿಧ್ಯವಹಿಸಿ ಉದ್ಘಾಟನೆಗಾಗಿ, ತ್ರಿವಿಧ ದಾಸೋಹಿ ಶ್ರೀಮನ್ನಿರಂಜನ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠ ಇವರು ಆಗಮಿಸಲಿದ್ದಾರೆ ಎಂದರು.
“ಮಾನಸ್ತಂಭ” ಎಮ್, ಆರ್, ಬಾಳಿಕಾಯಿ ಅವರ ಅಭಿನಂದನಾ ಗ್ರಂಥದ ಪರಿಚಯವನ್ನು ನರಸಿಂಹ ಪರಾಂಜಪೆ, ಹಿರಿಯ ಕವಿಗಳು, ಸಾಧನಕೇರಿ, ಧಾರವಾಡ ಇವರು ಮಾಡಲಿದ್ದು ಎಮ್. ಆರ್. ಬಾಳಿಕಾಯಿ ಅವರ “ವೈವಿಧ್ಯಮಯ ರೇಖಾ ಚಿತ್ರಗಳು” ಪುಸ್ತಕದ ಪರಿಚಯವನ್ನು ಡಾ. ಆರ್. ಎ. ಬಾಳಿಕಾಯಿ, ನಿವೃತ್ತ ಡೀನ್, ಕೃಷಿ ವಿಶ್ವವಿದ್ಯಾಲಯ, ಇವರು ಮಾಡಲಿದ್ದಾರೆ ಎಂದರು.
“ಮಾನಸ್ತಂಭ” ಅಭಿನಂದನಾ ಗ್ರಂಥದ ಬಿಡುಗಡೆಯನ್ನು ಡಾ. ಸಂಜೀವಕುಮಾರ, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಬೆಂಗಳೂರು ಮತ್ತು ಸದಸ್ಯರು, ಕೇಂದ್ರೀಯ ಆಡಳಿತ ನ್ಯಾಯ ಮಂಡಳಿ, ಬೆಂಗಳೂರು ಪೀಠ ಇವರು ನೆರವೇರಿಸಲಿದ್ದಾರೆ ಎಂದರು.
“ವೈವಿಧ್ಯಮಯ ರೇಖಾ ಚಿತ್ರಗಳು” ಪುಸ್ತಕದ ಬಿಡುಗಡೆಯನ್ನು ಕಾರ್ಯದರ್ಶಿಗಳು, ಜನತಾ ಶಿಕ್ಷಣ ಸಮಿತಿ, ವಿದ್ಯಾಗಿರಿಯ ಡಾ ಅಜೀತ ಪ್ರಸಾದ ಇವರು ಮಾಡಲಿದ್ದಾರೆ ಎಂದರು.
ವಿಶೇಷ ಅತಿಥಿಗಳಾಗಿ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಕರ್ನಾಟಕ ಸರ್ಕಾರ,
ರಿತು ಕಕ್ಕರ್, ಅಧ್ಯಕ್ಷರು, ಕರ್ನಾಟಕ ವಿದ್ಯಾವರ್ಧಕ ಸಂಘದ ಚಂದ್ರಕಾಂತ ಗುರಪ್ಪ ಬೆಲ್ಲದ, ಹಿರಿಯ ಕಲಾವಿದರು, ಸಂಡೂರು (ಬಳ್ಳಾರಿ- ಜಿಲ್ಲೆ) ನಾಡೋಜ ವಿ. ಟಿ. ಕಾಳೆ, ಆಗಮಿಸುವರು.ಕಾರ್ಯಕ್ರಮದ ಅಧ್ಯಕ್ಷತೆ ವಿಶ್ರಾಂತ ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಡಾ. ಜೆ. ಎಚ್. ಕುಲಕರ್ಣಿ ವಹಿಸಲಿದ್ದಾರೆ ಎಂದರು. ಕಲಾಪ್ರದರ್ಶನ ಅಂದು ಎಮ್. ಆರ್. ಬಾಳಿಕಾಯಿ ಅವರ ಚಿತ್ರಕಲಾ ಪ್ರದರ್ಶನವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹಿರಿಯ ಕಲಾವಿದ ಎಮ್. ಆರ್. ಬಾಳಿಕಾಯಿ, ನಿವೃತ್ತ ಡೀನ್, ಕೃಷಿ ವಿಶ್ವವಿದ್ಯಾಲಯ, ಡಾ. ಆರ್. ಎ. ಬಾಳಿಕಾಯಿ, ಆರ್ಟ್ ಗ್ಯಾಲರಿಯ ಕಾರ್ಯದರ್ಶಿ ಎಮ್. ಆರ್. ಬಾಳಿಕಾಯಿ ,ಖಜಾಂಚಿ ರಮೇಶಕುಮಾರ ಬಾಳಿಕಾಯಿ, ದೇವಗೌಡ ಸದಸ್ಯ ನೇಮಗೌಡ ಮಲಗೌಡನವರ, ಉಮೇಶ ಬಾಬುರಾವ ಬಾಳಿಕಾಯಿ, ಉಪನ್ಯಾಸಕರು, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಎಸ್. ಕೆ. ಪತ್ತಾರ ಇದ್ದರು.