ರಾಯಚೂರು (ಸಿಂಧನೂರು) : ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಮೂವರು ಪಿಡಿಓ ಅಧಿಕಾರಿಗಳು ಸಾವನ್ನಪ್ಪಿದ ಘಟನೆ ರಾಯಚೂರಿನ ಸಿಂಧನೂರು ಬಳಿ ನಡೆದಿದೆ.
ಸಿಂಧನೂರು ಸಮೀಪದ ಡಾಲರ್ಸ್ ಕಾಲೋನಿ ಬಳಿ ಈ ಘಟನೆ ನಡೆದಿದೆ. ಲಾರಿ ಪಲ್ಟಿಯಾಗಿ ಮಲ್ಲಿಕಾರ್ಜುನ, ಶಿವರಾಜು , ಮೆಹಬೂಬ ಎಂಬುವವರು ಮೃತಪಟ್ಟಿದ್ದಾರೆ.ನಿನ್ನೆ ರಾತ್ರಿ ಮೂವರು ಕೆನಲ್ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ದಾರಿಯಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ದಾರಿಯಲ್ಲಿ ಬಂದ ಹೊಟ್ಟು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿ ಕೆಳಗೆ ಸಿಲುಕಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಘಟನೆಗೆ ಕಾರಣವಾದ ಲಾರಿ ಚಾಲಕನನ್ನು ಸಿಂಧನೂರು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.