
ಧಾರವಾಡ 11: ಸ್ವರಲಯ ಆರಾಧನೆ ಸಂಸ್ಥೆ ಧಾರವಾಡ ಹಾಗೂ ಸುಮದ್ವ ಸಂಗೀತ ವಿದ್ಯಾಲಯ ಮಾಳಮಡ್ಡಿ ಧಾರವಾಡ ಇವರ ವತಿಯಿಂದ ವಾರ್ಷಿಕ ಸಂಗೀತೋತ್ಸವ ಕಾರ್ಯಕ್ರಮವು ಕರ್ನಾಟಕ ಕುಲ ಪುರೋಹಿತ ಶ್ರೀ ಆಲೂರು ವೆಂಕಟರಾವ್ ಸಂಸ್ಕೃತ ಭವನದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾಲಯದ ಮಕ್ಕಳು, ವಿವಿಧ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಜೊತೆಗೆ ತಬಲವಾದನ ಹಾಗೂ ಮಕ್ಕಳ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನವನ್ನು ಮಾಡಲಾಗಿತ್ತು.
ಅದೇ ರೀತಿ ಅಂದಿನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಭಾರತಿ ಬಸವರಾಜ್ ರಾಜಗುರು ಇವರು ಹಾಗೂ ಖ್ಯಾತ ವಕೀಲರಾದ ಅರುಣ್ ಜೋಶಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅದಲ್ಲದೆ ಕಾರ್ಯಕ್ರಮದಲ್ಲಿ ಗೌರವ ಸನ್ಮಾನಿತರಾಗಿ ಡಾಕ್ಟರ್ ಆಚಾರ್ಯ ಹಿರೇಮಠ, ಡಾ. ಮೃತ್ಯುಂಜಯ ಅಗಡಿ, ಡಾಕ್ಟರ್ ವಿಜಯಲಕ್ಷ್ಮಿ ಡಾ. ಶಿವಲೀಲಾ ಹಾಗೂ ನಾಗರತ್ನ ಇವರನ್ನು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನಿತರಾದ ಡಾಕ್ಟರ್ ರಾಚಯ್ಯ ಹಿರೇಮಠ್ ಅವರು ಮಾತನಾಡಿ ಹಿಂದಿನ ಮಕ್ಕಳಲ್ಲಿ ಕಲೆ ಹಾಗೂ ಸಂಸ್ಕೃತಿ ಸಂಗೀತದ ಬಗೆಗೆ ಒಲವು ಮೂಡಿಸಲು ಶ್ರಮಿಸುತ್ತಿರುವ ಈ ಸಂಸ್ಥೆಗೆ ಶುಭ ಹಾರೈಸಿ ಜೊತೆಗೆ ಮುದ್ದು ಮಕ್ಕಳಿಗೆ ಹಾಗೂ ಪಾಲಕರಿಗೆ ನಮ್ಮ ಕಲೆಯ ಸಂಸ್ಕೃತಿ ಸಂಗೀತದ ಬಗೆಗೆ ಗೌರವವನ್ನು ಬೆಳೆಸಿಕೊಳ್ಳುವಲ್ಲಿ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜೈ ತೀರ್ಥ ಪಂಚಮುಖಿ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ವೈಷ್ಣವಿ ಜೈ ತೀರ್ಥ್ ಪಂಚಮುಖಿ , ಹಾಗೂ ಸಂಸ್ಥೆಯ ಸದಸ್ಯರು ಮತ್ತು ಪಾಲಕರು ವಿದ್ಯಾರ್ಥಿಗಳು ಸಂಗೀತ ಕ್ಷೇತ್ರದ ಅನೇಕ ಗಣ್ಯಮಾನ್ಯ ಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.