ನಿರ್ವಾಕನ ಮೇಲೆ ಹಲ್ಲೆ
ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ

Assault on Nirvaka Jaya Karnataka People's Forum protest
ಧಾರವಾಡ 25 : ಬೆಳಗಾವಿಯ ಜಿಲ್ಲೆಯಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಜಯ ಕರ್ನಾಟಕ ಜನಪರ ವೇದಿಕೆಯವತಿಯಿಂದ
ಧಾರವಾಡದ ಜಿಲ್ಲಾಧಿಕಾರಿಗಳ ಮುಖಾಂತರ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಸಾರಿಗೆ ಮನವಿ ಸಲ್ಲಿಸಲಾಯಿತು.
ನಿರ್ವಾಹಕ ಟಿಕೆಟ್ ಪಡೆದುಕೊಳ್ಳಿ ಎಂದು ತಿಳಿಸಿದ ಕಾರಣಕ್ಕೆ ಹಣ ಕೊಟ್ಟು ಟಿಕೆಟ್ ಪಡೆಯುವ ಬದಲು ಕನ್ನಡ ಮಾತನಾಡುತ್ತೀಯ ಮರಾಠಿ ಮಾತನಾಡು ಎಂದು ನಿರ್ವಾಹಕ (ಕಂಡೆಕ್ಟರ್) ಮೇಲೆ ಹಲ್ಲೆ ಮಾಡಿ ನಂತರ ಗ್ರಾಮದ ಅನೇಕ ಜನರನ್ನು ಕರೆಸಿ ಬಸ್ ತಡೆದು ಪುನಃ ಗುಂಪಿನ ಜೊತೆಗೂಡಿ ನಿರ್ವಾಹಕ ಮತ್ತು ಚಾಲಕ ಇಬ್ಬರ ಮೇಲೆ ಹಲ್ಲೆಯನ್ನು ತೀವ್ರವಾಗಿ ನಾವು ಖಂಡಿಸಿ ಹಲ್ಲೆ ಮಾಡಿರುವ ಕನ್ನಡ, ಕರ್ನಾಟಕ ದ್ರೋಹಿಗಳನ್ನು ಬರೀ ಬಂಧಿಸಿರುವುದು ಸಾಲದು ಇಂತಹ ಕೃತ್ಯಗಳು‌ ಮರುಕಳಿಸಬಾರದೆಂದರೆ ಹಲ್ಲೆಗೊಳಗಾದ ಸಾರಿಗೆ‌ ಸಂಸ್ಥೆಯ ಸಿಬ್ಬಂದಿಗಳಿಗೆ ಮತ್ತು ಉಳಿದ‌ ಚಾಲಕರುಗಳು ಹಾಗೂ ನಿರ್ವಾಹಕರುಗಳು ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದರೆ ಹಲ್ಲೆ ಮಾಡಿದ ಪುಂಡರನ್ನು‌ ಗಡಿಪಾರು ಮಾಡಿಸಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡದ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಅಧ್ಯಕ್ಷರಾದ ಲಿಂಗಾರಾಜ ಅಂಗಡಿ, ವೇದಿಕೆಯ ಪದಾಧಿಕಾರಿಗಳಾದ ಜಗದೀಶ ಜಾದವ, ಈರಣ್ಣ ಪಾಟೀಲ, ಮಂಜುನಾಥ ಅಂಗಡಿ, ಸುಭಾಷ ಪಾಟೀಲ, ವಿನೋದಗೌಡ ಪಾಟೀಲ, ಬಸವರಾಜ ಬೆನ್ನೊರ, ವಿನಾಯಕ ಭೊಸಣ್ಣವರ, ಲೋಹಿತ ಬಾರ್ಕೆರ, ಪ್ರಮೀಳಾ ಜಕ್ಕನವರ, ಸುನಾಂದಾ, ಸುಮಂಗಳಾ ದಂಡಿನ, ಪ್ರಮೋದ ಶೆಟ್ಟಿ ಸಿದ್ದಾರೋಡ ಎರಿಕೊಪ್ಪ ಬಾಳೇಶ ತಳ್ಳಿಮನಿ ಆನಂದ ಕೊಡಿಹಳ್ಳಿ ವಿಟ್ಟಲ್ ನೇಗಿಹಾಳ ನಾರಾಯಣ ಮೊರಬದ ರಮೇಶ ಕುಂಗಿ ಗುರುಸಿದ್ದಪ್ಪ ಅವ್ವನವರ ಇದ್ದರು.