![Aadhaar correction center started in Hebbali](https://independentsangramnews.com/wp-content/uploads/2025/01/WhatsApp-Image-2025-01-02-at-2.31.11-AM.jpeg)
ಧಾರವಾಡ 02 : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಅನುಕೂಲ ಆಗಲಿ ಎಂಬ ಸದುದ್ದೇಶದಿಂದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ಭೀಮಕ್ಕನವರ ಶಾಲಾ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಆಧಾರ ತಿದ್ದುಪಡಿ ಶಿಬಿರವನ್ನು, ಮಕ್ಕಳ ಅಧಾರ ತಿದ್ದುಪಡಿ ಮಾಡುವ ಮೂಲಕ ಚಾಲನೆ ನೀಡಿ, ಅಪರ ಐಡಿ ಹೊಸ ಒಂದು ದೇಶ ಒಂದು ಗುರುತಿನ ಚೀಟಿ ಯೋಜನೆಯಾದ ಅಪರ ಐಡಿ,ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮಾಹಿತಿ ತಿಳಿಯಲು ಬಹುಮುಖ್ಯ ಪಾತ್ರ ವಹಿಸಲಿದ್ದು, ಸದರಿ ಕಾರ್ಯಕ್ಕೆ ಆಧಾರ ತಿದ್ದುಪಡಿ ಅಗತ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿ ಆರ್ ಪಿ ನರಸಿಂಹ ಮೂರ್ತಿ ರಾಜೂರ ಮಾತನಾಡಿ, ಹೆಬ್ಬಳ್ಳಿ ಗ್ರಾಮ ಪಂಚಾಯತಿ ಮತ್ತು ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳು ತುಂಬಾ ಮುತುವರ್ಜಿಯಿಂದ, ಶಾಲಾ ಮಕ್ಕಳಿಗೆ ಅನುಕೂಲ ಆಗಲಿ, ಮತ್ತು ಕೂಲಿಕಾರ್ಮಿಕರ ಮಕ್ಕಳು ಕೃಷಿಕೂಲಿ ಮಾಡುವ ಹಾಗೂ ರೈತರುಗಳಿಗೆ ತಮ್ಮ ಮಕ್ಕಳಿಗೆ ನಗರಕ್ಕೆ ಕರೆದುಕೊಂಡು ಹೋಗಿ ಆಧಾರ ತಿದ್ದುಪಡಿ ತುಂಬಾ ಕಷ್ಟದ ಕೆಲಸ ಈ ಒಂದು ಸನ್ನಿವೇಶದಲ್ಲಿ ಹೆಬ್ಬಳ್ಳಿ ಸಿ ಆರ್ ಪಿ ಎಂ ಎನ್ ಮುಲ್ಲಾನವರ ಗ್ರಾಮ ಪಂಚಾಯತಿ ಮತ್ತು ಶಾಲಾಭಿವೃದ್ದಿ ಸಮಿತಿಯ ಗಮನಕ್ಕೆ ತಂದು ಆಧಾರ ತಿದ್ದುಪಡಿ ಶಿಬಿರವನ್ನು ಹಳ್ಳಿಗೆ ತರುವಲ್ಲಿ ಸಿಆರ್ ಪಿ ಕಾರ್ಯ ಶ್ಲಾಘನೀಯ ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಮಾಧನಭಾವಿ ಎಂ ಸದಸ್ಯರಾದ ಬಾಳಪ್ಪ ಪ್ರಭಾಕರ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕೃಷ್ಣಾಜಿ ನಾಡಿಗೇರ, ಸದಸ್ಯರಾದ ಈರಣ್ಣ ಉಮನ್ನವರ ಬಸವರಾಜ ಬಡಿಗೇರ ಮೌಲಾಸಾಬ ಕೊಣ್ಣೂರ ಕವಿತಾ ಸುಣಗಾರ ನಿರ್ಮಲಾ ಮೊರಬದ ಮುಖ್ಯ ಗುರುಮಾತೆ ನಾಗರತ್ನ ಅಂಚಟಗೇರಿ, ರಾಜೀವ ಹಲವಾಯಿ, ಪ್ರಭಯ್ಯ ವಿರಕ್ತಮಠ ಚಿತ್ರಾ ಝಠಾರ, ಮುಂತಾದವರು ಇದ್ದರು.
ಸ್ವಾತಿ ಕೊಟಬಾಗಿ ವ್ಯವಸ್ಥಾಪಕರು ಆಧಾರ ಸೇವಾ ಕೇಂದ್ರ ಧಾರವಾಡ
ಅರುಣ ನವವಲೂರ ,ನರಸಿಂಹ ಮೂರ್ತಿ ರಾಜೂರ,ಎಮ್ ಎನ್ ಮುಲ್ಲಾನವರ , ಎಲ್ ಐ ಲಕ್ಕಮ್ಮನವರ ಹಾಜರಿದ್ದರು.