ಧಾರವಾಡ : ಧಾರವಾಡದಲ್ಲಿ ಕಳೆದ ಹಲವು ವರ್ಷಗಳಿಂದ ರಿಯಲ್ ಎಸ್ಟೆಟ್ ವ್ಯವಹಾರ ನಡೆಸುತ್ತಿದ್ದ ಗಿರೀಶ್ ಕರಡಿಗುಡ್ಡ ಎಂಬಾತನನ್ನು ಹಾಡಹಗಲೇ ಮನೆಗೆ ನುಗ್ಗಿ ಕೊ* ಮಾಡಿದ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮನೆಯಲ್ಲಿ ಕುಳಿತುಕೊಂಡಿದ್ದಾಗ ಒಳನುಗ್ಗಿರುವ ಕಿರಾತಕರು ಚಾಕು, ತಲ್ವಾರ್ ನಿಂದ ಕೊಚ್ಚಿ ಕೊ* ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದಾಗಿ ಗರಗ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು ಕೊ*ಗೆ ನಿಖರ ಕಾರಣ ಈವರೆಗೆ ತಿಳಿದುಬಂದಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಧಾರವಾಡ ತಾಲೂಕಿನ ಗರಗ
ಠಾಣೆ ಪೊಲೀಸರು ಕೊಲೆಗೆ ಕಾರಣ, ಕಿರಾತಕರ ಬಂಧಿಸಲು ತಂಡ ರಚಿಸಲಾಗಿದ್ದು, ಜಾಲ ಬೀಸಿದ್ದಾರೆ