ಧಾರವಾಡ : ಕನಾ೯ಟಕ ವಿಶ್ವವಿದ್ಯಾಲಯದ 71 ನೇ ಅಂತರ್ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಜೆ.ಎಸ್.ಎಸ್ ನ ಅಂಗ ಸಂಸ್ಥೆಯಾದ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯು ವಹಿಸಿಕೊಂಡಿದೆ . ಈ ಕ್ರೀಡಾಕೂಟವು ಇದೇ ದಿ. 12,13,14 ರಂದು ಆರ್.ಎನ್ . ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಲಿದೆ ಎಂದು ಜೆ.ಎಸ್.ಎಸ್ ಕಾಯ೯ದಶಿ೯ ಡಾ.ಅಜೀತ್ ಪ್ರಸಾದ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆ.ಎಸ್.ಎಸ್ ಮಹಾವಿದ್ಯಾಲಯ 1957-58 ಸಾಲಿನಲ್ಲಿ ಪ್ರಥಮ ಬಾರಿಗೆ ಮತ್ತು 62 ವರ್ಷಗಳ ನಂತರ 2019 ರಲ್ಲಿ ಎರಡನೆಯ ಬಾರಿಗೆ ಅಥ್ಲೆಟಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಿಕೊಂಡಿತ್ತು . ಇದೀಗ ಮೂರನೇ ಬಾರಿಗೆ ಈ ಪ್ರತಿಷ್ಠಿತ ಕ್ರೀಡಾಕೂಟವನ್ನು ಆಯೋಜಿಸುವ ಮಹತ್ತರ ನಿರ್ಧಾರವನ್ನು ಜೆ.ಎಸ್.ಎಸ್ ಸಂಸ್ಥೆ ಮಾಡಿದೆ . 71 ನೇ ಅಥ್ಲೆಟಿಕ್ಸ್ ಕ್ರೀಡಾಕೂಟದ ವಿಶೇಷತೆಗಳು 150 ಕ್ಕಿಂತಲೂ ಹೆಚ್ಚು ಕಾಲೇಜುಗಳಿಂದ ಸುಮಾರು 900 ಕ್ಕಿಂತಲೂ ಹೆಚ್ಚು ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದರು.
ಕ್ರೀಡಾಪಟುಗಳಿಗೆ , ತರಬೇತುದಾರರಿಗೆ ವಸತಿ , ಊಟ ಹಾಗೂ ಸಾರಿಗೆ ವ್ಯವಸ್ಥೆಯನ್ನು ಜೆ.ಎಸ್.ಎಸ್ ಸಂಸ್ಥೆ ನೋಡಿಕೊಳ್ಳುತ್ತದೆ . ಕ್ರೀಡಾಕೂಟದ ಯಶಸ್ಸಿಗೆ ಹಲವಾರು ಕಮಿಟಿಗಳನ್ನು ರಚಿಸಿ ಈಗಾಗಲೇ ಕರ್ತವ್ಯದ ಹಂಚಿಕೆ ಮಾಡಲಾಗಿದೆ . ಕ್ರೀಡಾಕೂಟದ ಉದ್ಘಾಟನೆ ದಿ. 12 ರಂದು 3-30 ಕ್ಕೆ ನಡೆಯಲಿದ್ದು ಉದ್ಘಾಟಕರಾಗಿ ಅಂತರಾಷ್ಟ್ರೀಯ ಕುಸ್ತಿಪಟು , ಇತ್ತೀಚಿಗೆ ಪ್ಯಾರಿಸ್‌ನಲ್ಲಿ ನಡೆದ ಓಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ಹಾಗೂ ಎರಡು ಬಾರಿ ವಿಶ್ವಚಾಂಪಿಯನ್ ಆದ ಹರಿಯಾಣದ ಕುಮಾರಿ ಅಂತಿಮ ಪಂಗಲ್ ಆಗಮಿಸಲಿದ್ದಾರೆ ಎಂದರು.
ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಕ್ರೀಡಾಪಟು ಎಮ್.ಆರ್ ಪಾಟೀಲ್ ಆಗಮಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ, ಶ್ರೀಮತಿ ಶಿವಲೀಲಾ ವಿನಯ ಕುಲಕಣಿ೯ ಆಗಮಿಸಲಿದ್ದಾರೆ. ಕ್ರೀಡಾಂಗಣದಲ್ಲಿ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ . ಕುಸ್ತಿಪಟು ಓಲಂಪಿಯನ್ ಪ್ರತಿ ಕ್ರೀಡೆಯಲ್ಲಿ ವಿಜೇತರಿಗೆ ವಿಶೇಷ ನಗದು ಬಹುಮಾನವನ್ನು ಜೆ.ಎಸ್.ಎಸ್ . ಸಂಸ್ಥೆಯ ಉದ್ಯೋಗಿಗಳು ನೀಡಲಿದ್ದಾರೆ . ಇದರ ಒಟ್ಟು ಮೊತ್ತ 1.50 ಲಕ್ಷ ರೂ ಆಗಿದೆ ಎಂದರು.
ಅತಿ ಹೆಚ್ಚು ಕ್ರೀಡಾಪಟುಗಳು ಕ.ವಿ.ವಿ ತಂಡಕ್ಕೆ ಆಯ್ಕೆಯಾಗಿ ಅಂತರ್ ವಿಶ್ವವಿದ್ಯಾಲಯ ಮಟ್ಟದಲ್ಲಿ ಭಾಗವಹಿಸಿದ 2023-24ನೇ ಸಾಲಿನ ವಿದ್ಯಾರ್ಥಿಗಳ ವಿವರ ಜಿ.ಎಸ್.ಎಸ್ ಪದವಿ ಕಾಲೇಜು 32 ವಿದ್ಯಾರ್ಥಿಗಳು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ 36 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಒಟ್ಟು – 68 – 2009 ರಲ್ಲಿ ಜೆ.ಎಸ್.ಎಸ್ ಪದವಿ ಕಾಲೇಜೊಂದರಿಂದ 58 ವಿದ್ಯಾರ್ಥಿಗಳು ಅಂತ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು . ಇದೊಂದು ದಾಖಲೆಯಾಗಿದೆ. 2006-2007 ರಿಂದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯು ಸತತ 11 ಬಾರಿ ವಿಶ್ವವಿದ್ಯಾಲಯ ಕ್ರೀಡಾಕೂಟದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ . ಪ್ರತಿ ವರ್ಷ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳಿಗೆ ಶಿಷ್ಯವೇತನ , ಉಚಿತ ವಸತಿ – ಊಟ ‘ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳಲ್ಲಿ 2023-24ನೇ ಸಾಲಿನಲ್ಲಿ 40 ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಕ್ರೀಡಾಪಟುಗಳಿಗೆ ಮತ್ತು ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ರೂಪದಲ್ಲಿ ನೀಡಲಾಗಿದೆ . ಕ್ರೀಡಾಪಟುಗಳಿಗೆ ನುರಿತ ತರಬೇತುದಾರಿಂದ ತರಬೇತಿ ನೀಡಲಾಗುತ್ತಿದೆ . ಜೆ.ಎಸ್.ಎಸ್ ಅಡಿಯಲ್ಲಿ 25 ವಿದ್ಯಾ ಸಂಸ್ಥೆಗಳಿದ್ದು , ಪ್ರತಿ ಸಂಸ್ಥೆಯು ಕ್ರೀಡೆಯಲ್ಲಿ ಹಾಗೂ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುತ್ತ ಬಂದಿವೆ . ಹೈಸ್ಕೂಲಿನಿಂದಲೇ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವ ಉದ್ದೇಶದಿಂದ ಖೇಲೋ ಇಂಡಿಯಾ ಎಂಬ ವಿಭಾಗಗಳನ್ನು ಪ್ರಾರಂಭಿಸಲಾಗಿದೆ . ಈಗಾಗಲೇ ಜೆ.ಎಸ್.ಎಸ್ ನಲ್ಲಿ ಒಂದು ಮೈದಾನವನ್ನು ಅಭಿವೃದ್ಧಿ ಪಡಿಸಿ ಕ್ರೀಡಾ ಚಟುವಟಿಕೆಗಳಿಗೆ ಒದಗಿಸಲಾಗಿದೆ . ಇನ್ನೊಂದು ಮೈದಾನದಲ್ಲಿ 400 ಮೀಟರ್ ಟ್ರ್ಯಾಕ್’ನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ . ಜೆ.ಎಸ್.ಎಸ್ ಪ್ರತಿ ವರ್ಷ 15 ಕ್ಕಿಂತಲೂ ಹೆಚ್ಚು ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಗಳನ್ನು ( Tournaments ) ಆಯೋಜಿಸುತ್ತಾ ಬಂದಿದೆ . ನಮ್ಮ ಸಂಸ್ಥೆಯ ಕ್ರೀಡಾಪಟುಗಳ ಸಾಧನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕು . ನಯನಾ ಕೋಕರೆ 19 ವರ್ಷಗಳ ವಿಭಾಗದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ 4X100 ರಿಲೇಯಲ್ಲಿ ಕಂಚಿನ ಪದಕ ಪಡೆದಿರುತ್ತಾಳೆ ಕು . ಅಮೃತ ಮುದರಬೆಟ್ಟ ಜಿಮ್ಯಾಸ್ಟಿಕ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಚಿನ್ನದ ಪದಕ ಹಾಗೂ ಕರ್ನಾಟಕದ ಅತ್ಯುನ್ನತ ಪ್ರಶಸ್ತಿಯಾದ ಏಕಲವ್ಯ ಪ್ರಶಸ್ತಿ ” ಪಡೆದಿರುತ್ತಾನೆ . ಕು . ಭೀಮಾಂಬಿಕಾ ನಸಬಿ ಅಂತ ವಿಶ್ವವಿದ್ಯಾಲಯಗಳ ಜಂಪರೋಪ್‌ನಲ್ಲಿ ಬಂಗಾರ ಪದಕ ಪಡೆದಿರುತ್ತಾಳೆ ಎಂದರು.
ಕು . ಸಹನಾ ಗೋಕಾವಿ ಖೇಲೋ ಇಂಡಿಯಾದಲ್ಲಿ ಟೇಕ್ವಾಂಡೋದಲ್ಲಿ ಕಂಚಿನ ಪದಕ ಪಡೆದಿರುತ್ತಾಳೆ . ಕು . ಮಮತಾ ಬಾಸೂರ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿರುತ್ತಾಳೆ . ಕಾವ್ಯಾ ಶಿವಪುರ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾಳೆ . ಅಕ್ಷತಾ ಗಡಾದ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿರುತ್ತಾಳೆ. ನಯನಾ ಶ್ರೀಲಂಕಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾಳೆ . ಕುಮಾರ , ಅವಿನಾಶ ಮಂಟೂರ ಅಖಿಲ ಭಾರತ ದೇಹಧಾರ್ಡ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿರುತ್ತಾನೆ ಎಂದರು.
ಅಥ್ಲೆಟಿಕ್ಸ್ ಪಟು ಸಿದ್ದಪ್ಪ ಶಿವನೂರ ರೇಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆದಿರುತ್ತಾನೆ . ವಾಲ್ಡಿಬಾಲ್ ಆಟಗಾರ ವಿನೋದ ಕಾಪಸೆ ಲೆಫ್ಟಿನಂಟ್ ಕರ್ನಲ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ . ಕುಸ್ತಿಪಟು ಭಗವಂತ ಬೀಳಗಿ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ . ಇನ್ನೂ ಹಲವಾರು ಕ್ರೀಡಾಪಟುಗಳು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಲೇಜಿನ ಸಾಧನೆಯನ್ನು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸೂರಜ ಜೈನ್, ಜೀನಪ್ಪ ಕುಂದಗೋಳ, ಮಹಾವೀರ ಉಪಾಧ್ಯ,ಶ್ರವಣ ಯೋಗಿ ಉಪಸ್ಥಿತರಿದ್ದರು.