ಧಾರವಾಡ 01: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ ಶಾಖೆಯ 2024 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಮಂಗಳವಾರ, ದಿ 04 ರಂದು ಮುಂಜಾನೆ 10:30 ಗಂಟೆಗೆ ಕನ್ನಡ ಕುಲಪುರೋಹಿತ ಆಲೂರು ವಂಕಟರಾವ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗುವದು ಎಂದು. ಕಾರ್ಯದರ್ಶಿ ಡಾ.ಉಮೇಶ ಹಳ್ಳಿಕೇರಿ ತಿಳಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸಭೆಯಲ್ಲಿ ಕಾರ್ಯಸೂಚಿ ಪ್ರಕಾರ ಈ ಸಾಲಿನ ಕಾರ್ಯಕ್ರಮಗಳ ವರದಿ ಹಾಗೂ ಮುಂದಿನ ಅವಧಿಗೆ (2025 ರಿಂದ 2028) ಆಡಳಿತ ಮಂಡಳಿಯ ಸದಸ್ಯರು ಹಾಗೂ ಪದಾಧಿಕಾರಿಗಳ ಆಯ್ಕೆ ಮತ್ತು ಇತರ ವಿಷಯಗಳ ಚರ್ಚೆ ಮಾಡಲಾಗುವುದು ಕಾರಣ ಸಭೆಯಲ್ಲಿ ಸರ್ವ ಸದಸ್ಯರು ಪಾಲ್ಗೊಳ್ಳಲು ಕೋರಲಾಗಿದೆ ಎಂದರು.
ಕಾಯ೯ಕ್ರಮ ಸ್ವಾಗತದಿಂದ ಪ್ರಾರಂಭ ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳು ಸಂಸ್ಥೆಯ 2024-25 ನೇ ಸಾಲಿನ ಚಟುವಟಿಕೆಗಳ ವಿವರ.
ಶಾಖೆಯ ಆರ್ಥಿಕ ಸ್ಥಿಥಿಯ ಕುರಿತು.
ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ (ಅವಧಿ 2025 ರಿಂದ 2028) ಅಧ್ಯಕ್ಷರ ಅಪ್ಪಣೆ ಮೇರೆಗೆ ಬರತಕ್ಕ ಇತರ ವಿಷಯಗಳ ಚರ್ಚೆ.ವಂದನಾರ್ಪಣೆ ಅಂತ್ಯ ಈ ಸಭೆಗೆ, ಶ್ರೀಮತಿ. ದಿವ್ಯ ಪ್ರಭು, ಮಾನ್ಯ ಜಿಲ್ಲಾಧಿಕಾರಿಗಳು ಧಾರವಾಡ, ಹಾಗೂ ಅಧ್ಯಕ್ಷರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಧಾರವಾಡ, ಅಧ್ಯಕ್ಷತೆ ವಹಿಸುವರು ಹಾಗೂ ಪಾಟೀಲ ಭುವನೇಶ ದೇವಿದಾಸ,ಭಾ.ಆ.ಸೇ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಧಾರವಾಡ ಹಾಗೂ ಉಪಾಧ್ಯಕ್ಷರು ಭಾರತೀಯ ರೆಡ್ ಕ್ರಾಸ್ ಸಂಸ್ಥ ಧಾರವಾಡ ಉಪಸ್ತಿತರಿರುವರು.ಧಾರವಾಡದ ಭಾರತೀಯ ರೆಡ್ ಕ್ರಾಸ ಸಂಸ್ಥೆಯ, ಎಲ್ಲ ಗೌರವಾನ್ವಿತ ಸದಸ್ಯರು ಬಾಗವಹಿಸಲು ಕೋರಲಾಗಿದೆ ಎಂದರು. ಖಜಾಂಚಿ ಡಾ. ಎಸ್ ಜಿ ಹಿರೇಮಠ ಚೇರಮನ್
ಮಹಾಂತೇಶ ವೀರಾಪೂರ ಇದ್ದರು.