ಧಾರವಾಡ 17 : ನಗರದ ಸಿವಿಲ್ ಕೋರ್ಟ್ನಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ನ ವೇಳೆ ಅಸಲು ದಾವೆ ಕೇಸೊಂದಕ್ಕೆ ಸಂಬಂಧಿಸಿದಂತೆ ಕಕ್ಷಿದಾರರ ಬಳಿಯೇ ತೆರಳಿ ರಾಜೀ ಸಂಧಾನ ಮಾಡಿಸಿ ಮಾನವೀಯತೆ ನ್ಯಾಯಾಧೀಶರು ಮೆರೆದಿದ್ದಾರೆ.
89 ವರ್ಷ ವಯಸ್ಸಿನ ಕಕ್ಷಿದಾರ ಮಹಿಳೆ ಕೋರ್ಟ್ ಒಳಗಡೆ ಬರಲಾರದ ಅಸಹಾಯಕ ಸ್ಥಿತಿಯಲ್ಲಿರುವುದನ್ನು ಪರಿಗಣಿಸಿ ನ್ಯಾಯಾಧೀಶರಾದ ಗಿರೀಶ ಆರ್ .ಬಿ.ಅವರು ಕೋರ್ಟ್ನಿಂದ ಹೊರಬಂದು ಆ ಮಹಿಳೆ ಇರುವಲ್ಲಿಯೇ ಬಂದು ಆಕೆಯ ಹೇಳಿಕೆಗಳನ್ನು ಪಡೆದು ರಾಜೀ ಸಂಧಾನ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ನ್ಯಾಯಾಧೀಶರ ಈ ಮಾನವೀಯ ಕಳಕಳಿಗೆ ನೆರೆದಿದ್ದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು . ಪ್ರಕರಣದ ವಾದಿ ಪರವಾಗಿ ವಕೀಲರಾದ ಎಸ್.ಎಚ್.ಬಳಗನ್ನವರ ಹಾಗೂ ಪ್ರತಿವಾದಿ ಪರ ವಕೀಲರಾದ ಶಕ್ತಿ ಹಿರೇಮಠ ವಕಾಲತ್ತು ವಹಿಸಿದ್ದರು.
ಸಿಟಿ ರವಿ ಹೇಳಿಕೆ ಸತ್ಯಶೋಧನೆ ಆಗುವ ಮೊದಲು ಯಾವುದೇ ನಿರ್ಧಾರಕ್ಕೆ ಬರುವುದು ತಪ್ಪು- ಸಂಸದ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಪೊಲೀಸ್ ದುರ್ಬಳಕೆ ಹೆಚ್ಚಾಗುತ್ತಿದೆ ಬಸವರಾಜ ಬೊಮ್ಮಾಯಿ ನವದೆಹಲಿ ಡಿ.21 : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರು ಸದನದಲ್ಲಿ ಅವಾಚ್ಯವಾಗಿ ಹೇಳಿಕೆ ನೀಡಿದ್ದಾರೊ ಇಲ್ಲವೊ ಎಂಬುದರ ಸತ್ಯಶೋಧನೆ ಆಗಬೇಕು. ತನಿಖೆ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ…