# independentsangramnews.com > ಸ್ವತಂತ್ರ ಸಂಗ್ರಾಮದ ಹಾದಿಯಲ್ಲಿ ಹೋರಾಟದ ಅಸ್ತ್ರದ ತತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಚಾನೆಲ್ ಬೆಂಬಲಿಸಿ ಸಹಕರಿಸಿ.. ## Posts - [ಧಾರವಾಡದಲ್ಲಿ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಬೃಹತ್ ರಕ್ತದಾನ ಶಿಬಿ](https://independentsangramnews.com/massive-blood-donation-camp-organized-by-seva-bharati-trust-in-dharwad/): ಧಾರವಾಡ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಹಾಗೂ ಭಗತ್ ಸಿಂಗ್, ಸುಖದೇವ್, ಹಾಗೂ ರಾಜಗುರು ಬಲಿದಾನ ದಿನದ ಅಂಗವಾಗಿ ಸೇವಾ ಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ರಕ್ತ ನಿಧಿ, ಧಾರವಾಡ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಧಾರವಾಡ ಲಿಂಗಾಯತ ಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಸೋಮವಾರ ಆಯೋಜನೆ ಮಾಡಲಾಗಿತ್ತು. ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಣೆಯಿಂದ 1070 ಜನ ಯುವಕರು, ಸ್ಥಳೀಯ ಜನರು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಾರ್ಥಕತೆ ಮೆರೆದರು. ಇದೇ ವೇಳೆ ಸೇವಾ ಭಾರತಿ ಟ್ರಸ್ಟ್ ವತಿಯಿಂದ ರಕ್ತದಾನ ಮಾಡಿದ ಎಲ್ಲರಿಗೂ ಅಭಿನಂದನಾ ಪತ್ರ ವಿತರಣೆ ಮಾಡಲಾಯಿತು. ರಕ್ತದಾನ ಶಿಬಿರದ ದಿವ್ಯ ಸಾನಿಧ್ಯವನ್ನು ನಯಾನಗರದ ಶ್ರೀ ಗುರು ಅಭಿನವ ಸಿದ್ದಲಿಂಗ ಸ್ವಾಮೀಜಿ, ಮನಗುಂಡಿಯ ಬಸವಾನಂದ ಸ್ವಾಮೀಜಿ, ಗರಗ ಕಲ್ಮಠದ ಆತ್ಮರಾಮ ಸ್ವಾಮೀಜಿ ವಹಿಸಿದ್ದರು. ಈ ವೇಳೆ ಸೇವಾ ಭಾರತಿ ಟ್ರಸ್ಟ್ ಉತ್ತರ ಪ್ರಾಂತ ಟ್ರಸ್ಟಿ ಮಂಜುನಾಥ ಮಕ್ಕಳಗೇರಿ, ಸೇವಾ ಭಾರತಿ ಟ್ರಸ್ಟಿ ಶ್ರೀಧರ ನಾಡಿಗೇರ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಇತರರಿದ್ದರು. - [ಪತ್ರಕರ್ತನ ಮೇಲೆ ವಾರ್ತಾ ಇಲಾಖೆ ನೌಕರನಿಂದ ಹಲ್ಲೆ | ಅವಾಚ್ಯ ಶಬ್ದಗಳಿಂದ |](https://independentsangramnews.com/journalist-attacked-by-news-department-employee-suspended-from-service-immediately/): ಧಾರವಾಡ: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮತ್ತು ಪತ್ರಕರ್ತರ ಹಿತರಕ್ಷಣೆ ಮಾಡಬೇಕಾದ ವಾರ್ತಾ ಇಲಾಖೆಯ ನೌಕರನೊಬ್ಬ ಪತ್ರಕರ್ತನೊಬ್ಬನ ಮೇಲೆ ಮೃಗೀಯವಾಗಿ ಹಲ್ಲೆ ನಡೆಸಿರುವ ಘಟನೆ ಧಾರವಾಡದಲ್ಲಿ ಇಂದು ವರದಿಯಾಗಿದೆ. ಇಂದು ಮಧ್ಯಾಹ್ನ ಪತ್ರಿಕೆಯ ಕೆಲಸದ ನಿಮಿತ್ತ ‘ಮೀಡಿಯಾ ಲಿಸ್ಟ್’ (ಮಾಧ್ಯಮ ಪಟ್ಟಿ) ಪಡೆಯಲು ಪತ್ರಕರ್ತ ಚಂದ್ರಶೇಖರ ಹಿರೇಮಠ ಅವರು ಧಾರವಾಡದ ವಾರ್ತಾ ಇಲಾಖೆ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವಾರ್ತಾ ಸಹಾಯಕ ಸುರೇಶ ಮಡಿವಾಳರ ಉರ್ಫ್ ಹಿರೇಮಠ ಎಂಬುವವರು ಚಂದ್ರಶೇಖರ ಅವರ ಮೇಲೆ ಏಕಾಏಕಿ ಎರಗಿದ್ದಾರೆ. ನೌಕರನು, ಪತ್ರಕರ್ತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೆ, ಅವರ ಮೊಬೈಲ್ ಫೋನ್ ಅನ್ನು ಕಿತ್ತೆಸೆದು ಜಖಂಗೊಳಿಸಿದ್ದಾರೆ. ಅಷ್ಟಕ್ಕೇ ನಿಲ್ಲದ ಸುರೇಶ್ ಹಿರೇಮಠ, ಚಂದ್ರಶೇಖರ ಅವರ ಕೊರಳಲ್ಲಿದ್ದ 5 ತೊಲೆ ಬಂಗಾರದ ಚೈನನ್ನು ಕಿತ್ತುಕೊಂಡು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಚೇರಿಯ ಆವರಣದಲ್ಲೇ ಪತ್ರಕರ್ತನ ಮೇಲೆ ಮೃಗನಂತೆ ವರ್ತಿಸಿದ ಅಧಿಕಾರಿಯ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಸಾರ್ವಜನಿಕ ಆಕ್ರೋಶ: ಪತ್ರಕರ್ತರಿಗೆ ರಕ್ಷಣೆ ಮತ್ತು - [ಭಾರತದ ರಾಜ್ಯಗಳ ಪ್ರಾದೇಶಿಕ ನೃತ್ಯ ಸ್ಪರ್ಧೆ](https://independentsangramnews.com/regional-dance-competition-of-indian-states/): ದಿನಾಂಕ 07-02-2026ರಂದು ಮಹಿಳೆಯರಿಗಾಗಿ ಆಯೋಜಿಸಿದ್ದ ಭಾರತದ ರಾಜ್ಯಗಳ ಪ್ರಾದೇಶಿಕ ನೃತ್ಯ ಸ್ಪರ್ಧೆಯಲ್ಲಿ ಎಲ್. ಆಯ್. ಸಿ. ಯ “” ಜೀವನ-ಜ್ಯೋತಿ ” ಮಹಿಳಾ ಮಂಡಳ ಪ್ರಥಮ ಸ್ಥಾನ ಪಡೆಯಿತು… ನೃತ್ಯ ಸಂಯೋಜನೆ ಶ್ರೀಮತಿ ಮೀನಾಕ್ಷಿ ಅರಕೇರಿ ಯವರದಾಗಿತ್ತು. - [ತೀವ್ರ ನಿರಾಶದಾಯಕ ಕೇಂದ್ರ ಬಜೆಟ್‌: ಸಂತೋಷ್‌ ಲಾಡ್‌](https://independentsangramnews.com/extremely-disappointing-union-budget-santosh-lad/): ತೀವ್ರ ನಿರಾಶದಾಯಕ ಕೇಂದ್ರ ಬಜೆಟ್‌: ಸಂತೋಷ್‌ ಲಾಡ್‌ ರೈತರು, ಯುವಜನರ ಅಗತ್ಯ ಈಡೇರಿಸಲು ಬಜೆಟ್‌ ವಿಫಲ ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಈ ಬಾರಿಯ ಬಜೆಟ್‌ ಯಥಾಪ್ರಕಾರ ನಿರಾಶದಾಯಕವಾಗಿದ್ದು, ಕರ್ನಾಟಕದ ದೃಷ್ಟಿಕೋನದಿಂದ ಕೇಂದ್ರ ಬಜೆಟ್‌ನಿಂದ ಯಾವುದೇ ಲಾಭವಾಗಿಲ್ಲ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರು ಹೇಳಿದ್ದಾರೆ. ಕೇಂದ್ರ ಬಜೆಟ್‌ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಹೈಸ್ಪೀಡ್ ರೈಲು ಕಾರಿಡಾರ್‌ನಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಬಡವರಿಗೆ ಯಾವುದೇ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿಲ್ಲ. ಇದು ಪ್ರತಿ ವರ್ಷದಂತೆ ನಿರಾಶದಾಯಕವಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿನ ದಮನಿತರು, ರೈತರು ಮತ್ತು ಯುವಜನರ ಅಗತ್ಯಗಳನ್ನು ಈಡೇರಿಸಲು ಈ ಬಜೆಟ್‌ ವಿಫಲವಾಗಿದೆ. ಬದಲಾಗಿ ಶ್ರೀಮಂತರು ಮತ್ತು ಸಾಮಾನ್ಯ ಜನರ ನಡುವಿನ ಆರ್ಥಿಕ ಅಂತರವನ್ನು ಮತ್ತಷ್ಟು ಹೆಚ್ಚಿಸುವ ಅಪಾಯವನ್ನು ಸೃಷ್ಟಿಸಿದೆ ಎಂದು ಪ್ರತಿಕ್ರಿಯಸಿದ್ದಾರೆ. ಕರ್ನಾಟಕ ಸರ್ಕಾರವು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕು ಮತ್ತು - [ಇದು ಒಂದು ಪರಿಪೂರ್ಣ ಬಜೆಟ್ : ಎಮ್.ಆರ್.ಪಾಟೀಲ್](https://independentsangramnews.com/a-perfect-budget-m-r-patil/): ಹುಬ್ಬಳ್ಳಿ: ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರೈತರ ಆದಾಯವನ್ನು ದ್ವಿಗುಣಗೊಳಿಸಲು ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗಿದೆ, ದಿನದಿಂದ ದಿನಕ್ಕೆ ನಗರಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಇದನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ ಸೌಕರ್ಯಗಳ ಒದಗಿಸುವಿಕೆ, ರೈಲ್ವೆ ಸಂಪರ್ಕ, ರಸ್ತೆಗಳ ನಿರ್ಮಾಣ ಇವುಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಜನಸಾಮಾನ್ಯರ ದೈನಂದಿನ ಜೀವನ ಸುಲಭವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಎಮ್.ಆರ್.ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2026 – 27 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದು, ಇದು ಅತ್ಯಂತ ಪ್ರಬುದ್ಧವಾದ ಬಜೆಟ್, ಇದನ್ನು ನಾನು ಅತ್ಯಂತ ಸಂತಸದಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ. ದೇಶದ ಅಭಿವೃದ್ಧಿಯ ದೃಷ್ಟಿಕೋನ ಇದರಲ್ಲಿ ಕಂಡು ಬರುತ್ತದೆ, ಈ ಬಜೆಟ್ ಎಲ್ಲ ವಲಯಗಳನ್ನು ಒಳಗೊಂಡು ಒಂದು ಪರಿಪೂರ್ಣ ಬಜೆಟ್ ಆಗಿದೆ, ಬಜೆಟ್ ಹೀಗೆ - [2026-27ನೇ ಸಾಲಿನ ಬಜೆಟ್ ಸಾಮಾನ್ಯ ಜನರ ಸಂಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ : ಶಿವಲೀಲಾ ವಿನಯ ಕುಲಕರ್ಣಿ](https://independentsangramnews.com/budget-2026-27-has-not-responded-to-the-hardships-of-the-common-people-shivleela-vinay-kulkarni/): ಕೇಂದ್ರ ಹಣಕಾಸು ಸಚಿವರು ಇಂದು ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಸಂಪೂರ್ಣವಾಗಿ “ನೀರಸ” ಹಾಗೂ ದಿಕ್ಕು ದೆಸೆಯಿಲ್ಲದ ಬಜೆಟ್ ಆಗಿದೆ. ಇದು ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ಸಾಮಾನ್ಯ ಜನರ ಸಂಕಷ್ಟಗಳಿಗೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದ  ಶಿವಲೀಲಾ ವಿನಯ ಕುಲಕರ್ಣಿ ಅವರು ಕಿಡಿಕಾರಿದ್ದಾರೆ. ಪ್ರಕಟಣೆಯ ಪ್ರಮುಖ ಅಂಶಗಳು: * ನಗರ ಮೂಲಸೌಕರ್ಯದ ಕಡೆಗಣನೆ: ಕರ್ನಾಟಕದ ನಗರ ಪ್ರದೇಶಗಳು ವೇಗವಾಗಿ ಬೆಳೆಯುತ್ತಿವೆ. ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಕೇಂದ್ರದಿಂದ ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿತ್ತು. ಆದರೆ, ನಗರ ನೀರು ಸರಬರಾಜು ಯೋಜನೆಗಳಿಗೆ ಯಾವುದೇ ಹೆಚ್ಚಿನ ಅನುದಾನ ನೀಡದೆ ಕೇಂದ್ರ ಸರ್ಕಾರವು ಕರ್ನಾಟಕದ ನಗರವಾಸಿಗಳಿಗೆ ಅನ್ಯಾಯ ಮಾಡಿದೆ. * ತೆರಿಗೆದಾರರಿಗೆ ಚೊಂಬು: ವರ್ಷವಿಡೀ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಧ್ಯಮ ವರ್ಗದ ಜನರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದು ಎಂಬ ಆಸೆ ಇತ್ತು. ಆದರೆ, ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಶ್ರಮಜೀವಿಗಳ - [ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ : ಸಲೀಂ ಅಹ್ಮದ್](https://independentsangramnews.com/a-budget-of-shortsighted-declarations-salim-ahmed/): ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ : ಸಲೀಂ ಅಹ್ಮದ್ ಇಂದು ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ಕುರಿತು ಮಾತನಾಡಿದ ಕರ್ನಾಟಕ ವಿಧಾನ ಪರಿಷತ್ ನ ಸರ್ಕಾರಿ ಮುಖ್ಯ ಸಚೇತಕರಾದ ಶ್ರೀ ಸಲೀಂ ಅಹ್ಮದ್ ರವರು, ಇಂದಿನ ಬಜೆಟ್ ದೂರದೃಷ್ಟಿ ಇಲ್ಲದ ಘೋಷಣೆಗಳ ಬಜೆಟ್ ಆಗಿದೆ. ಬಜೆಟ್ ಕೇವಲ ಪದಗಳಿಂದ ತುಂಬಿತ್ತು.ದೇಶದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ದಿಕ್ಸೂಚಿಯಿಲ್ಲ.. ಈ ಬಜೆಟ್ ನಲ್ಲಿ ದಕ್ಷಿಣ ಭಾರತ ಹಾಗೂ ಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ.. ರೈತರಿಗೆ ಮತ್ತು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಇಲ್ಲ.. ರಾಜ್ಯದ ನೀರಾವರಿ ಯೋಜನೆ ಬಗ್ಗೆ ಪ್ರಸ್ತಾಪವಿಲ್ಲ. ಯುವಕರಿಗೆ ಉದ್ಯೋಗದ ಸ್ರಷ್ಟಿ ನೀಡುವಲ್ಲಿ ವಿಫಲ.. ಒಟ್ಟಾರೆ ದೇಶದ ರಾಜ್ಯದ ಹಿತದ್ರಷ್ಟಿಯಿಂದ ಯಾವುದೇ ಮಹತ್ವವಿಲ್ಲದ ಬಜೆಟ್ ಇದಾಗಿದೆ ಎಂದು ಸಲೀಂ ಅಹ್ಮದ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. - [ಕರಿಯಮ್ಮ ದೇವಿಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮ](https://independentsangramnews.com/first-anniversary-celebration-of-goddess-kariamma/): ಧಾರವಾಡ : ನೆನ್ನೆ ನಡೆದ ನಮ್ಮ ಬಡಾವಣೆಯ,ಸಡಗರದಿಂದ ಜರುಗಿತು . ಬೆಳಿಗ್ಗೆ 7.30 ರಿಂದ ಪ್ರಾರಂಭವಾದ ಪೂಜಾ ಕಾರ್ಯಕ್ರಮ ರುದ್ರಾಭಿಷೇಕ, ಅಷ್ಟೋತ್ತರ ನಾಮವಳಿ, ದುರ್ಗಾ ಹೋಮ ಪೂಜೆ ,ಮಹಾಮಂಗಳಾರತಿ. ನಂತರ ಮಧ್ಯಾಹ್ನ ನಡೆದ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಸುಮಾರು 2,500 ಜನ ಭಾಗವಹಿಸಿ ಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ದಲ್ಲಿ ಪಾಲ್ಗೊಂಡಿದ್ದರು. ಸಂಜೆ ನಡೆದ ಕಾರ್ಯಕ್ರಮದಲ್ಲಿ  ಸುಮಾರು 500 ಜನಕ್ಕೂ ಹೆಚ್ಚು ಮಹಿಳೆಯರು ಕುಂಕುಮಾರ್ಚನೆ, ಲಲಿತಾ ಸಹಸ್ರ ನಾಮವಳಿ, ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾತ್ರಿ ನಡೆದ ಕಾರ್ಯಕ್ರಮದ ಲ್ಲಿ ಅಳಗಿರಿ ನಂದಿನೀ ನೃತ್ಯ ರೂಪಕ ಎಲ್ಲರ ಮನಸೆಳೆಯಿತು. ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಶ್ರೀಮತಿ ನೇಕಾರ, ಇನ್ನಿತರರು ಎಲ್ಲರ ಮನಸನ್ನು ಮುದಗೊಳಿಸಿದರು.   ಸಂಘದ ಅಧ್ಯಕ್ಷರಾದ ಶ್ರೀ ಅಶೋಕ ನಾಗಸಮುದ್ರ ಕೂಡ ಈ ಸಂಧರ್ಭದಲ್ಲಿ. ಸಂಗೀತ ಗಾಯನ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ನಮ್ಮ ವಾರ್ಡಿನ ಮಾಜಿ ಮಹಾಪೌರರು,ಹಾಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಶಿವು ಹಿರೇಮಠ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ - [ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪರಿಚಯಿಸಿದವರು ಸ್ವಾಮೀ ವಿವೇಕಾನಂದರು- ಈರೇಶ ಅಂಚಟಗೇರಿ](https://independentsangramnews.com/%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%86%e0%b2%a7%e0%b3%8d%e0%b2%af%e0%b2%be%e0%b2%a4%e0%b3%8d%e0%b2%ae%e0%b2%bf%e0%b2%95-%e0%b2%b6%e0%b2%95%e0%b3%8d%e0%b2%a4%e0%b2%bf%e0%b2%af%e0%b2%a8/): ಧಾರವಾಡ : ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ ಇದು ಅತ್ಯಂತ ಸಂತೋಷದ ವಿಷಯ ಎಂದು, ಮೇಯರ್ ಜೋತ್ಯಿ ಪಾಟೀಲ ತಿಳಿಸಿದರು. ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಪೂಜ್ಯ ಮಹಾಪೌ ಜ್ಯೋತಿ ಪಾಟೀಲ, ಮಾಜಿಮಹಾಪೌರರು ಸಭಾನಾಯಕರು ಈರೇಶ ಅಂಚಟಗೇರಿ ಗಣ್ಯಮಾನ್ಯರು ವಿವೇಕಾನಂದರ ಪುತ್ಥಳಿಗೆ ಮಾಲಾರ್ಪಣೆಗೈದು ಪುಷ್ಪನಮನಗಳನ್ನ ಸಲ್ಲಿಸಿ ಮಾತನಾಡಿದ ಅಂಚಟಗೇರಿ ಅವರು, ಶಿಸ್ತಿಗೆ ಮತ್ತೊಂದು ಹೆಸರು ಸ್ವಾಮಿ ವಿವೇಕಾನಂದರು. ಅವರ ಆದರ್ಶಗಳನ್ನು ಮಾವು ರೂಢಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಖರ ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲಸಂತ ಸ್ವಾಮಿ ವಿವೇಕಾನಂದರ ಜನ್ಮದಿನದ ಶುಭಾಷಯಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶಂಬು ಸಾಲಿಮನಿ, ರವಿ ಯಲಿಗಾರ, ಉದಯ ಯಂಡಿಗಿರಿ, ಪಾಲಿಕೆ ಅಧಿಕಾರಿಗಳು, ಉಮೇಶ ಸವಣೂರ ಪರಿಷತ್ ಕಾರ್ಯದರ್ಶಿ ,ವಲಯ ಅಧಿಕಾರಿಗಳಾದ ಅರವಿಂದ ಜಮಖಂಡಿ, ಶಂಕರಗೌಡ ಪಾಟೀಲ, - [ಡಿಜಿಟಲ್ ತಂತ್ರಜ್ಞಾನದ ಪರಿವರ್ತನೆಯಿಂದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ ಎಂದು ಅಮೇರಿಕಾದ ಸ್ಟೋನ್ ಹಿಲ್ ಕಾಲೇಜಿನ ಸ್ಟಾಟಜಿಕ್ ಅಡ್ವೈಸರ ಡಾ.ಶ್ರೀರಾಮ ಬೆಲ್ಡೋನಾ](https://independentsangramnews.com/darpan-2026-golden-jubilee-program/): ಡಿಜಿಟಲ್ ತಂತ್ರಜ್ಞಾನದ ಪರಿವರ್ತನೆಯಿಂದ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗುತ್ತಿದೆ ಎಂದು ಅಮೇರಿಕಾದ ಸ್ಟೋನ್ ಹಿಲ್ ಕಾಲೇಜಿನ ಸ್ಟಾಟಜಿಕ್ ಅಡ್ವೈಸರ ಡಾ.ಶ್ರೀರಾಮ ಬೆಲ್ಡೋನಾ ಹೇಳಿದರು ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ‌ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ 50 ವರ್ಷದ ಸಂಭ್ರಮಾಚರಣೆಯ ನಿಮಿತ್ತವಾಗಿ ಕಿಮ್ಸ್ ಆವರಣದಲ್ಲಿ ಆಯೋಜಿಸಿದ ‘ದರ್ಪಣ್-2026 ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ‌ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು. ಪ್ರಸ್ತುತ ಕಲಿಕೆಯಲ್ಲಿ ಬೋಧನಾ ವಿಧಾನಗಳು ಬದಲಾಗುತ್ತಿದ್ದು, ಡಿಜಿಟಲ್ ತಂತ್ರಜ್ಞಾನ ಹೆಚ್ಚು ಮುನ್ನಲೆಗೆ ಬಂದಿದ್ದು, ಇಂದು ಸಮಾಜಿಕ ಮಾಧ್ಯಮ ತಂತ್ರಜ್ಞಾನವು ಹೆಚ್ಚು ಅವಕಾಶಗಳನ್ನು ಒದಗಿಸುತ್ತದೆ ಎಂದ ಅವರು ಕರ್ನಾಟಕ ವಿಶ್ವವಿದ್ಯಾಲಯ ಕೌಸಾಳಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ ನನ್ನಲ್ಲಿ ಪರಿವರ್ತನೆ ತಂದಿದೆ ಎಂದರು.   ಎಂಬತ್ತರ ದಶಕದ ವ್ಯವಹಾರದ ಶಿಕ್ಷಣವು ಸಾಂಪ್ರದಾಯಿಕ ಬೋಧನಾ ವಿಧಾನವನ್ನು ಒಳಗೊಂಡಿತ್ತು ಈಗ ತಂತ್ರಜ್ಞಾನದ ಸಹಾಯದಿಂದ ಬೋಧನೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಪ್ರಸ್ತುತ ಭಾರತದಲ್ಲಿ 6500 ಕ್ಕಿಂತ ಹೆಚ್ಚು ವಿವಿಧ ಬಿಸಿನೆಸ್ ಕೋರ್ಸ್ ಗಳು ಲಭ್ಯವಿವೆ ಅವುಗಳಲ್ಲಿ ಪ್ರಸ್ತುತ ವ್ಯವಹಾರದ ಸ್ಥಿತಿ ಗತಿಯನ್ನು - [ಮಾಳಮಡ್ಡಿಯಲ್ಲಿ ಮೂರು ಅಂಗಡಿಗಳು ಸುಟ್ಟು ಕರಕಲು.](https://independentsangramnews.com/three-shops-burnt-down-in-malamaddi/): ಮಾಳಮಡ್ಡಿಯಲ್ಲಿ ಮೂರು ಅಂಗಡಿಗಳು ಸುಟ್ಟು ಕರಕಲು. ಧಾರವಾಡ : ನಗರದ ಮಾಳಮಡ್ಡಿ ಬಡಾವಣೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಹಣ್ಣು ಅಂಗಡಿ ಸೇರಿ ಮೂರು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಈ ಅವಘಡದಲ್ಲಿ ಭಾರೀ ನಷ್ಟ ಸಂಭವಿಸಿದರೂ, ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಮಾಳಮಡ್ಡಿ ಬಡಾವಣೆಯ ವಾಣಿಜ್ಯ ಪ್ರದೇಶದಲ್ಲಿರುವ ಅಂಗಡಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ವೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸ್ಥಳೀಯರು ವಾಯುವಿಹಾರಕ್ಕೆ ಬಂದವರು ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ತಕ್ಷಣವೇ ನೀರು ಹಾಗೂ ಇತರ ಲಭ್ಯವಿದ್ದ ಸಾಧನಗಳ ಸಹಾಯದಿಂದ ಬೆಂಕಿ ಆರಿಸಲು ಯತ್ನಿಸಿದ್ದಾರೆ. - [ವಿಜಯಪುರದಲ್ಲಿ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟನೆ](https://independentsangramnews.com/protest-in-mummigatti-against-the-arrest-of-bhagwan-reddy-and-other-leaders-in-vijayapura/): ವಿಜಯಪುರದಲ್ಲಿ ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟನೆ. ಧಾರವಾಡ : ಭಗವಾನ್ ರೆಡ್ಡಿ ಹಾಗೂ ಇತರ ನಾಯಕರ ಬಂಧನವನ್ನು ಎಐಕೆಕೆಎಮ್ಎಸ್ ಜಿಲ್ಲಾ ಸಮಿತಿಯಿಂದ ವಿರೋಧಿಸಿ ಮುಮ್ಮಿಗಟ್ಟಿಯಲ್ಲಿ ಪ್ರತಿಭಟಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಉಪಾಧ್ಯಕ್ಷೆ ವಿ ನಾಗಮ್ಮಾಳ್ ರವರು ಮಾತನಾಡಿದರು. ಅಧ್ಯಕ್ಷತೆಯನ್ನ ಜಿಲ್ಲಾ ಅಧ್ಯಕ್ಷೆ ದೀಪಾ ಧಾರಾವಾಡ ವಹಿಸಿದ್ದರು. ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಎಐಕೆಕೆಎಮ್ಎಸ್ ಅಖಿಲ ಭಾರತ ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿಯಾದ ಭಗವಾನ್ ರೆಡ್ಡಿ ಅವರ ಬಂಧನವನ್ನು ತೀವ್ರವಾಗಿ ಖಂಡಿಸುತ್ತದೆ. ಭಗವಾನ್ ರೆಡ್ಡಿ ಅವರು ವಿಜಯಪುರ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿ ಮತ್ತು ಕೋರ್ ಕಮಿಟಿ ಸದಸ್ಯರಾಗಿದ್ದು, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ, ಸರ್ಕಾರ ಜಾರಿಗೊಳಿಸಲು ಹೊರಟಿರುವ ಪಿಪಿಪಿ (ಸಾರ್ವಜನಿಕ–ಖಾಸಗಿ ಸಹಭಾಗಿತ್ವ) ಮಾದರಿಯನ್ನು ವಿರೋಧಿಸುವ ದೀರ್ಘಕಾಲೀನ ಜನಾಂದೋಲನವನ್ನು ಮುನ್ನಡೆಸುತ್ತಿರುವ ಪ್ರಮುಖ ನಾಯಕರಾಗಿದ್ದಾರೆ. ಸರ್ಕಾರ ಜನರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರಂತರವಾಗಿ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ, - [ಅದ್ದೂರಿಯಾಗಿ ನೆರವೇರಿದ ಶ್ರೀ ಬನಶಂಕರಿ ದೇವಿ ಪಲಕ್ಕಿ ಉತ್ಸವ - ಜಾತ್ರಾ ಮಹೋತ್ಸವ](https://independentsangramnews.com/sri-banashankari-devi-palakki-festival-jatra-mahotsav-celebrated-with-grandeur/): ಅದ್ದೂರಿಯಾಗಿ ನೆರವೇರಿದ ಶ್ರೀ ಬನಶಂಕರಿ ದೇವಿ ಪಲಕ್ಕಿ ಉತ್ಸವ – ಜಾತ್ರಾ ಮಹೋತ್ಸವ. ಧಾರವಾಡ : ಬನದ ಹುಣ್ಣಿಮೆ ನಿಮಿತ್ತವಾಗಿ ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಇಂದು ಶ್ರೀ ಬನಶಂಕರಿ ದೇವಿ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ , ಹೋಮ, ಹವನ ಹಾಗೂ ದೇವಿಗೆ ವಿಶೇಷ ಪೂಜೆ ಮಂತ್ರಪಠಣ ನಡೆದವು. ಶಹರ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡರ ಪಲ್ಲಕ್ಕಿ ಉತ್ಸವದ ಪೂಜೆ ನೇರವೇರಿಸಿದರು. ಶ್ರೀ ಧರ್ಮಶಾಸ್ರ ಸಮಿತಿಯ ರಮೇಶ್ ಪಾತ್ರೊಟ್ ಗುರೂಜಿ ಇವರಿಂದ ಧಾರ್ಮಿಕ ವಿಧಿ- ವಿಧಾನ ಕಾರ್ಯಕ್ರಮ ಜರುಗಿತು. ನಂತರ ನಡೆದ ಪಲ್ಲಕ್ಕಿ ಉತ್ಸವವು ವಿವಿಧ ಬಡಾವಣೆ ಮೂಲಕ ಸಂಚರಿಸಿ ಮರಳಿ ದೇವಸ್ಥಾನ ತಲುಪಿತು. ಈ ಸಂದರ್ಭದಲ್ಲಿ ಜಾಂಝ, ಭಜನೆ, ಕಲಾ ಮೇಳಗಳು ಭಾಗವಹಿಸಿ ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದವು. ಸಂಚಾರಿ ಪೋಲೀಸ್ ಠಾಣೆಯ ಅಧಿಕಾರಿ ವಿರೇಶ ಬಳ್ಳಾರಿ ಪಲ್ಲಕ್ಕಿ ಉತ್ಸವಕ್ಕೆ ಹಾಗೂ ಸೀತಾ - [ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಮರ್ಯಾದೆ ಗೇಡು ಹತ್ಯೆಗಳ ವಿರೋಧ ಎಐಡಿಎಸ್ಓ ಪ್ರಚಾರ](https://independentsangramnews.com/aidsso-campaign-against-honour-killings-on-savitribai-phules-birth-anniversary/): ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಮರ್ಯಾದೆ ಗೇಡು ಹತ್ಯೆಗಳ ವಿರೋಧ ಎಐಡಿಎಸ್ಓ ಪ್ರಚಾರ. ಧಾರವಾಡ : ನವೋದಯದ ಮಹಾನ್ ವ್ಯಕ್ತಿತ್ವ ಸಾವಿತ್ರಿಬಾಯಿ ಅವರ 195 ನೇ ಜನ್ಮದಿನವನ್ನು ಇಂದು ಧಾರವಾಡದ ವಿವಿಧ ಮೈದಾನ, ಶಾಲೆಗಳು, ಹಾಸ್ಟೆಲ್ ಹಾಗೂ ಬಡಾವಣೆಗಳಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಾವಿತ್ರಿಬಾಯಿ ಫುಲೆ ಅವರು ಕೇವಲ ಶಾಲೆಯನ್ನು ತೆರೆಯಲಿಲ್ಲ. ಬದಲಾಗಿ ಸಾವಿರಾರು ವರ್ಷಗಳ ಶೋಷಣೆ ವಿರುದ್ಧ ಕೇವಲ ಒಂದು ಪುಸ್ತಕ ಮತ್ತು ಎದೆಯ ತುಂಬಾ ಧೈರ್ಯವನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಯುದ್ಧವನ್ನೇ ಸಾರಿದರು. ಅವರು ಪುಣೆಯ ಬೀಡೆವಾಡ ಶಾಲೆಗೆ ನಡೆದುಕೊಂಡು ಹೋಗುವಾಗ ಜನ ಅವರಿಗೆ ಹೆಸರು ಸಗಣಿ ಮತ್ತು ಕಲ್ಲುಗಳನ್ನ ಎಸೆದಿದ್ದಾರೆ ಆದರೆ ಅವರು ಯಾವುದೇ ಅವಮಾನಕ್ಕೆ ಹೆದರದೆ ಅಂದು ಹೆಣ್ಣುಮಕ್ಕಳು ಹಾಗೂ ಕೆಳ ವರ್ಗದ ಮಕ್ಕಳಿಗಾಗಿ ಶಾಲೆಗಳನ್ನು ತೆರೆದರು. ಆದರೆ ಇಂದು ಸರ್ಕಾರ ಇಂಥ ಮಹಾನ್ ವ್ಯಕ್ತಿಗಳ ಆಶಯವನ್ನು ಗಾಳಿಗೆ ತೂರಿ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯದಲ್ಲಿ 40,000 ಸರ್ಕಾರಿ - [ತ್ರಿಪುರಾ ಯುವ ವಿನಿಮಯ ಕಾರ್ಯಕ್ರಮಕ್ಕೆ ಜೆ. ಎಸ. ಎಸ. ಕೆ. ಹೆಚ್. ಕೆ. ತಾಂತ್ರಿಕ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು](https://independentsangramnews.com/j-s-s-k-h-k-institute-of-technical-education-students-for-tripura-youth-exchange-program/): ತ್ರಿಪುರಾ ಯುವ ವಿನಿಮಯ ಕಾರ್ಯಕ್ರಮಕ್ಕೆ ಜೆ. ಎಸ. ಎಸ. ಕೆ. ಹೆಚ್. ಕೆ. ತಾಂತ್ರಿಕ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು. ಧಾರವಾಡ : ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ , ಈಶಾನ್ಯ ರಾಜ್ಯಗಳ ಅಭಿವೃದ್ಧಿ ಮಂತ್ರಾಲಯದ ಅಷ್ಟಲಕ್ಷ್ಮಿ ದರ್ಶನ 15 ದಿನಗಳ ಯುವ ವಿನಿಮಯ ಕಾರ್ಯಕ್ರಮಕ್ಕೆ, ತಾಂತ್ರಿಕ ಶಿಕ್ಷಣ ಇಲಾಖೆಯ ವತಿಯಿಂದ ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಸಮಿತಿಯ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯ, ವಿವಿಧ ವಿಭಾಗಗಳ 5 ವಿದ್ಯಾರ್ಥಿನಿಯರು ಮತ್ತು 5 ವಿದ್ಯಾರ್ಥಿಗಳು ಒಟ್ಟು 10 ಜನ ವಿದ್ಯಾರ್ಥಿಗಳು ಹಾಗೂ ಎನ್. ಎಸ್. ಎಸ್. ಕಾರ್ಯಕ್ರಮ ಅಧಿಕಾರಿ ಶಿವರಾಜ ದಾನವಾಡ್ಕರ್ ಅವರ ನೇತೃತ್ವದಲ್ಲಿ, ತ್ರಿಪುರಾ ರಾಜ್ಯದ, ಕೇಂದ್ರೀಯ ವಿಶ್ವವಿದ್ಯಾಲಯ ಅಗರ್ತಲಾದಲ್ಲಿ ನಡೆಯುವ 15 ದಿನಗಳ ಈ ಕಾರ್ಯಕ್ರಮಕ್ಕೆ, ದಿನಾಂಕ 4 ಜನವರಿ 2026ರಂದು, ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಹುಬ್ಬಳ್ಳಿ ಇಂದ ವಿಮಾನದ ಮೂಲಕ ಪ್ರಯಾಣ ಬೆಳೆಸಿ ಪಾಲ್ಗೊಳ್ಳುತ್ತಾರೆ. ಯುವ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ, ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ - [ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿಬಾಯಿ ಫುಲೆರವರ ಜನ್ಮದಿನದ ಅಂಗವಾಗಿ ಎಐಎಮ್ಎಸ್ಎಸ್ ನಿಂದ ಕಾರ್ಯಕ್ರಮ.](https://independentsangramnews.com/aimss-organized-a-program-to-mark-the-birth-anniversary-of-savitribai-phule-the-pioneer-of-womens-education-in-india/): ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿಬಾಯಿ ಫುಲೆರವರ ಜನ್ಮದಿನದ ಅಂಗವಾಗಿ  ಎಐಎಮ್ಎಸ್ಎಸ್ ನಿಂದ ಕಾರ್ಯಕ್ರಮ. ಧಾರವಾಡ :  ‘ಅಕ್ಷರದವ್ವ, ಭಾರತದಲ್ಲಿ ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿಬಾಯಿ ಫುಲೆ’ರವರ 195 ನೇ ಜನ್ಮ ದಿನದ ಅಂಗವಾಗಿ ಇಂದು ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ಗ್ರಾಮದ ನರೇಗಾ ಕೂಲಿ ಕಾರ್ಮಿಕರ ನಡುವೆ ಕಾರ್ಯಕ್ರಮ ಮಾಡಲಾಯಿತು. ಅದನ್ನು ಉದ್ದೇಶಿಸಿ ಎಐಎಮ್ಎಸ್ಎಸ್ ನ ಜಿಲ್ಲಾ ಅಧ್ಯಕ್ಷರಾದ ಮಧುಲತಾ ಗೌಡರ್ ಮಾತನಾಡುತ್ತ ‘ಸುಮಾರು 200 ವರ್ಷಗಳ ಹಿಂದೆ ಮಹಿಳೆಯನ್ನು ಮನುಷ್ಯಳೆಂದೇ ಪರಿಗಣಿಸದ ಸಮಾಜದಲ್ಲಿ, ಒಬ್ಬ ಮಹಿಳೆಯಾಗಿ ಓದು ಬರಹ ಕಲಿತು, ಅದನ್ನೇ ಜ್ವಾಲೆಯಾಗಿ ಹಿಡಿದುಕೊಂಡು ಮುನ್ನಡೆದ ಧೀಮಂತ ಮಹಿಳೆ ಸಾವಿತ್ರಿಬಾಯಿ ಪುಲೆ. ನಮಾನತೆಯ ಕಲ್ಪನೆ ಇನ್ನೂ ಸಮಾಜದಲ್ಲಿ ಸ್ಪಷ್ಟವಾಗಿ ಬೇರೂರುವ ಮೊದಲೇ ಶಿಕ್ಷಣದ ಮಹತ್ವ ಅರಿತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ದಿಟ್ಟ ವ್ಯಕ್ತಿತ್ವ ಅವರದು ಜಾತಿ-ಲಿಂಗ ತಾರತಮ್ಯ, ಅಸ್ಪೃಶ್ಯತೆ, ಬಾಲ್ಯ ವಿವಾಹ, ವಿಧವಾ ದೌರ್ಜನ್ಯ, ಮಹಿಳಾ ಅನಕ್ಷರತೆಯಂತಹ ಹಲವು ಅಮಾನವೀಯ ಧೋರಣೆಗಳ ವಿರುದ್ಧ ಸಮರ ಸಾರಿ, ಲಿಂಗ - [ಬಾಂಗ್ಲಾದೇಶ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಲ್ಲೆ - ಜಯ ಕರ್ನಾಟಕ ಬೃಹತ್ ಪ್ರತಿಭಟನೆ](https://independentsangramnews.com/attack-on-minority-hindus-in-bangladesh-jaya-karnataka-massive-protest/): ಬಾಂಗ್ಲಾದೇಶ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಲ್ಲೆ – ಜಯ ಕರ್ನಾಟಕ ಬೃಹತ್ ಪ್ರತಿಭಟನೆ   ಧಾರವಾಡ  : ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಲ್ಲೆ, ಹತ್ಯೆ ಹಾಗೂ ದೌರ್ಜನ್ಯ ಖಂಡಿಸಿ, ಹಾಗೂ ಅಲ್ಲಿ ಹಿಂದೂಗಳ ರಕ್ಷಣೆ ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜತಾಂತ್ರಿಕ ಒತ್ತಡ ಹೇರಲು ಹಾಗೂ ಕ್ರಮ ಕೈಗೊಳ್ಳಲು ಒತ್ತಾಯಿಸಿ ಧಾರವಾಡ ಜಿಲ್ಲೆಯ ಜಯಕರ್ನಾಟಕ ಸಂಘಟನೆ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ ಮಂತ್ರಿಗೆ ಮನವಿ ಅರ್ಪಿಸಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಸುಧೀರ ಎಂ ಮುಧೋಳ ಮಾತನಾಡಿ, ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಮುಖಂಡ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಗುರುವಾರ ಮತ್ತೊಬ್ಬ ಹಿಂದೂ ವ್ಯಕ್ತಿಯ ಮೇಲೆ ಹರಿತವಾದ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ, ಬೆಂಕಿ ಹಚ್ಚುವ ಮೂಲಕ ಹತ್ಯೆಗೆ ಯತ್ನಿಸಲಾಗಿದೆ. ಡಿ.31 ರಂದು ಶರಿಯತ್ ಪುರ ಜಿಲ್ಲೆಯಲ್ಲಿ - [ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗಕ್ಕೆ ಉಪಾಧ್ಯಕ್ಷೆಯಾಗಿ ನ್ಯಾಯವಾದಿ ಗೀತಾ ಥಾವಂಶಿ](https://independentsangramnews.com/advocate-geeta-thavanshi-as-vice-president-law-human-rights-and-right-to-information-department/): ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗಕ್ಕೆ ಉಪಾಧ್ಯಕ್ಷೆಯಾಗಿ ನ್ಯಾಯವಾದಿ ಗೀತಾ ಥಾವಂಶಿ. ಧಾರವಾಡ : ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳು ಹಾಗೂ ಮಾಹಿತಿ ಹಕ್ಕು ವಿಭಾಗಕ್ಕೆ ಧಾರವಾಡದ ಖ್ಯಾತ ನ್ಯಾಯವಾದಿಗಳಾದ ಶ್ರೀಮತಿ ಗೀತಾ ಥಾವಂಶಿ ಇವರನ್ನು ನೇಮಕ ಮಾಡಲಾಗಿದೆ. ಅವರು ಕೆಪಿಸಿಸಿಯ ಆದೇಶದಂತೆ ಹಲವಾರು ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಧಾರವಾಡ 74 ಮತಕ್ಷೇತ್ರದ ಗ್ಯಾರೆಂಟಿ ಅಧ್ಯಕ್ಷೆಯಾಗಿ ಇವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಷ ಸಂಘಟನೆಗಳಲ್ಲಿ ಸಂಘಟನಾ ಚಾತುರ್ಯರಾಗಿ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಸಾಮಾಜಿಕ ಸೇವೆ, ಪಕ್ಷ ನಿಷ್ಠೆ, ಮಹಿಳೆಯರಿಗಾಗಿ ಅನೇಕ ಜನಜಾಗ್ರತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಕಾರಣ ಕೆಪಿಸಿಸಿಯ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮತ್ತು ಕಾನೂನು ಮಾನವ ಹಕ್ಕು ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಡಾಕ್ಟರ್ ಅಭಿಷೇಕ್ ಸಿಂಘವಿ ಆದೇಶದ ಮೇರೆಗೆ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಪ್ರಕಟಣೆ ತಿಳಿಸಿದೆ. - [ಸರ್ಕಾರಿ ಶಾಲಾ ಮಕ್ಕಳ ಜೊತೆಗೆ ಹೊಸ ವರ್ಷ ಆಚರಿಸಿದ ಕೆಎಎಸ್ ಅಧಿಕಾರಿ.](https://independentsangramnews.com/kas-officer-celebrates-new-year-with-government-school-children/): ಸರ್ಕಾರಿ ಶಾಲಾ ಮಕ್ಕಳ ಜೊತೆಗೆ ಹೊಸ ವರ್ಷ ಆಚರಿಸಿದ ಕೆಎಎಸ್ ಅಧಿಕಾರಿ. ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಕೆ ಎ ಎಸ್ ಅಧಿಕಾರಿ ಮಲ್ಲಿಕಾರ್ಜುನ ತೊದಲಬಾಗಿ, ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ, ಟ್ರ್ಯಾಕ್‌ ಸೂಟ ಖರೀದಿಸಿ, ಶಾಲೆಯ ಎಲ್ಲಾ ಮಕ್ಕಳಿಗೆ ವಿತರಿಸುವ ಮ‌ೂಲಕ ವಿಶಿಷ್ಟವಾಗಿ, ವಿಭಿನ್ನವಾಗಿ ಹೊಸ ವರ್ಷವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು,ನಾವು ಸಕಾರಾತ್ಮಕವಾಗಿ ಮುನ್ನಡೆದಷ್ಟು ನಮ್ಮ ಜೀವನ ಚೆನ್ನಾಗಿರುತ್ತದೆ, ನಮ್ಮ ಆಲೋಚನೆಗಳು ವಿಶೇಷತೆಯಿಂದ ಕೂಡಿರಬೇಕು, ಕಂಡ ಕನಸುಗಳನ್ನು ಸಾಕಾರಗೊಳಿಸುವಂತಿರಬೇಕು, ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಬೇಕು, ಮಕ್ಕಳು ಮೊಬೈಲ್ ಬಳಕೆ ಮಾಡದೇ ಓದುವುದರ ಕಡೆಗೆ ಹೆಚ್ಚು ಗಮನಹರಿಸಲು ಸಲಹೆ ನೀಡಿ, ನಮ್ಮ ಧಾರವಾಡದ ಪರಿಸರ ಪ್ರೇಮ ತಂಡದ ಆಶಯದಂತೆ, ಹೊಸ ವರ್ಷವನ್ನು ಈ ಪುಟ್ಟ ಗ್ರಾಮದಲ್ಲಿ ಮಕ್ಕಳಿಗೆ ಟ್ರ್ಯಾಕ್ ಸೂಟ ನೀಡುವದರ ಮೂಲಕ ಆಚರಿಸಿದ್ದೇವೆ ಎಂದರು. ಮುಖ್ಯ ಅತಿಥಿಯಾಗಿದ್ದ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ - [ಪ್ರೀತಿ ಪ್ರೇಮ ಕಾಮ ಜನರ ಜೀವನದ ಸಹಜ ಭಾಗ](https://independentsangramnews.com/love-and-lust-are-a-natural-part-of-peoples-lives/): ಹಾಲಹಳ್ಳ (ಎರಡು ದಶಕದ ಕಥೆಗಳ) ಧಾರವಾಡ : ಇದೊಂದು ಈ ಯುಗದ ಪ್ರೇಮ ಕಾವ್ಯ ಎನ್ನಬಹುದು, ಇಲ್ಲಿರುವ ಕಥೆಗಳಲ್ಲಿ ಸುಮಾರು ಕಥೆಗಳು ಪ್ರೀತಿ, ಪ್ರೇಮ ಎಂಬ ಸುಮಧುರವಾದ ಎರಡಕ್ಷರಗಳಿಂದಲೇ ಕೂಡಿವೇ. ನಮ್ಮಲ್ಲಿ ಪ್ರೀತಿ ಪ್ರೇಮ ಕಾಮ ಎಲ್ಲವೂ ಇದ್ದು, ಆದರೆ ಅದನ್ನು ಕೆಲವು ಬಾರಿ ತೋರ್ಪಡಿಸಿಕೊಳ್ಳದೆ ತುಂಬಾ ಗಂಭೀರರಂತೆ ಇರುತ್ತೇವೆ ಆದರೆ ಪ್ರೀತಿ ಪ್ರೇಮ ಕಾಮ ಜನರ ಜೀವನದ ಸಹಜ ಭಾಗ ಎಂಬುದನ್ನು ಗುರುಗಳು ತುಂಬಾ ಸರಳವಾಗಿ ಇಲ್ಲಿ ತೋರಿಸಿ ಕೊಟ್ಟಿದ್ದಾರೆ. ಇನ್ನು ಕೆಲವು ಕಥೆಗಳಂತೂ ಗ್ರಾಮೀಣರ ಜೀವನವನ್ನು ಯಥಾವತ್ತಾಗಿ ಭಟ್ಟಿ ಇಳಿಸಿದಂತಾಗಿದೆ. ಇಲ್ಲಿರುವ ಹಲವಾರು ಕಥೆಗಳು ಸದ್ಯದ ನಮ್ಮೆಲ್ಲರ ನಡುವಿನ ಬದುಕನ್ನು ಚಿತ್ರಿಸುತ್ತವೆ, ಪ್ರೀತಿ ಪ್ರೇಮ ಎನ್ನುವುದು ಜಾತಿ ಮತ ಪಂಥ ಎಲ್ಲ ಸಂಕೋಲೆಗಳನ್ನು ಮೀರಿರುವುದು ಎಂಬುದು ನಿಜ ಆದರೆ ನಮ್ಮ ಈ ಸಮಾಜದಲ್ಲಿ ಅದು ಪೂರ್ಣ ನಿಜವಲ್ಲ ಎಂಬುದನ್ನು ಇಲ್ಲಿರುವ ಒಂದೆರಡು ಕಥೆಗಳು ತುಂಬಾ ಮಾರ್ಮಿಕವಾಗಿ ತಿಳಿಸುತ್ತವೆ. ಒಂದೆರಡು ಕಥೆಗಳಂತೂ ನನ್ನ ಕಾಲೇಜು ಜೀವನವನ್ನೇ ಮತ್ತೊಮ್ಮೆ ಕಣ್ಣ ಮುಂದೆ - [ಶಿವನಾಗ ಬಡಾವಣೆಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಆರೂಪ.](https://independentsangramnews.com/illegal-construction-of-a-mosque-in-shivanag-layout/): ಶಿವನಾಗ ಬಡಾವಣೆಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಆರೂಪ. ಹುಬ್ಬಳ್ಳಿ: ಹಲವು ದಿನಗಳಿಂದ ನೇಕಾರನಗರದ ಶಿವನಾಗ ಬಡಾವಣೆಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ನೇಕಾರನಗರ ಹಿತರಕ್ಷಣಾ ವೇದಿಕೆ ಹಾಗೂ ಹಿಂದೂಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಗೌರವಾನ್ವಿತ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಹಾಗೂ ಉಪಮಹಾಪೌರರಾದ ಸಂತೋಷ್ ಚವ್ಹಾಣ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಮಹಾಪೌರರಾದ ಜ್ಯೋತಿ ಪಾಟೀಲ, ಉಪಮಹಾಪೌರ ಸಂತೋಷ್ ಚವ್ಹಾಣ ಹಾಗೂ ಪಾಲಿಕೆ ಸದಸ್ಯರಾದ ಶ್ರೀಮತಿ ಶಾಂತಾ ಹಿರೇಮಠ ಅವರು ವಲಯ ಸಹಾಯಕ ಆಯುಕ್ತರೊಂದಿಗೆ ಶಿವನಾಗ ಬಡಾವಣೆಯ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಪರಿಶೀಲನೆಯ ವೇಳೆ, ಮನೆಯ ಮಾಲೀಕರಾದ ಅಬ್ದುಲ್ ರೆಹಮಾನ್ ಮುಲ್ಲಾ ಅವರಿಗೆ ಅಕ್ರಮವಾಗಿ ನಿರ್ಮಿಸಿರುವ ವಜುಕಾನೆ ಹಾಗೂ ಕಟ್ಟಡದ ಇತರ ಅನಧಿಕೃತ ಭಾಗಗಳನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು. ಜೊತೆಗೆ, ಮಹಾನಗರ ಪಾಲಿಕೆ ನೀಡಿರುವ ಅನುಮತಿಯಂತೆ ಆ ಕಟ್ಟಡದಲ್ಲಿ ಮನೆಯವರು ಮಾತ್ರ ವಾಸವಿರಬೇಕು - [ಧಾರವಾಡದ ರಾಜು ಪಾಟೀಲ ಅವರಿಗೆ 2025 ನೇ ಜೀವಮಾನ ಸಾಧನ ಪ್ರಶಸ್ತಿ.](https://independentsangramnews.com/2025th-lifetime-achievement-award-to-raju-patil-of-dharwad/): ಧಾರವಾಡದ ರಾಜು ಪಾಟೀಲ ಅವರಿಗೆ 2025 ನೇ ಜೀವಮಾನ ಸಾಧನ ಪ್ರಶಸ್ತಿ. ಧಾರವಾಡ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಹಾಗೂ ವೈಚಾರಿಕ ದಿನಾಚರಣೆ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ -2025 ರಲ್ಲಿ ಧಾರವಾಡದ ಸಣ್ಣ ಕೈಗಾರಿಕೆಗಳ ಉದ್ಯಮಿ ರಾಜು ಸಿ ಪಾಟೀಲ ಅವರಿಗೆ 2025ನೇ ಸಾಲಿನ ಜೀವಮಾನ ಸಾಧನ ಪ್ರಶಸ್ತಿಯು ಲಭಿಸಿದ್ದಕ್ಕಾಗಿ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ವತಿಯಿಂದ ಗೌಯಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಸಹಕಾರ್ಯದರ್ಶಿ ಕೃಷ್ಣಮೂರ್ತಿ ಗೊಲ್ಲರ, ಡಾ ಮಾರುತಿ ಚೌಡಕ್ಕನವರ, ಹಾಗೂ ಕಿಟಲ್ ಕಾಲೇಜಿನ ಉಪನ್ಯಾಸಕ ವೃಂದದವರು ಇದ್ದರು. ರಾಜು ಪಾಟೀಲ ಅವರ ಪರಿಚಯ. ಧಾರವಾಡದ ಸೈದಾಪುರದ ಗೌಡರ ಮನೆತನ ಎಲ್ಲರಿಗೂ ಗೊತ್ತು. ಈ ಹಿಂದೆ ಮಹಾದಾನಿ ಚೆನ್ನವೀರಗೌಡ ಅಣ್ಣಾ ಪಾಟೀಲರು (1850-1944) ಬ್ರಿಟಿಷ್ ಸರಕಾರದಲ್ಲಿ ಉತ್ತರ ಕರ್ನಾಟಕದ ಪ್ರಥಮ ಇಂಜಿನಿಯರ್ - [4 ರಂದು 36 ನೇ ನೃತ್ಯ ನಿರಂತರ ಸಮಾರಂಭ.](https://independentsangramnews.com/36th-dance-continuous-ceremony-on-the-4th/): 4 ರಂದು 36 ನೇ ನೃತ್ಯ ನಿರಂತರ ಸಮಾರಂಭ. ಧಾರವಾಡ : ಶ್ರೀ ಗಣೇಶ ನೃತ್ಯ ಶಾಲೆಯ 36 ನೇ ನೃತ್ಯ ನಿರಂತರ ಸಮಾರಂಭ ಜನೇವರಿ 04 ರಂದು ಸಂಜೆ 6 ಕ್ಕೆ ಸೃಜನಾ ರಂಗ ಮಂದಿರದಲ್ಲಿ ಆಯೋಜಿಸಿದೆ ಎಂದು ವಿಧುಷಿ ರೋಹಿಣಿ ಇಮಾರತಿ ತಿಳಿಸಿದರು. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸಾಧನಕೇರಿ ಬಡಾವಣೆಯಲ್ಲಿ 1990 ನೇ ಇಸ್ವಿಯಲ್ಲಿ ಆರಂಭವಾದ ನೃತ್ಯ ಶಾಲೆಯಲ್ಲಿ ಇಲ್ಲಿವರೆಗೂ ಅಂದಾಜು ೦5 ಸಾವಿರ ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ತರಬೇತಿ ಪಡೆದಿದ್ದಾರೆ. 15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಂಗ ಪ್ರವೇಶ ಮಾಡಿದ್ದಾರೆ. ಕರಾವಳಿ, ಕಿತ್ತೂರ, ಆನೆಗುಂದಿ, ಹಾವೇರಿ, ಬೆಳವಡಿ ಸೇರಿದಂತೆ ವಿವಿಧ ಜಿಲ್ಲಾ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ರಾಜ್ಯ ಹಾಗೂ ಅಂತರಾಜ್ಯ ಮಟ್ಟದಲ್ಲಿ ಕೂಡ ನಮ್ಮ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ಕೆನಡಾ ಮತ್ತಿತರ ವಿದೇಶಿಗರು ಈ ಶಾಲೆಯಲ್ಲಿ ನೃತ್ಯ ತರಬೇತಿ ಪಡೆದಿರುವುದು ಹೆಮ್ಮೆಯ ಸಂಗತಿ. ನಮ್ಮ ಶಾಲೆಗೆ ಹಲವು ಸಂಘ ಸಂಸ್ಥೆಗಳು ಮಠಗಳು ಪ್ರಶಸ್ತಿ - [ಧಾರವಾಡದಲ್ಲಿ ಸಿಲಿಂಡ‌ರ್ ದುರಂತ : 3 ಮಕ್ಕಳು ಸೇರಿ 6 ಜನರಿಗೆ ಗಂಭೀರ ಗಾಯ](https://independentsangramnews.com/cylinder-accident-in-dharwad-6-people-including-3-children-seriously-injured/): ಧಾರವಾಡದಲ್ಲಿ ಸಿಲಿಂಡ‌ರ್ ದುರಂತ — 3 ಮಕ್ಕಳು ಸೇರಿ 6 ಜನರಿಗೆ ಗಂಭೀರ ಗಾಯ.   ಧಾರವಾಡ  : ಗ್ಯಾಸ್‌ ಸಿಲಿಂಡ‌ರ್ ಸೋರಿಕೆಯಿಂದಾಗಿ ಮನೆಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ಆರು ಜನ ಗಾಯಗೊಂಡಿರುವ ಘಟನೆ ನಗರದ ಹೊಸಯಲ್ಲಾಪುರ ಸುಣ್ಣದ ಭಟ್ಟಿ ಬಡಾವಣೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಇಸ್ಮಾಯಿಲ್ ಹೊರಕೇರಿ ಎಂಬುವವರಿಗೆ ಸೇರಿದ ಮನೆಯಲ್ಲೇ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ತಗುಲಿದೆ. ಈ ಘಟನೆಯಲ್ಲಿ 6 ಜನ ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಮಕ್ಕಳೂ ಸಹ ಇದ್ದಾರೆ. ಸದ್ಯ ಮೂವರ ಸ್ಥಿತಿ ಗಂಭೀರವಾಗಿದೆ. ಸಿಲಿಂಡ‌ರ್ ಸೋರಿಕೆಯಾಗುತ್ತಿದ್ದ ವಿಷಯ ಗೊತ್ತಾಗದೇ ಬೆಳಿಗ್ಗೆ ಗ್ಯಾಸ್‌ ಹಚ್ಚಿದ್ದರಿಂದ ಫ್ಲ್ಯಾಶ್ ಫೈರ್ ಆಗಿ ಬೆಂಕಿ ತಗುಲಿದೆ. ಇದರಿಂದ ಮಕ್ಕಳೂ ಸೇರಿದಂತೆ ಒಟ್ಟು ಆರು ಜನ ಗಾಯಗೊಂಡಿದ್ದಾರೆ. ಇನಾಯಾ (3), ಕೈಫ್ (7), ಅಮೀನಾ (26), ಇಸ್ಮಾಯಿಲ್ (35), ಜರೀನಾ (65) ಹಾಗೂ ಮಹಿರಾನ್ (13) ಎಂಬುವವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿ ಬೆಂಕಿ - [ಭೀಮಾ ಕೋರೆಗಾವ್ ಸ್ವಾಭಿಮಾನ ಹೋರಾಟಕ್ಕೆ 208 ವರ್ಷಗಳು ವೀರ ಯೋಧರಿಗೆ ಗೌರವ ನಮನ](https://independentsangramnews.com/208-years-of-bhima-koregaon-struggle-for-self-respect-tribute-to-brave-soldiers-in-dharwad/): ಭೀಮಾ ಕೋರೆಗಾವ್ ಸ್ವಾಭಿಮಾನ ಹೋರಾಟಕ್ಕೆ 208 ವರ್ಷಗಳು ಧಾರವಾಡದಲ್ಲಿ ವೀರ ಯೋಧರಿಗೆ ಗೌರವ ನಮನ ಧಾರವಾಡ  : 1818ರ ಜನವರಿ 1ರಂದು ನಡೆದ ಐತಿಹಾಸಿಕ ಭೀಮಾ ಕೋರೆಗಾವ್ ಕದನದ ಸ್ವಾಭಿಮಾನ ಹಾಗೂ ಆತ್ಮಗೌರವ ಹೋರಾಟಕ್ಕೆ ಇಂದಿಗೆ 208 ವರ್ಷಗಳು ಪೂರ್ತಿಯಾಗಿವೆ. ಪ್ರಪಂಚದಾದ್ಯಂತ ಜನರು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ದೇಶದ ಸ್ವಾತಂತ್ರ್ಯ ಮತ್ತು ಸಮಾನತೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಸೈನಿಕರಿಗೆ ನಮನ ಸಲ್ಲಿಸುವ ದಿನವೂ ಇದಾಗಿದೆ. ಭೀಮಾ ಕೋರೆಗಾವ್ ಯುದ್ಧದಲ್ಲಿ ಅಂದಿನ ಮಹಾರ ಸೇನೆಯು ಸುಮಾರು 12 ಗಂಟೆಗಳ ಕಾಲ ಅಸಾಧಾರಣ ಸಾಹಸದಿಂದ ಹೋರಾಡಿ, ಪೇಶ್ವೆಗಳ ಭಾರಿ ಸೈನ್ಯವನ್ನು ಹಿಮ್ಮಟ್ಟಿಸಿತು. ಅಸ್ಪೃಶ್ಯರೆಂದು ತಿರಸ್ಕೃತರಾಗಿದ್ದ ಮಹಾರ ಸಮುದಾಯದ ಈಸ್ಟ್ ಇಂಡಿಯಾ ಕಂಪನಿಯ ಸುಮಾರು 800 ಸೈನಿಕರು, ಸುಮಾರು 28,000ಕ್ಕೂ ಹೆಚ್ಚು ಪೇಶ್ವೆಗಳ ಸೈನ್ಯವನ್ನು ಎದುರಿಸಿ ಜಯ ಸಾಧಿಸಿದರು. ಈ ಯುದ್ಧದಲ್ಲಿ ವೀರ ಮರಣ ಹೊಂದಿದ ಮಹಾರ ಸೈನಿಕರ ಸ್ಮರಣಾರ್ಥವಾಗಿ ಅಂದಿನ ಬ್ರಿಟಿಷರು ಕೋರೆಗಾವ್‌ನಲ್ಲಿ ವಿಜಯಸ್ತಂಭವನ್ನು ನಿರ್ಮಿಸಿದರು. ಸಂವಿಧಾನ ಶಿಲ್ಪಿ - [ನಾವು ನೀವೆಲ್ಲರೂ ಒಂದಾಗಿ ಬಾಳೋಣ -- ಕೆ ಎಚ್ ನಾಯಕ ಕರೆ](https://independentsangramnews.com/let-us-all-live-together-kh-nayakas-call/): ನಾವು ನೀವೆಲ್ಲರೂ ಒಂದಾಗಿ ಬಾಳೋಣ — ಕೆ ಎಚ್ ನಾಯಕ ಕರೆ.                                               OR ಸ್ತ್ರೀ ಶಕ್ತಿಯ ವಿಭಿನ್ನ ಮುಖಗಳು ಭಾಷಣ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮ. ಧಾರವಾಡ  : ನಾವು ನೀವೆಲ್ಲರೂ ಒಂದಾಗಿ ಬಾಳೋಣ ಬನ್ನಿ ಎಂಬ ಹಾಸ್ಯಕವಿ ಸಾಹಿತಿ ಎನ್ ಎನ್ ಎಸ್ ಯೋಜನೆ ಕವಿತೆ ರಚನೆಗಾರರಾದ ದಿವಂಗತ ಡಾ ಎಂ ಬಿ ದಿಲ್ ಶಾದ ಅವರು ಪ್ರತಿಷ್ಠಿತ ಅಂಜುಮನ್ ಸಂಸ್ಥೆಯ ಪ್ರಾಚಾರ್ಯರಾಗಿ ಉತ್ತಮ ಶಿಕ್ಷಣ ಕಲಿಸಿದ ಗುರುಗಳು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಮತ್ತು ಸಾಹಿತಿ ಕೆ ಎಚ್ ನಾಯಕ ಹೇಳಿದರು. ಅವರು ಡಾ ಎಂ ಬಿ ದಿಲ್ ಶಾದ ಅವರ 73 ನೇ ಹುಟ್ಟು ಹಬ್ಬದ ಅಂಗವಾಗಿ ನಗರದ ರಂಗಾಯಣದ ಸಭಾಭವನದಲ್ಲಿ ಆಯೋಜಿಸಿದ್ದ ಸ್ತ್ರೀ - [ವಯೋ ನಿವೃತ್ತಿ ಹೊಂದಿದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಬಿ.ಎಚ್. ಕುರಿಯವರ ಸನ್ಮಾನ ಕಾರ್ಯಕ್ರಮ](https://independentsangramnews.com/honorary-program-for-dr-b-h-kuri-head-of-the-government-college-of-fine-arts-who-retired-on-age/): ವಯೋ ನಿವೃತ್ತಿ ಹೊಂದಿದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಬಿ.ಎಚ್. ಕುರಿಯವರ ಸನ್ಮಾನ ಕಾರ್ಯಕ್ರಮ. ಧಾರವಾಡ : ಚಿತ್ರಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕೌಶಲ್ಯಗಳನ್ನು ಗುರುತಿಸಿ ವಿದ್ಯಾರ್ಥಿಗಳ ಏಳಿಗೆಗೆ ಹಾಗೂ ಕಲಾವಿದರ ಏಳಿಗೆಗೆ ಶ್ರಮಿಸಿದವರಲ್ಲಿ ಧಾರವಾಡ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಬಸವರಾಜ ಕುರಿಯವರ ಅಗ್ರಗಣ್ಯರು ಎಂದು ಧಾರವಾಡ ಚಿತ್ರಕಲಾಶಿಲ್ಪಿ ಡಿ.ವಿ ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ.ಮಾರುತಿ ಹೇಳಿದರು. ಧಾರವಾಡ ನಗರದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಆರ್ಟ್ ಗ್ಯಾಲರಿಯಲ್ಲಿ ನಡೆದ ಹುಬ್ಬಳ್ಳಿ ಧಾರವಾಡ ಚಿತ್ರಕಲಾ ಮತ್ತು ಸಾಹಿತಿ ಬಳಗ ಹಾಗೂ ಆರ್ಟ್ ಪಾಯಿಂಟ್ ಧಾರವಾಡ ವತಿಯಿಂದ ವಯೋ ನಿವೃತ್ತಿ ಹೊಂದಿದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಬಿ.ಎಚ್ ಕುರಿಯವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಬಗ್ಗೆ ಡಾ. ಬಸವರಾಜ ಕುರಿಯವರ ಮಾರ್ಗದರ್ಶನ ನೀಡಿದ್ದಾರೆ. ಇದು ಚಿತ್ರಕಲಾ ಕ್ಷೇತ್ರದಲ್ಲಿನ ವೈವಿಧ್ಯಮಯ ಕೊಡುಗೆಗಳನ್ನು ತೋರಿಸುತ್ತದೆ. ಚಿತ್ರಕಲಾ ಕ್ಷೇತ್ರವು ಪ್ರತಿಭಾವಂತ ಕಲಾವಿದರು, ಶಿಕ್ಷಕರು, ಮತ್ತು - [ಐಐಟಿ ಧಾರವಾಡ ಕುಲಸಚಿವರಿಗೆ 30 ನೇ ಅಂತರ-ಐಐಟಿ ಸಿಬ್ಬಂದಿ ಕ್ರೀಡಾಕೂಟದಲ್ಲಿ ಚಿನ್ನದ ಪದಕ](https://independentsangramnews.com/iit-dharwad-registrar-wins-gold-medal-at-30th-inter-iit-staff-games/): ಐಐಟಿ ಧಾರವಾಡ ಕುಲಸಚಿವರಿಗೆ 30 ನೇ ಅಂತರ-ಐಐಟಿ ಸಿಬ್ಬಂದಿ ಕ್ರೀಡಾಕೂಟದಲ್ಲಿ ಚಿನ್ನದ ಪದಕ.   ಧಾರವಾಡ : ಭಾರತೀಯ ತಂತ್ರಜ್ಞಾನ ಸಂಸ್ಥೆ ಮುಮ್ಮಿಗಟ್ಟಿ ಧಾರವಾಡದ ಕುಲಸಚಿವರಾದ ಡಾ. ಕಲ್ಯಾಣ್ ಕುಮಾರ್ ಭಟ್ಟಾಚಾರ್ಜಿ ಅವರು 55 ವರ್ಷ ಮೇಲ್ಪಟ್ಟ ವಿಭಾಗದ 100 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಡಿಸೆಂಬರ್ 23ರಿಂದ 29ರವರೆಗೆ ಭಾರತೀಯ ತಂತ್ರಜ್ಞಾನ ಸಂಸ್ಥೆ ಹೈದರಾಬಾದ್‌ನಲ್ಲಿ ನಡೆದ 30 ನೇ ಅಂತರ-ಐಐಟಿ ಸಿಬ್ಬಂದಿ ಕ್ರೀಡಾಕೂಟ-2025 ದಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ಅಂತರ-ಐಐಟಿ ಸಿಬ್ಬಂದಿ ಕ್ರೀಡಾಕೂಟದಲ್ಲಿ ಐಐಟಿ ಧಾರವಾಡ ಸಿಬ್ಬಂದಿ ತಂಡಕ್ಕೆ ದೊರೆತ ಮೊದಲ ಚಿನ್ನದ ಪದಕವಾಗಿದ್ದು, ಸಂಸ್ಥೆಗೆ ವಿಶೇಷ ಗೌರವ ತಂದಿದೆ. ಡಾ. ಭಟ್ಟಾಚಾರ್ಜಿ ಅವರ ಈ ಗಮನಾರ್ಹ ಸಾಧನೆಗೆ ಸಂಸ್ಥೆ ಹೃತ್ತೂರ್ವಕ ಅಭಿನಂದನೆ ಸಲ್ಲಿಸಿದೆ. - [ಸಂಗೀತಜ್ಞರ ದಿನಾಚರಣೆ'ಯ ಕಾರ್ಯಕ್ರಮ](https://independentsangramnews.com/mallikarjuna-mansoor-is-a-musical-icon-mrityunjaya-agadi/): ಮಲ್ಲಿಕಾರ್ಜುನ ಮನ್ಸೂರ್ ಒಬ್ಬ ಸಂಗೀತ ಶಿಖರ — ಮೃತ್ಯುಂಜಯ ಅಗಡಿ.                                       OR ಸಂಗೀತಜ್ಞರ ದಿನಾಚರಣೆ’ಯ ಕಾರ್ಯಕ್ರಮ. ಧಾರವಾಡ : ಮನ್ಸೂರ್ ಅವರು ಒಬ್ಬ ಸಂಗೀತ ಶಿಖರವಾಗಿದ್ದು, ಮನ್ಸೂರ ಅವರು ತಮ್ಮ ವಿಶಿಷ್ಠವಾದ ಸಂಗೀತದ ಮೂಲಕ ಕರ್ನಾಟಕವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದ ಕೀರ್ತಿ ಮಲ್ಲಿಕಾರ್ಜುನ ಮನ್ಸೂರ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನರಾದ ಮೃತ್ಯುಂಜಯ ಅಗಡಿ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಭಾಂಗಣದಲ್ಲಿ‌ ಆಯೋಜಿಸಿದ ಡಾ.ಮಲ್ಲಿಕಾರ್ಜುನ ‌ಮನ್ಸೂರ ಸ್ಮರಣಾರ್ಥ ‘ಸಂಗೀತಜ್ಞರ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಸಂಗೀತದ ಕುರಿತು ಸಂಗೀತದ ಕಲಾವಿದರ ಬಗಯ ಗೌರವ ಕಡಿಮೆ ಆಗಿತ್ತಿದೆ ಈ ಹಿನ್ನೆಲೆಯಲ್ಲಿ ಸಂಗೀತ ಕಲಾವಿದರ ಸಾಧನೆ ಬಗ್ಗೆ ಗೌರವ ನೀಡಬೇಕು. ಮಲ್ಲಿಕಾರ್ಜುನ - [ಧಾರವಾಡದ ಉಡುಪಿ ಓಣಿಯಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ : ಶಿವಲೀಲಾ ವಿನಯ್ ಕುಲಕರ್ಣಿ](https://independentsangramnews.com/mrs-shivalila-vinay-kulkarni-performed-the-bhoomi-puja-for-the-new-anganwadi-building-at-udupi-oni-dharwad/): ಧಾರವಾಡದ ಉಡುಪಿ ಓಣಿಯಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ : ಶಿವಲೀಲಾ ವಿನಯ್ ಕುಲಕರ್ಣಿ ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂಬರ್ 8ರ ಉಡುಪಿ ಓಣಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ನಿರ್ಮಿಸಲು ಉದ್ದೇಶಿಸಿರುವ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದ  ಶಿವಲೀಲಾ ವಿನಯ್ ಕುಲಕರ್ಣಿ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು “ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಂಗನವಾಡಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ನಮ್ಮ ಸರ್ಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ 15ನೇ ಹಣಕಾಸು ಯೋಜನೆಯಡಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ” ಎಂದು ತಿಳಿಸಿದರು. ಪ್ರಮುಖ ಮುಖ್ಯಾಂಶಗಳು : * ಅನುದಾನ: 15ನೇ ಹಣಕಾಸು ಆಯೋಗದ ವತಿಯಿಂದ ಈ ಕಟ್ಟಡಕ್ಕೆ ಹಣ ಬಿಡುಗಡೆ - [ಬಿಲ್ಡ್ ಎಕ್ಸ್ಪೋನಲ್ಲಿ ಮಾಹಿತಿ ಕೈಪಿಡಿಯ ಸದುಪಯೋಗ ಪಡಿಸಿಕೊಳ್ಳಿ - ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ](https://independentsangramnews.com/make-good-use-of-the-information-manual-at-the-build-expo-corporation-member-iresha-anchatageri/): ಬಿಲ್ಡ್ ಎಕ್ಸ್ಪೋನಲ್ಲಿ ಮಾಹಿತಿ ಕೈಪಿಡಿಯ ಸದುಪಯೋಗ ಪಡಿಸಿಕೊಳ್ಳಿ – ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಬಿಲ್ಡಿಂಗ್ ಮತ್ತು ಕಟ್ಟಡ ವಸ್ತುಗಳ ವ್ಯಾಪಾರ ಪ್ರದರ್ಶನ ಬಿಲ್ಡ್ ಎಕ್ಸ್ಪೋದ ಮಾಹಿತಿಗಾಗಿ ಮಾಹಿತಿ ಕೈಪಿಡಿಯನ್ನು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ ಧಾರವಾಡ ಲೋಕಲ್ ಸೆಂಟರನಿಂದ ಬಿಡುಗಡೆ ಮಾಡಿದ್ದು ಬಹಳ ಉಪಯುಕ್ತವಾಗಿದೆ ಎಂದು ಪಾಲಿಕೆ ಸದಸ್ಯರಾದ ಈರೇಶ ಅಂಚಟಗೇರಿ ಹೇಳಿದರು. ಅವರು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ, ಲೋಕಲ್ ಸೆಂಟರ್ ಧಾರವಾಡ ಮತ್ತು ಟರ್ಬೊ ಸ್ಟೀಲ್ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ ಬಿಲ್ಡ್ ಎಕ್ಸ್ಪೋ -2025 ರಲ್ಲಿ ಬಿಲ್ಡ್ ಎಕ್ಸ್ಪೋ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ ಕಟ್ಟಡ ವಸ್ತುಗಳು, ನಿರ್ಮಾಣ ತಂತ್ರಜ್ಞಾನಗಳು, ಪರಿಸರ ಸ್ನೇಹಿ ಉತ್ಪನ್ನಗಳು ಮತ್ತು ನವೀಕೃತ ಸಾಧನಗಳು ಮತ್ತು ಇತರ ಸೇವೆಗಳ ಕುರಿತು ಉಪಯುಯ ಮಾಹಿತಿ ಒದಗಿಸಲು ಕೈಪಿಡಿ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಅಂಜುಮನ್-ಇ-ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಇಸ್ಮಾಯಿಲ್ ತಮಾಟಗಾರ, - [ಇನಾಂವೀರಾಪುರ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಭೇಟಿ](https://independentsangramnews.com/district-in-charge-minister-santosh-lad-visited-inamveerapur-village/): ಇನಾಂವೀರಾಪುರ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಭೇಟಿ ಸ್ಥಳೀಯರು, ಅಧಿಕಾರಿಗಳಿಂದ ಘಟನೆ ಬಗ್ಗೆ ಮಾಹಿತಿ ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಗರ್ಭಿಣಿ ಹತ್ಯೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಘಟನೆಯ ಕುರಿತು ಅಧಿಕಾರಿಗಳು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ದೌರ್ಜನ್ಯಕ್ಕೆ ಒಳಗಾದ ಕುಟುಂಬದ ಮನೆಗೂ ಸಚಿವರು ಭೇಟಿ ನೀಡಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಮಾನತೆಗಾಗಿ ಹೋರಾಟ ನಡೆಸಿದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ತತ್ವಗಳನ್ನು ಪಾಲಿಸಿಕೊಂಡು ಬಂದಿರುವ ಮನೆತನ ದೊಡ್ಡಮನಿ ಅವರದ್ದು, ಅವರ ಕುಟುಂಬದಲ್ಲೇ ಇಂತಹ ಘಟನೆ ನಡೆದಿರುವುದು ದುಃಖ ತಂದಿದೆ ಎಂದರು. ಅಂಬೇಡ್ಕರ್‌ ಹಾಗೂ ಬಸವಣ್ಣನವರು ಹಾಕಿಕೊಟ್ಟ ತತ್ವಸಿದ್ಧಾಂತಗಳನ್ನು ಜನರು ಇನ್ನಷ್ಟು ಅರಿತುಕೊಂಡು ಆಚರಣೆಗೆ ತರಬೇಕೆಂಬುದು ನನ್ನ ಮನವಿ. ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದರು. ಧರ್ಮ ಮತ್ತು ದಯೆ ಇಲ್ಲದೆ, ಮಾನವನಾಗಿ ಹುಟ್ಟಿರುವುದಕ್ಕೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು. - [ರೈಲ್ವೆ ದರ ಹೆಚ್ಚಳವನ್ನು ಖಂಡಿಸಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ದಾರವಾಡ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ.](https://independentsangramnews.com/protest-in-front-of-dharwad-railway-station-by-the-dharwad-district-committee-of-the-suci-communist-party-condemning-the-increase-in-railway-fares/): ರೈಲ್ವೆ ದರ ಹೆಚ್ಚಳವನ್ನು ಖಂಡಿಸಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ದಾರವಾಡ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ. ಧಾರವಾಡ 26 : ರೈಲ್ವೆ ದರ ಹೆಚ್ಚಳವನ್ನು ಖಂಡಿಸಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ದಾರವಾಡ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗಣ್ಣವರ ಮಾತನಾಡಿದರು. ಪ್ರತಿಭಟನೆ ಅಧ್ಯಕ್ಷತೆ ಗಂಗಾಧರ್ ಬಡಿಗೇರ್ ವಹಿಸಿದ್ದರು. ಈ ಸಂದರ್ಭದಲ್ಲಿ, ಎಂ ಬಿ ತಾಯಿದಾಸ್, ದೀಪಾ ಧಾರವಾಡ ಮಧುಲತಾ ಗೌಡರ, ದುರ್ಗಪ್ಪ, ಅಲ್ಲಾಭಕ್ಷ ಕಿತ್ತೂರ, ಶಿವಕುಮಾರ್ ಸೂರ್ಯವಂಶಿ ಮುಂತಾದವರು ಇದ್ದರು. ರೈಲ್ವೆ ಯು ಜನಸಾಮಾನ್ಯರ ದುಡಿಯುವ ಜನಗಳ, ಮಧ್ಯಮ ವರ್ಗದವರ ಅತ್ಯಂತ ಹೆಚ್ಚು ಬಳಕೆಯಾಗುವ ಪ್ರಯಾಣದ ಸಾರಿಗೆಯಾಗಿದೆ. ದೇಶದ ಜನತೆಯ ತೆರಿಗೆ ಹಣದಿಂದ ನಿರ್ಮಿಸಿದ ಈ ಬೃಹತ್ ವಲಯವು ಲಾಭದ ಉದ್ದೇಶಕ್ಕಿಂತಲೂ ಹೆಚ್ಚು ಜನತೆಗೆ ಸೇವೆಯನ್ನು ಒದಗಿಸುವ - [ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ 2025-26](https://independentsangramnews.com/national-service-scheme-annual-special-camp-2025-26/): ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ರಾಷ್ಟ್ರೀಯ ಸೇವಾ ಯೋಜನೆ ಕೋಶ ಜಿಲ್ಲಾ ಪಂಚಾಯಿತಿ ಧಾರವಾಡ ತಾಲೂಕ್ ಪಂಚಾಯತ್ ಧಾರವಾಡ ಗ್ರಾಮ ಪಂಚಾಯಿತಿ ಹೆಬ್ಬಳ್ಳಿ ಹಾಗೂ ಸ್ವಚ್ಛ ಭಾರತ ಮಿಷನ್ ಕೆ ಎಲ್ಇ ಸಂಸ್ಥೆಯ ಜಗದ್ಗುರು, ಗಂಗಾಧರ ವಾಣಿಜ್ಯ ಮಹಾವಿದ್ಯಾಲಯ ಎಸ್ ಎಸ್ ಎಸ್ ಘಟಕ ಹುಬ್ಬಳ್ಳಿ ಇವರ ಸಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ 2025-26ನೇ ಸಾಲಿನ ದಿನಾಂಕ 12.12.2025 ರಿಂದ 18.12.2025 ರವರೆಗೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸ್ವಯಂಸೇವಕರಿಂದ ಗ್ರಾಮ ದೇವರಾದ ಶ್ರೀ ಮೂಗು ಬಸವೇಶ್ವರ ಶ್ರೀ ವಿಠ್ಠಲ ಮಂದಿರ ಪಂಚಾಯಿತಿ ಆವರಣ ರಿನ ಪ್ರಮುಖ ಬಿದಿ ಸ್ವಚ ಗೊಳಿಸಿ,ವರದಕ್ಷಣೆ ಬಗ್ಗೆ , ಬಾಲ್ಯ ವಿವಾಹದ ಬಗ್ಗೆ ,ಪುಸ್ಕೋ ಕಾಯ್ದೆ ಬಗ್ಗೆ ,ಡಿಜಿಟಲ್ ಸಾಕ್ಷರತೆ ಸೌರ ಒಲೆ ನಗದು ರಹಿತ ವಹಿವಾಟು, ಮತದಾನ ಜಾಗೃತಿ ,ಬಯಲು ಮುಕ್ತ ಬಹಿರ್ದೆಸೆ ,ನೇಲ ಜಲ ಸಂರಕ್ಷಣೆ ಹಲವಾರು ವಿಷಯಗಳ ಬಗ್ಗೆ, ನಾಗರಿಕರಲ್ಲಿ ಪ್ರಜ್ಞೆ ಮೂಡಿಸಿ ಹಲವಾರು ಜಾಥಾಗಳನು ಮಾಡಿದರು. - [ಹೆಬ್ಬಳ್ಳಿ-ಕನಕೂರು ಭಾಗದಲ್ಲಿ ಪಂಚ ಗ್ಯಾರಂಟಿಗಳ ಸಂಭ್ರಮ : ಅರವಿಂದ ಏಗನಗೌಡರ](https://independentsangramnews.com/celebration-of-pancha-guarantees-in-hebballi-kanakur-area-aravinda-eganagowda/): ಹೆಬ್ಬಳ್ಳಿ-ಕನಕೂರು ಭಾಗದಲ್ಲಿ ಪಂಚ ಗ್ಯಾರಂಟಿಗಳ ಸಂಭ್ರಮ : ಅರವಿಂದ ಏಗನಗೌಡರ ಮನೆ ಬಾಗಿಲಿಗೆ ತಲುಪಿದ ಸರ್ಕಾರದ ಸೌಲಭ್ಯ ಹೆಬ್ಬಳ್ಳಿ: “ಗ್ರಾಮೀಣ ಭಾಗದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭ ತಲುಪಿಸುವುದೇ ನಮ್ಮ ಮೊದಲ ಆದ್ಯತೆ,” ಎಂದು ಧಾರವಾಡ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅರವಿಂದ ಏಗನಗೌಡರ ತಿಳಿಸಿದರು. ಹೆಬ್ಬಳ್ಳಿ ಮತ್ತು ಕನಕೂರು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದ್ದ *’ಮನೆ ಬಾಗಿಲಿಗೆ ಗ್ಯಾರಂಟಿ ಯೋಜನೆಗಳ ಶಿಬಿರ’*ಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಆರ್ಥಿಕ ಸಬಲೀಕರಣದ ಪಂಚ ಸೂತ್ರಗಳು: ಶಿಬಿರದಲ್ಲಿ ಪಂಚ ಗ್ಯಾರಂಟಿಗಳ ಪ್ರಗತಿಯನ್ನು ಅವಲೋಕಿಸಿದ ಅವರು, ಯೋಜನೆಗಳ ವ್ಯಾಪ್ತಿಯನ್ನು ಈ ಕೆಳಗಿನಂತೆ ವಿವರಿಸಿದರು: * ಗೃಹಲಕ್ಷ್ಮಿ ಯೋಜನೆ (ಬೃಹತ್ ಮೊತ್ತ ಜಮೆ): ಹೆಬ್ಬಳ್ಳಿ ಮತ್ತು ಕನಕೂರು ಭಾಗದ 6 ಗ್ರಾಮಗಳ 4,788 ಮಹಿಳೆಯರ ಖಾತೆಗೆ ಈವರೆಗೆ ಒಟ್ಟು ₹ 22.02 ಕೋಟಿ ಹಣ ನೇರವಾಗಿ ಜಮೆಯಾಗಿದೆ. ಇದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದೊಡ್ಡ ಶಕ್ತಿ - [ಮತದಾನದ ಜಾಗೃತಿ ಕಾರ್ಯಕ್ರಮ](https://independentsangramnews.com/voting-awareness-programme/): ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸೇವಾ ಯೋಜನೆ (NSS)ಯ ವತಿಯಿಂದ ವಿಶಾಲ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಂ.ಬಿ. ದಳಪತಿ ಕಾರ್ಯಕ್ರಮಾಧಿಕಾರಿ ರಾಸೇಯೋ ಕವಿವಿ ಧಾರವಾಡ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ, ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ, ಶಿಬಿರಾರ್ಥಿಗಳು ಇಂದಿನ ಜಾತಾ ಮೂಲಕ ಅದರ ಅರಿವು ಮೂಡಿಸುವುದು ತುಂಬಾ ಸಂತೋಷವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಯುವಕರು ಜಾಗೃತರಾಗಿ ಮತದಾನದ ಮಹತ್ವವನ್ನು ಇತರರಿಗೆ ತಿಳಿಸಬೇಕು. ಮತ್ತು ಉತ್ತಮ ನಾಯಕನನ್ನು ಆಯ್ಕೆ ಮಾಡುವದರಲ್ಲಿ ಇ ಮಾದರಿಯಾಗಬೇಕು ಎಂದು ತಿಳಿಸಬೇಕು. ಜೊತೆಗೆ ರಾಷ್ಟ್ರದ ನಿರ್ಮಾಣದಲ್ಲಿ ಯುವಜನರಿಗೆ ನಾಗರಿಕ ಸಂದೇಶವನ್ನು ನೀಡಿದರು. ಮತ್ತೊಬ್ಬ ಅತಿಥಿಯಾದ ಜನಾಬ್ ಕೈರುದ್ದಿನ್ ಶೇಖ್ ಸದಸ್ಯರು ಆಡಳಿತ ಮಂಡಳಿ ಅಂಜುಮನ ಇಸ್ಲಾಂ ಧಾರವಾಡ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಮತದಾನ ಅಗ‌ತ್ಯವಾಗಿದೆ. ಪ್ರತಿಯೊಂದು ಮನೆ ಮನೆ ತೆರಳಿ ಮತದಾನದ ಅರಿವು ಮೂಡಿಸುವುದು ಶಿಬಿರಾರ್ಥಿಗಳ - [ಸುಜ್ಞಾನದ ಅರಿವಿಗೆ ಯುವ ಚಿಂತನಾ ಸಮಾವೇಶ ವೇದಿಕೆಯಾಗಲಿ ಡಾ.ವಿ.ಎಸ್.ವಿ ಪ್ರಸಾದ](https://independentsangramnews.com/may-the-youth-thought-conference-be-a-platform-for-the-realization-of-wisdom-dr-vsv-prasad/): ಸುಜ್ಞಾನದ ಅರಿವಿಗೆ ಯುವ ಚಿಂತನಾ ಸಮಾವೇಶ ವೇದಿಕೆಯಾಗಲಿ ಡಾ.ವಿ.ಎಸ್.ವಿ ಪ್ರಸಾದ ಪ್ರತಿಷ್ಠಾನದ ಕಾರ್ಯಕ್ರಮಗಳು ಯುವ ಸಮುದಾಯ, ಕಲಾವಿದರು, ವೃತ್ತಿನಿರತ ವ್ಯಕ್ತಿಗಳಿಗಾಗಿ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಉಪಯುಕ್ತ ಕಾರ್ಯಗಳನ್ನು ಮಾಡಿರುವುದಕ್ಕೆ ಈ ಯುವ ಚಿಂತನಾ ಸಮಾವೇಶವೇ ಕಾರಣ ಎಂದು ಸ್ವರ್ಣ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೆಶಕರಾದ ಡಾ.ವಿ.ಎಸ್.ವಿ ಪ್ರಸಾದ ಹೇಳಿದರು.   ಅವರು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ,ಧಾರವಾಡ ವತಿಯಿಂದ ಸೃಜನಾ ರಂಗಮಂದಿರದಲ್ಲಿ ಏರ್ಪಡಿಸಿದ್ದ 2ನೇ ಯುವ ಚಿಂತನಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಈ ವರ್ಷದ ಧ್ಯೇಯದಂತೆ ಹಾವೇರಿ, ಕಾರವಾರ, ಧಾರವಾಡದ ಸುಮಾರು 5ಸಾವಿರಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿ ಬದುಕಿನ ಧನಾತ್ಮಕ ಚಿಂತನೆಗೆ ಹಚ್ಚುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು. ಪಾಲಿಕೆ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ ಸಾಂಸ್ಕೃತಿಕ ಕ್ಷೇತ್ರದಲ್ಲಿ ಯುವ ಸಮುದಾಯದ ಮನಸ್ಸುಗಳ ಸೆಳೆದು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಾರ್ತಾಂಡಪ್ಪ ಕತ್ತಿ ಅವರ ತಂಡ ಧಾರವಾಡದಲ್ಲಿ ಉತ್ತಮ - [ಧಾರವಾಡ ಸಿಂಗ್ ಅವಾರ್ಡ್ ಬಹುಮಾನ ವಿತರಣೆ](https://independentsangramnews.com/dharwad-singing-award-prize-distribution/): ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧಾರವಾಡ ಸಿಂಗ್ ಅವಾರ್ಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಪ್ರಥಮ ಬಹುಮಾನ ₹51000 ರೂಪಾಯಿಯನ್ನು ಅಂಜಲಿ ಬಾಗಲಕೋಟೆ ಪಡೆದುಕೊಂಡಿದ್ದಾರೆ ದ್ವಿತೀಯ ಬಹುಮಾನ ₹25000 ರೂಪಾಯಿಯನ್ನು ಪಕ್ಕಿರೇಶ್ ಹಿರೇಮಠ ಪಡೆದುಕೊಂಡಿದ್ದಾರೆ ತೃತೀಯ ಬಹುಮಾನ 15000 ರೂಪಾಯಿಯನ್ನು ಶಿವಾನಂದ ಪರ್ಸನಟ್ಟಿ ಪಡೆದುಕೊಂಡಿದ್ದಾರೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಪ್ರಥಮ ಬಹುಮಾನ ನೀಡಿದ್ದಾರೆ ದ್ವಿತೀಯ ಹಾಗೂ ತೃತೀಯ ಬಹುಮಾನವನ್ನು ಖ್ಯಾತ ಉದ್ಯಮಿದಾರರು ಹಾಗೂ ಸಮಾಜಸೇವಕರಾದ ಮಂಜುನಾಥ್ ಮಕ್ಕಳಗೇರಿ ನೀಡಿದ್ದಾರೆ ಕಾರ್ಯಕ್ರಮದ ಉದ್ಯಮದಾರರಾದ ಮಂಜುನಾಥ್ ಮಕ್ಕಳಿಗಿರಿ ಹಾಗೂ ಸವಿತಾ ಅಮರಶೆಟ್ಟಿ ಅವರು ಉದ್ಘಾಟಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಮಹಿಳಾ ಉಪಾಧ್ಯಕ್ಷರು ಮಂಜುಳಾ ಕುಶಪ್ಪನವರ್ ಪಾಲಿಕೆಯ ಸದಸ್ಯರಾದ ಶಂಕರ್ ಶಳಕೆ ಡಿಎಸ್ಎಸ್ ಮಕುಂಡರಾದ ಶಂಕರ್ ಮುಗಳಿ ರಾಜ್ಯ ಸಂಚಾಲಕರಾದ ತುಕಾರಾಮ್ ಎಸ್ ಮೋಹಿತೆ ,ಹುಸೇನ್ ಸಾಬ್ ಮುಲ್ಲಾ ನವರ್ , ಜಿಲ್ಲಾಧ್ಯಕ್ಷರ ಪ್ರಕಾಶ್ ಪೂಜಾರ್ ,ಪ್ರವೀಣ್ ಮಟಕೊಡ್ಲಿ ,ಅಂಬರೀಷ್ ಕಡೂರು ,ನಾಗರಾಜ್ ಪೂಜಾರ್ ,ಮಂಜುನಾಥ್ - [ಜೀವನದ ಗುರಿ ಸಾಧಿಸಲು ಮೊಬೈಲ್ ಬಿಡಿ : ಮಹಾನಿಂಗ ನಂದಗಾoವಿ](https://independentsangramnews.com/leave-your-mobile-phone-behind-to-achieve-your-life-goals-mahaninga-nandagao/): ಧಾರವಾಡ : ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ವಿದ್ಯಾರ್ಥಿ ಹಂತದಲ್ಲಿ ಮೊಬೈಲ್ ಬಳಕೆ ಮಾಡದೇ ನಿರಂತರ ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕೆಂದು ಹುಬ್ಬಳ್ಳಿ-ಧಾರವಾಡ ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾAವಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಾಳಮಡ್ಡಿಯ ಕೆ.ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಮಾಹಾವಿದ್ಯಾಲಯದಲ್ಲಿ ಜರುಗಿದ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಧಾರವಾಡ ಶಿಕ್ಷಣ ಕಾಶಿ, ಇಲ್ಲಿರುವ ಸೌಲಭಗಳನ್ನು ಪಡೆದುಕೊಡು ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಂಡಿದ್ದಾರೆ. ಪರೀಕ್ಷಾ ಸಮಯದಲ್ಲಿ ಓದದೇ ಪ್ರತಿದಿನ ಅಧ್ಯಯನ ಮಾಡಬೇಕು. ದಿನಪತ್ರಿಕೆಗಳು, ಕಾದಂಬರಿ ಹಾಗೂ ಸಾಹಿತ್ಯವನ್ನು ಓದಿ ಬಹುಮುಖ ವ್ಯಕ್ತಿತ್ವವನ್ನು ಬೆಳಸಿಕೊಳ್ಳಬೇಕು. ಜೀವನದ ಸಾಧನೆಗೈಯಲು ನಿಮ್ಮ ಬಡತನ ಅಡ್ಡಿಯಾಗದೆ ಸಾಧನೆಗೆ ಅದು ಪೂರಕವಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ಸಾಧನೆಗೈದ, ಅರ್ಹ ಹಾಗೂ ಬಡ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯಮಟ್ಟದ ಕ್ರೀಡಾಪಟುಗಳಿಗೆ ನಗದು ಪಾರಿತೋಷಕಗಳನ್ನು ನೀಡಿ ಸತ್ಕರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಸ್.ಎಸ್. ಹನುಮಂತಗಡ ಉಪಸ್ಥಿತರಿದ್ದರು. ಕಾಲೇಜಿನ - [ವಿಶ್ವ ವಿಕಲಚೇತನರ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಆಚರಣೆ](https://independentsangramnews.com/world-day-of-persons-with-disabilities-celebrated-at-district-level/): ಶಿಗ್ಗಾಂವಿ : ನಗರದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಜಿಲ್ಲಾ ಮಟ್ಟದಲ್ಲಿ ಆಚರಿಸಲಾಯಿತು. ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತನನು ಒಳಗೊಂಡ ಸಮಾಜವನ್ನು ರೂಪಿಸುವುದು ಅವಶ್ಯ. ದಿನಾಚರಣೆ ಪ್ರಯುಕ್ತ ಮಾತನಾಡಿದ ಶಿಗ್ಗಾವಿ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕ ಯಾಶೀರ್ ಖಾನ್ ಪಠಾಣ ಅವರು ವಿಕಲಚೇತನರ ಜಿಲ್ಲಾ ಮಟ್ಟದ ಸಮಾವೇಶ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದು ನನ್ನ ಸೌಭಾಗ್ಯ.ದೇವರಿಗೆ ಅತಿ ಪ್ರಿಯವಾದ ಮಾನವ ಕುಲ ಎಂದರೆ ಅದು ವಿಕಲಚೇತನರು. ಈ ಕಾರ್ಯಕ್ರಮದಲ್ಲಿ ಪಂಡಿತ್ ಪುಟ್ಟರಾಜ ಗವಾಯಿ ಅವರನ್ನು ನೆನೆಯಬೇಕು ಬಾಳಿಗೆ ಬೆಳಕು ಜೀವನದಲ್ಲಿ ಏನನ್ನಾದರೂ ಮಾಡಬಹುದು ಎಂಬುದಕ್ಕೆ ಆದರ್ಶಪ್ರಾಯ ಆದವರು. ಮುಂದಿನ ದಿನದಲ್ಲಿ ವಿಕಲಚೇತನರಿಗೆ ಗೌರವಧನ 1400 ಇದ್ದುದನ್ನು 3000 ರ ಬರುವಂತೆ ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇನೆ. ನಿನ್ನ ಆಸೆಯಂತೆ ಒಂದೇ ಸಮಯದಲ್ಲಿ ವಿಶೇಷ ಅನುದಾನ ತಂದು 100 ವಿಕಲಚೇತನ ಗಾಡಿ ವಿತರಿಸಬೇಕು ಎಂಬ ಆಸೆ ಇದೆ ಎಂಬ ಮಾತು ಆಡಿದರು. ಬಿಜೆಪಿ ಮುಖಂಡ ಭರತ್ ಬಸವರಾಜ ಬೊಮ್ಮಾಯಿ ಮಾತನಾಡಿ - [ಶ್ರೀ ವೀರಭದ್ರೇಶ್ವರ ಜಾತ್ರಾಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ](https://independentsangramnews.com/mass-wedding-as-part-of-sri-veerabhadreshwara-jatrahotsava/): ಧಾರವಾಡ : ಮೃತ್ಯುಂಜಯ ನಗರದ ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾಹೋತ್ಸವದ ಅಂಗವಾಗಿ,ಇಂದು ಸಾಮೂಹಿಕ ಕಾರ್ಯಕ್ರಮಗಳು ಜರುಗಿದವು. ಶ್ರೀ ಮುರುಘಾಮಠದ ಶ್ರೀಗಳಾದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ನಾಲ್ಕು ಜೋಡಿಗಳು ಗೃಹಸ್ತಾಶ್ರಮಕ್ಕೆ ಕಾಲಿಟ್ಟರು. ಈ ಸಂಧರ್ಭದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರಾದ ಅರವಿಂದ ಏಗನಗೌಡರ ಪ್ರಸ್ತಾವಿಕವಾಗಿ ಮಾತನಾಡಿ,ಸುಮಾರು ನೂರಾ ಐವತ್ತು ವರ್ಷಗಳ ಇತಿಹಾಸದ ದೇವಸ್ಥಾನ ಇದಾಗಿದ್ದು, ವಿಜೃಂಭನೆಯ ಜಾತ್ರಾ ಮಹೋತ್ಸವಕ್ಕೆ ಇಂದಿಗೆ ಹದಿನೈದು ವರ್ಷಗಕು ತುಂಬಿದ್ದು ಸಂತಸದ ವಿಷಯವಾಗಿದ್ದು, ಪ್ರತಿವರ್ಷ ಸಾಮೂಹಿಕ ವಿವಾಹದ ಜೊತೆಗೆ ಅನೇಕ ಕಾರ್ಯಕ್ರಮಗನ್ನು, ಸಾರ್ವಜನಿಕರ ಸಹಕಾರದಿಂದ ಆಯೋಜಿಸುತ್ತ ಬಂದಿದ್ದೇವೆ. ಈ ವಿಜೃಂಭನೆಗೆ ಈ ಭಾಗದ ತಾಯಂದಿರು,ಹಿರಿಯರು, ಹಾಗೂ ಯುವಕರ ನಿರಂತರ ಶ್ರಮವೇ ಕಾರಣ ಎಂದರು. ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಸಮಿತಿಯ ಅಧ್ಯಕ್ಷರು ಹಾಗೂ ಸಮಿತಿಯ ಶ್ರಮ, ಹಾಗೂ ಸೇವಾ ಮನೋಭಾವವೇ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಕಾರಣ. ಪ್ರತಿವರ್ಷವೂ ಜಾತ್ರಾ ಮಹೋತ್ಸವವು ವಿಜೃಂಭಣೆ ಇಂದ ಜರುಗುತ್ತಿರುವದು ಸಂತಸದ ವಿಷಯ ಎಂದರು.ಹಾಗೂ ನೂತನ - [ಶ್ರೀ ವೀರಭದ್ರೇಶ್ವರ ಜಾತ್ರಾಹೋತ್ಸವದ ಅಂಗವಾಗಿ, ಗುಗ್ಗಳ ಮಹೋತ್ಸವ ಕಾರ್ಯಕ್ರಮ ಜರುಗಿತು](https://independentsangramnews.com/as-part-of-the-sri-veerabhadreshwara-fair-the-guggala-mahotsava-program-was-held2054-2/): ಧಾರವಾಡ ಮೃತ್ಯುಂಜಯ ನಗರದ, ಕೊಟ್ಟಣದ ಓಣಿಯ ಶ್ರೀ ವೀರಭದ್ರೇಶ್ವರ ಜಾತ್ರಾಹೋತ್ಸವದ ಅಂಗವಾಗಿ, ಗುಗ್ಗಳ ಮಹೋತ್ಸವ ಕಾರ್ಯಕ್ರಮ ಜರುಗಿತು. ಮುಂಜಾನೆ 8 ಗಂಟೆಗೆ, ಶಿರಕೋಳದ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಗುಗ್ಗಳ ಕೊಡಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮುತೈದೆಯರು ಆರತಿಯೊಂದಿಗೆ, ಪ್ರಸಿದ್ದ ಪುರವಂತರು ಒಡಪು ಹೇಳುತ್ತಾ, ಸಂಬ ಸಂಬಾಳ ಬಾರಿಸುತ್ತ ಮೆರವಣಿಗೆಯು ಸವದತ್ತಿ ರಸ್ತೆ, ತೊಟಗೇರ ಓಣಿ, ಮೂರೂಸಾವಿರಾಮಠ ರಸ್ತೆ, ಡಿಪೋ ವೃತ್ತ,ಮೂಲಕ ಅರಿಗೇರಿ, ಬಣಗಾರ ಓಣಿ, ಮತ್ತೆ ಸವದತ್ತಿ ರಸ್ತೆಯ ಮೂಲಕ ಶ್ರೀ ಮುರುಘಮಠಕ್ಕೆ ತೆರಳಿ, ಮರಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ, ಕೆಂಡ ಹಾಯುವದರ ಮೂಲಕ ಸಂಪಣ್ಣಗೊಂಡಿತು. ನಂತರ ಸಾವಿರಾರು ಜನ ಗೋದಿ ಹುಗ್ಗಿ ಪ್ರಸಾದವನ್ನು ಸವಿದರು. ಈ ಸಂಧರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಅರವಿಂದ ಏಗನಗೌಡರ, ಮೃತ್ಯುಂಜಯ ಸಿದ್ನಾಳ, ಈಶ್ವರ ಮಾಲಾಗರ, ಮಹಾಂತೇಶ ಕುರಾಟ್ಟಿದೇಸಾಯಿ,ಈರಪ್ಪ ಗೋಡಿಕಟ್ಟಿ, ಸಿದ್ದಪ್ಪ ಕರಡಿಗುಡ್ಡ, ಗುರುಸಿದ್ದಪ್ಪ ಭಾವಿಕಟ್ಟಿ, ಮಹಾಂತೇಶ ಗೊರವನಕೊಳ್ಳ,ಬಸವರಾಜ ಹಡಗಲಿ, ಶಿವಯೋಗಿ ಧರ್ಮಣ್ಣವರ, ಶಿವನಗೌಡ ಪಾಟೀಲ ,ಸೋಮಣ್ಣ ಗೋಡಿಕಟ್ಟಿ,ಶಿವಯೋಗಿ ಹಂಚಿನಾಳ, ಮೃತ್ಯುಂಜಯ ಬಟ್ಟುರ ಸೇರಿದಂತೆ - [ಅಕ್ಷರಸ್ಥರೆ ಹೆಚ್ಚು ಮೋಸ ಹೋಗುತ್ತಾರೆ : ತಾಂತ್ರಿಕ ಜ್ಞಾನ, ಮೊಬೈಲ್ ಬಳಕೆ ಬಗ್ಗೆ ಸಾಮಾನ್ಯ ತಿಳುವಳಿಕೆ ಅಗತ್ಯ : ಜಿಲ್ಲಾಧಿಕಾರಿ ದಿವ್ಯ ಪ್ರಭು](https://independentsangramnews.com/literate-people-are-more-likely-to-get-cheated-technical-knowledge-and-general-understanding-of-mobile-usage-are-necessary-district-collector-divya-prabhu/): ಧಾರವಾಡ : ಪ್ರಸ್ತುತ ದಿನದಲ್ಲಿ ಬಹುತೇಕ ಸಾರ್ವಜನಿಕರಿಗೆ ಆಗಲಿ ಸರ್ಕಾರಿ ನೌಕರರೆ ಆಗಿರಲಿ ತಂತ್ರಜ್ಞಾನದ ಬಗ್ಗೆ ಹೆಚ್ಚು ಮಾಹಿತಿ ಇರುವುದಿಲ್ಲ. ಅದಕ್ಕಾಗಿಯೇ ದಿನದಿನಕ್ಕೆ ಸೈಬರ್ ವಂಚನೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು (ಡಿ.02) ಸಂಜೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಯಿಂದ ಸರ್ಕಾರಿ ನೌಕರರಿಗೆ ಆಯೋಜಿಸಿದ್ದ ಆರ್ಥಿಕ ವಂಚನೆ, ಸೈಬರ್ ಕ್ರೈಮ್, ಡಿಜಿಟಲ್ ಅರೆಸ್ಟ್ ಬಗ್ಗೆ ಮತ್ತು ಕೆಜಿಐಡಿ ಸೌಲಭ್ಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಇಲಾಖೆಯಲ್ಲಿರುವ ಎಲ್ಲ ಅಧಿಕಾರಿಗಳು ಅವರ ಸಂಬಂಧಪಟ್ಟ ವ್ಯಕ್ತಿಗನುಗುಣವಾಗಿ ಹುದ್ದೆಯ ಅರ್ಹತೆ ತಿಳಿದುಕೊಳ್ಳಬೇಕು. ಬೇರೆ ಎಲ್ಲ ಇಲಾಖೆಗಳ ಬಗ್ಗೆಯೂ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಹಾಗೂ ಮೇಲಾಧಿಕಾರಿಗಳು ಕೆಳ ವರ್ಗದ ಸಿಬ್ಬಂದಿಗಳವರಿಗೆ ಯಾವ ರೀತಿ ಕಾರ್ಯಗಾರದ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಂಡು ಅವರಿಗೆ ತರಬೇತಿಯನ್ನು ನೀಡುವುದು ಅತಿ ಸೂಕ್ತ ಎಂದು ಅವರು ಹೇಳಿದರು. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿಕೊಂಡು ಅವರಿಗೆ ಮಾಹಿತಿಯನ್ನು ನೀಡಿದರೆ, ಅತಿ ಉತ್ತಮ. ಪ್ರತಿಯೊಂದು - [ರಾಷ್ಟ್ರೀಯ ದತ್ತು ಮಾಸಾಚರಣೆ ಅಂಗವಾಗಿ ಅತ್ಯುತ್ತಮವಾಗಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಧಾರವಾಡ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪ್ರಥಮ ಸ್ಥಾನ](https://independentsangramnews.com/first-place-goes-to-the-district-child-protection-unit-of-dharwad-district-for-organizing-excellent-awareness-and-sensitization-programs-as-part-of-the-national-adoption-month-celebration/): ಧಾರವಾಡ : ಪ್ರತಿ ವರ್ಷದಂತೆ ಈ ವರ್ಷವೂ ನವ್ಹೆಂಬರ ಮಾಹೆಯಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ಇವರಿಂದ ರಾಷ್ಟ್ರೀಯ ದತ್ತು ಮಾಸಾಚರಣೆ ನವ್ಹೆಂಬರ-2025 ರ ಅಂಗವಾಗಿ ಕಾನೂನು ಬಧ್ಧ ದತ್ತು ಕುರಿತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು, ನರ್ಸಿಂಗ ಕಾಲೇಜು ವಿದ್ಯಾರ್ಥಿಗಳು, ಸ್ವ ಸಹಾಯ ಸಂಘಗಳ ಪ್ರತಿನಿಧಿಗಳಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆಯನ್ನು ನೀಡಲಾಗಿತ್ತು. ಧಾರವಾಡ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷವಾಗಿ ಜಿಲ್ಲೆಯ ಜನಪ್ರತಿನಿಧಿಗಳಿಂದ, ಚಿತ್ರನಟರು ಮತ್ತು ಜಾನಪದ ಕಲಾವಿದರಿಂದ, ಪ್ರಖ್ಯಾತ ಗಣ್ಯವ್ಯಕ್ತಿಗಳಿಂದ ಕಾನೂನು ಬದ್ಧ ದತ್ತು ಕುರಿತು ಸಂದೇಶವನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಯಿತು. ನವ್ಹೆಂಬರ ಮಾಹೆಯ ಕಾರ್ತಿಕ ಮಾಸದ ನಿಮಿತ್ತ ಜಿಲ್ಲೆಯ ದೇವಸ್ಥಾನಗಳು, ಹುಬ್ಬಳ್ಳಿ ರೇಲ್ವೆ ನಿಲ್ದಾಣ, ಹಾಗೂ ಕಛೇರಿಗಳಲ್ಲಿ ದತ್ತು ಕುರಿತು ಚಿತ್ರಗಳನ್ನು ರಂಗೋಲಿ ಮೂಲಕ ಬಿಡಿಸಿ ಪ್ರಚಾರ ಮಾಡಲಾಯಿತು. ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಿಂದ - [ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐ.ಸಿ.ಡಿ.ಎಸ್)](https://independentsangramnews.com/department-of-women-and-child-development-integrated-child-development-scheme-icds/): ಧಾರವಾಡ : ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ ಎಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಜಾರಿಯಲ್ಲಿರುವ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿ ಶ್ರಮಿಸುತ್ತಿದೆ. ಈ ಶ್ರಮವು ದೇಶದ ಮುಂದಿನ ಸಾಮಾಜಿಕ, ಆರ್ಥಿಕ ಬೆಳವಣಿಗೆಗೆ ಹೂಡುತ್ತಿರುವ ಬಂಡವಾಳವಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ 2ನೇ ಅಕ್ಟೋಬರ್ 1975 ರಂದು ಮೈಸೂರು ಜಿಲ್ಲೆಯ, ಟಿ. ನರಸೀಪುರ ತಾಲ್ಲೂಕಿನಲ್ಲಿ 100 ಅಂಗನವಾಡಿ ಕೇಂದ್ರಗಳೊಂದಿಗೆ ಪ್ರಾರಂಭಿಸಲಾಯಿತು. ಈಗ ರಾಜ್ಯದ ಎಲ್ಲಾ ತಾಲ್ಲೂಕುಗಳಿಗೆ ವಿಸ್ತರಿಸಲಾಗಿದೆ. ಗರ್ಭಿಣಿ,ಬಾಣಂತಿ, ಕಿಶೋರಿಯರು ಮತ್ತು 6 ವರ್ಷದೊಳಗಿನ ಮಕ್ಕಳ ಅಭಿವೃದ್ಧಿಯು ಈ ಯೋಜನೆಯ ಮುಖ್ಯ ಗುರಿಯಾಗಿರುತ್ತದೆ. ಯೋಜನೆಯ ಉದ್ದೇಶ : 0-6 ವರ್ಷದ ಮಕ್ಕಳ ಆರೋಗ್ಯ, ಪೌಷ್ಠಿಕ ಮಟ್ಟವನ್ನು ವೃದ್ಧಿಸುವುದು. ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವುದು. ಮಕ್ಕಳಲ್ಲಿ ಸಾವು, ಅನಾರೋಗ್ಯ, ಅಪೌಷ್ಠಿಕತೆ ಮತ್ತು ಶಾಲಾ ಬಿಡುವಿಕೆಯನ್ನು ಕಡಿಮೆಗೊಳಿಸುವುದು. ಶಿಶು ಅಭಿವೃದ್ಧಿ ಕಾರ್ಯಕ್ರಮವನ್ನು ಉತ್ತಮಗೊಳಿಸುವ - [ಡೇ-ನಲ್ಮ ಯೋಜನೆ:ಮಹಿಳಾ ಸ್ವ-ಸಹಾಯ ಸಂಘಗಳಿಂದ ಅರ್ಜಿ ಆಹ್ವಾನ](https://independentsangramnews.com/day-nalma-scheme-applications-invited-from-womens-self-help-groups/): ಧಾರವಾಡ : ಅಣ್ಣಿಗೇರಿ ಪುರಸಭೆ ಕಾರ್ಯಾಲಯ ವ್ಯಾಪ್ತಿಯಲ್ಲಿ ಕೇಂದ್ರ ಪುರಸ್ಕ್ರತ ಅಮೃತ 2.0 ಯೋಜನೆಯ ಘಟಕವಾದ ಅಮೃತ ಮಿತ್ರ ಮಾರ್ಗಸೂಚಿ ಅನುಸಾರ ಡೇ-ನಲ್ಮ್ ಯೋಜನೆ ಅಡಿಯಲ್ಲಿ ರಚನೆಯಾದಂತ ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ ಸಾರ್ವಜನಿಕ ಉಧ್ಯಾನವನ ಮತ್ತು ಆಟದ ಮೈದಾನಗಳ ನಿರ್ವಹಣೆ ಕುರಿತು ತಾಂತ್ರಿಕೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮಹಿಳಾ ಸಂಘಗಳು ಅಣ್ಣಿಗೇರಿ ಪುರಸಭೆ ಕಾರ್ಯಾಲಯದಿಂದ ಅರ್ಜಿ ಪಡೆದು, ಡಿಸೆಂಬರ್ 15, 2025 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ ವಿಭಾಗದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅಣ್ಣಿಗೇರಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. - [ಡಿಸೆಂಬರ್ 13 ರಿಂದ 15 ರವರೆಗೆ ಲ್ಲಾ ಮಟ್ಟದ ಫಲ-ಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬ](https://independentsangramnews.com/all-level-fruit-and-flower-exhibition-and-grain-festival-from-december-13-to-15/): ಧಾರವಾಡ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮತ್ತು ಫಲ-ಪುಷ್ಪ ಪ್ರದರ್ಶನ ಸಮಿತಿ, ಜಿಲ್ಲಾ ಹಾಪ್ ಕಾಮ್ಸ್, ಮೀನುಗಾರಿಕೆ ಇಲಾಖೆ, ಎನ್‍ಆರ್‍ಎಲ್‍ಎಮ್ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ) ಅವರ ಸಹಯೋಗದೊಂದಿಗೆ 2025-26 ನೇ ಸಾಲಿನ ಜಿಲ್ಲಾ ಮಟ್ಟದ ಫಲ-ಪುಷ್ಪ ಪ್ರದರ್ಶನವನ್ನು ಹಾಗೂ ಸಿರಿಧಾನ್ಯ ಹಬ್ಬವನ್ನು ಡಿಸೆಂಬರ್ 13, 2025 ರಿಂದ ಡಿಸೆಂಬರ್ 15, 2025 ರವರೆಗೆ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಆವರಣದಲ್ಲಿ ಆಯೋಜಿಸಲಾಗಿದೆ. ಸದರಿ ಫಲ-ಪುಷ್ಪ ಪ್ರದರ್ಶನ ಹಾಗೂ ಸಿರಿಧಾನ್ಯ ಹಬ್ಬದಲ್ಲಿ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳು, ರೈತರು ಮತ್ತು ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆಗಳು, ಹೂಗಳು ಮತ್ತು ಅಲಂಕಾರಿಕ ಗಿಡಗಳ ಪ್ರದರ್ಶನದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ದೂರವಾಣಿ ಸಂಖ್ಯೆ: 0836-2957801 ಗೆ ಅಥವಾ ಧಾರವಾಡ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಅಥವಾ ಹುಬ್ಬಳ್ಳಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ಜಿಲ್ಲಾಪಂಚಾಯತ) - [ಏಡ್ಸ್ ಬಗ್ಗೆ ಭಯ ಬೇಡ; ಜಾಗೃತಿ ಅಗತ್ಯ; ಏಡ್ಸ್ ಮುಕ್ತ ಜಿಲ್ಲೆ ಮಾಡಲು ಎಲ್ಲರೂ ಶ್ರಮಿಸೋಣ: ಜಿಲ್ಲಾಧಿಕಾರಿ ದಿವ್ಯ ಪ್ರಭು.](https://independentsangramnews.com/dont-be-afraid-of-aids-awareness-is-needed-lets-all-work-hard-to-make-the-district-aids-free-district-collector-divya-prabhu/): ಧಾರವಾಡ : ಏಡ್ಸ್ ರೋಗದ ಬಗ್ಗೆ ಭಯ ಬೇಡ. ಮುಂಗ್ರಾತೆ, ಜಾಗೃತಿ, ಅರಿವು ಅಗತ್ಯವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಏಡ್ಸ್ ರೋಗಿಗಳ ಪ್ರಮಾಣ, ಹರಡುವಿಕೆ ಇಳಿಮುಖವಾಗಿದ್ದು, ಈಗ ಜಿಲ್ಲೆಯಲ್ಲಿ ಏಡ್ಸ್ ಪಾಜಿಟಿವಿಟಿ ದರ ಶೇ. 0.38 ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸಿ, ಧಾರವಾಡ ಜಿಲ್ಲೆಯನ್ನು ಏಡ್ಸ್ಸ್ ಮುಕ್ತ ಜಿಲ್ಲೆಯಾಗಿ ಮಾಡಲು ಎಲ್ಲರೂ ಶ್ರಮಿಸೋಣ, ಅದಕ್ಕಾಗಿ ಅಗತ್ಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಸಂಘಟಿಸೋಣ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು (ಡಿ.01) ಬೆಳಿಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿಶ್ವ ಏಡ್ಸ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿ, ಚಾಲನೆ ನೀಡಿ, ಮಾತನಾಡಿದರು. ಎಚ್.ಐ.ವಿ ಮತ್ತು ಏಡ್ಸ್ ಕಾಯಿಲೆಯು ಕಳೆದ 40 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿದೆ. ಏಡ್ಸ್ ರೋಗವನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸಲು ಜಿಲ್ಲಾ ಮಟ್ಟದಿಂದ ತಾಲೂಕು ಹಾಗೂ ಗ್ರಾಮ ಮಟ್ಟದವರೆಗೆ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳನ್ನು - [ಜಿಲ್ಲಾಡಳಿತ ಮತ್ತು ಜಿ.ಪಂ ತಿಂಗಳ ವಿಶೇಷ ಉಪನ್ಯಾಸ ಮಾಲಿಕೆ](https://independentsangramnews.com/special-lecture-organized-for-government-employees-on-december-2-on-kgid-facilities-financial-fraud-digital-arrest-cyber-crimes-dc-divya-prabhu/): ಕೆಜಿಐಡಿ ಸೌಲಭ್ಯಗಳು ಹಾಗೂ ಆರ್ಥಿಕ ವಂಚನೆ, ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧಗಳ ಕುರಿತು ಡಿ.2 ರಂದು ಸರಕಾರಿ ನೌಕರರಿಗೆ ವಿಶೇಷ ಉಪನ್ಯಾಸ ಆಯೋಜನೆ : ಡಿಸಿ ದಿವ್ಯ ಪ್ರಭು ಧಾರವಾಡ : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ವತಿಯಿಂದ ಬರುವ ಡಿಸೆಂಬರ್ 2, 2025 ರಂದು ಸಂಜೆ 4 ಗಂಟೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕೆಜಿಐಡಿ ವಂತಿಗೆ, ಸಾಲ ಸೌಲಭ್ಯಗಳು ಮತ್ತು ಆರ್ಥಿಕ ವಂಚನೆ, ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧಗಳ ಕುರಿತು ಹಿರಿಯ ಪೊಲೀಸ ಅಧಿಕಾರಿಗಳಿಂದ ಸರಕಾರಿ ನೌಕರರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿ, ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಸರಕಾರಿ ನೌಕರರ ಕರ್ತವ್ಯದ ಸಾಮರ್ಥ್ಯ ಹೆಚ್ಚಿಸಲು ಮತ್ತು ಆರ್ಥಿಕ ವಂಚನೆ, ಮೋಸಗಳಿಂದ ಸುರಕ್ಷಿತವಾಗಿರಲು ಅವರಲ್ಲಿ ಜಾಗೃತಿ ಮೂಡಿಸಲು ವಿಶೇಷ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಎಲ್ಲ ಸರಕಾರಿ ಅಧಿಕಾರಿಗಳು ಮತ್ತು ನೌಕರರು ಜಿಲ್ಲೆಯ ಸಾರ್ವಜನಿಕರಿಗೆ ಜನಸ್ನೇಹಿ - [ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಾಗಿ ಡಿಸೆಂಬರ್ 10, 2025 ರವರೆಗೆ ಕಾಲಾವಕಾಶ](https://independentsangramnews.com/deadline-for-submission-of-claims-and-objections-to-the-draft-electoral-roll-is-december-10-2025/): ಧಾರವಾಡ : ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ-2026 ಕ್ಕೆ ಸಂಬಂಧಿಸಿದಂತೆ, ನವೆಂಬರ್ 25, 2025 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 10, 2025 ರವರೆಗೆ ಕಾಲಾವಕಾಶ ಇದೆ ಎಂದು ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಕಟಿತ ಕರಡು ಮತದಾರರ ಪಟ್ಟಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ 13,917 ಪುರುಷರು, 10,852 ಮಹಿಳೆಯರು ಸೇರಿ ಒಟ್ಟು 24,769 ಮತದರರಿದ್ದಾರೆ. ಕರಡು ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ಅಂತರ್ಜಾಲ ceo.karnataka.gov.in ನಲ್ಲಿ, ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ನೋಂದಾಣಿಧಿಕಾರಿಗಳು ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರ ಅಧಿಕೃತ ಅಂತರ್ಜಾಲ rcbelagavi.karnataka.gov.in ನಲ್ಲಿ ಹಾಗೂ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾಧಿಕಾರಿಗಳವರ - [ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಡಿ.15 ವರೆಗೆ ಅವಧಿ ವಿಸ್ತರಣೆ](https://independentsangramnews.com/karnataka-christian-community-development-corporation-extends-deadline-for-applications-for-various-loan-and-subsidy-schemes-till-december-15/): ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಡಿ.15 ವರೆಗೆ ಅವಧಿ ವಿಸ್ತರಣೆ ಧಾರವಾಡ : ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿಗೆ ಅನುಷ್ಠಾನಗೊಳ್ಳುತ್ತಿರುವ ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳನ್ನು ಕ್ರಿಶ್ಚಿಯನ್ ಸಮುದಾಯದ ಅರ್ಹ ಫಲಾನುಭವಿಗಳಿಂದ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಡಿಸೆಂಬರ್ 15, 2025 ರವರೆಗೆ ಅವಧಿ ವಿಸ್ತರಿಸಲಾಗಿದೆ. ಯೋಜನೆಗಳು: ಅರಿವು ವಿದ್ಯಾಭ್ಯಾಸ ಸಾಲ ಯೋಜನೆ, ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಶ್ರಮಶಕ್ತಿ ಯೋಜನೆ, ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ, ವೃತ್ತಿ ಪ್ರೋತ್ಸಾಹ ಸಾಲ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವ್ಯಾಪಾರ/ ಉದ್ದಿಮೆಗಳಿಗೆ ನೇರಸಾಲ ಯೋಜನೆ, ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 15, 2025 ರೊಳಗಾಗಿ www.kccdclonline.karnataka.gov.in ರ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0836-2748226 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ - [ಚಿತ್ರಕಲಾಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ಪ್ರಶಸ್ತಿ ಪುರಸ್ಕøತ ಕಲಾವಿದರಿಂದ ಜರುಗಿದ ಪ್ರಾತ್ಯಕ್ಷಿಕೆ](https://independentsangramnews.com/demonstration-by-the-award-winning-artist-shri-d-v-h-halabhavi/): ಧಾರವಾಡ : ಚಿತ್ರಕಲಾಶಿಲ್ಪಿ ಶ್ರೀ ಡಿ.ವ್ಹಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್‍ದಿಂದ ಏರ್ಪಡಿಸುವ ಕಲಾ ಚಟುಚಟಿಕೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರಾಂತ ಯುವ ಹಾಗೂ ಹಿರಿಯ ಚಿತ್ರಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡುವ ಪ್ರಕ್ರಿಯೆ ಅಂಗವಾಗಿ ನಿನ್ನೆ (ನ.28) ಪ್ರಶಸ್ತಿ ಪುರಸ್ಕøತ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಏರ್ಪಡಿಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ಬಿ.ಮಾರುತಿ ಅವರು ವಹಿಸಿ, ಮಾತನಾಡುತ್ತಾ, ಪ್ರಶಸ್ತಿ ಪುರಸ್ಕøತಕಲಾವಿದರು ಪ್ರತ್ಯಕ್ಷವಾಗಿ ಕಲಾಕೃತಿಗಳನ್ನು ರಚಿಸುವುದರಿಂದ ಚಿತ್ರಕಲೆಯನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಹಾಗೂ ಕಲಾಕೃತಿಗಳನ್ನು ಯಾವ ರೀತಿಯಾಗಿ ರಚಿಸಬಹುದೆಂಬ ತಿಳುವಳಿಕೆ ಮೂಡುತ್ತದೆ ಹಾಗೂ ಕಲಾವಿದರಲ್ಲಿ ಕಲಾಸಂವಹನ ಏರ್ಪಡುತ್ತದೆ ಎಂದರು. ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿದರು. ವೇದಿಕೆ ಕಲಾವಿದರ ಹಾಗೂ ಅತಿಥಿಗಳನ್ನು ಟ್ರಸ್ಟಿನ ಸದಸ್ಯ ಡಾ.ಬಸವರಾಜಕುರಿಯವರ ಪರಿಚಯಿಸಿದರು. ಟ್ರಸ್ಟಿನ ಸದಸ್ಯ ಹಾಗೂ ಹಿರಿಯಕಲಾವಿದ ಸುರೇಶ ಹಾಲಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ವಿ.ಎಚ್. ಕುರಿಯವರ ಅವರು ನಿರೂಪಿಸಿದರು. ಟ್ರಸ್ಟಿನ ಹಿರಿಯ ಸದಸ್ಯ ಎಫ್.ವ್ಹಿ. ಚಿಕ್ಕಮಠ ಅವರು ವಂದಿಸಿದರು. ಮಧ್ಯಾಹ್ನ ಪ್ರಶಸ್ತಿ ಪುರಸ್ಕøತರ - [ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದುಡಿದ ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ರವರ ಸ್ಮರಣೆ](https://independentsangramnews.com/remembering-jyotirao-pule-the-great-humanitarian-who-worked-for-girls-education/): ಬಡವರ, ನಿರ್ಗತಿಕರ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದುಡಿದ ಮಹಾನ್ ಮಾನವತಾವಾದಿ ಜ್ಯೋತಿರಾವ್ ಪುಲೆ ರವರ ಸ್ಮರಣ ದಿನದ ಹಿನ್ನೆಲೆಯಲ್ಲಿ ನಗರದಾದ್ಯಂತ ಸ್ಮರಣೆ . ಶಿಕ್ಷಣ ಕ್ರಾಂತಿಕಾರಿ ಹರಿಕಾರ ಮಹಾತ್ಮ ಜ್ಯೋತಿಬಾ ಪುಲೆ ಅವರ ಸ್ಮರಣ ದಿನದ ಅಂಗವಾಗಿ ಇಂದು ಧಾರವಾಡ ಜಿಲ್ಲೆಯ ಕೆ ಸಿ ಡಿ ಮೈದಾನ, ಆರ್ ಎನ್ ಶೆಟ್ಟಿ ಮೈದಾನ, ಸೇರಿದಂತೆ ಹಲವಾರು ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ಮಾತನಾಡಿ “ಶಿಕ್ಷಣವು ಸಾರ್ವತ್ರಿಕವಾಗಿರಬೇಕು ಮತ್ತು ಎಷ್ಟೇ ಸಂಖ್ಯೆಯಿದ್ದರೂ, ಅದು ಎಲ್ಲರನ್ನೂ ತಲುಪುವಂತೆ ಇರಬೇಕು” ಎಂದು ಬಲವಾಗಿ ಪ್ರತಿಪಾದಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರು ಈ ದೇಶದ ಬಡವರಿಂದ ಸುಂಕ ವಸೂಲಿ ಮಾಡುತ್ತಿದ್ದ ಪರಕೀಯ ಬ್ರಿಟಿಷ್ ಸರ್ಕಾರವು ಶಿಕ್ಷಣಕ್ಕೆ ಮತ್ತು ನೀಡುವಂತೆ ಧ್ವನಿ ಎತ್ತಿದರು. ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಮಹಿಳೆ ಮತ್ತು ದಲಿತರಿಗೆ ಜ್ಞಾನದ ಬೆಳಕನ್ನು ನೀಡಲು ಅವರು ಶಾಲೆಗಳನ್ನು ಆರಂಭಿಸಿದರು. ಕೇವಲ ಶಿಕ್ಷಣದಿಂದ ಮಾತ್ರವೇ ಮನುಷ್ಯರು ವಿಮರ್ಶಾತ್ಮಕ ಧೋರಣೆ - [ಹೈದರಾಬಾದ್ ರಾಷ್ಟ್ರೀಯ ಮಟ್ಟದ ಸ್ಕಿಪ್ಪಿಂಗ್ ಕಾಂಪಿಟೇಶನ್ ನಲ್ಲಿ ವಿದ್ಯಾರ್ಥಿಗಳು ಭಾಗಿ](https://independentsangramnews.com/students-participate-in-hyderabad-national-level-skipping-competition/): ಧಾರವಾಡ: ರಾಜ್ಯ ಮಟ್ಟದ ಸ್ಕಿಪ್ಪಿಂಗ್ ಕಾಂಪಿಟೇಶನ್ ನಲ್ಲಿ ಚಿನ್ನದ ಪದಕ ಪಡೆದ ಧಾರವಾಡ ವಿದ್ಯಾರ್ಥಿಗಳು ಹೈದರಾಬಾದ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಕಿಪ್ಪಿಂಗ್ ಕಾಂಪಿಟೇಶನ್ ಗೆ ಆಯ್ಕೆಯಾಗಿದ್ದಾರೆ. ಧಾರವಾಡ ಪವನ್ ಸ್ಕೂಲ್ ಹಾಗೂ ಪಿನಿಕ್ಸ್ ಶಾಲೆಯ ವಿದ್ಯಾರ್ಥಿಗಳಾದ ಪ್ರೀತಿ ಹೋನಕೇರಿ, ಆರ್ಯನ್ ಮಾನೆ, ಸ್ನೇಹಾ ಕಂಬಳಿ, ಪ್ರೀತಮ್ ಹೊನಕೇರಿ, ಸಮರ್ಥ ಕಲ್ಯಾಣಿ, ಚೈತನ್ಯ ಮಾನೆ, ಗೌರೀಶ ಕಮತಗಿ, ಕೇತನ್ ಪವಾರ, ಅನುರಾಗ ಇಮಾದಾರ, ಪ್ರೀತಮ ಗುಗಾನಟ್ಟಿ, ಸಮರ್ಥ ಮೂಗಬಸವ, ಶ್ರೀನಿವಾಸ ರೊನದ ಅವರು ನವೆಂಬರ್ 28, 29, 30 ಮೂರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಮಟ್ಟದ ಸ್ಕಿಪ್ಪಿಂಗ್ ಕಾಂಪಿಟೇಶನ್ ನಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ತರಬೇತುದಾರ ಬಿಮಸೇನ ಪರಸಾಪುರ ತರಬೇತಿ ನೀಡಿದ್ದು, ವ್ಯವಸ್ಥಾಪಕ ಉದಯ ಮಾನೆ ಹಾಗೂ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಅಭಿನಂದನೆ ಸಲ್ಲಿಸಿದ್ದಾರೆ. - [ನೈಸರ್ಗಿಕ ವಿಕೋಪಗಳ ಪರಿಹಾರದ ಮೊತ್ತವನ್ನು ರೈತರ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು: ಜಿಲ್ಲಾಧಿಕಾರಿ ದಿವ್ಯ ಪ್ರಭು](https://independentsangramnews.com/natural-calamity-compensation-amount-should-not-be-adjusted-against-farmers-loan-accounts-deputy-commissioner-divya-prabhu/): ಧಾರವಾಡ : ನೈಸರ್ಗಿಕ ವಿಕೋಪಗಳಾದ ಅತೀವೃಷ್ಟಿ, ಪ್ರವಾಹ, ಬರ ಪರಿಸ್ಥಿತಿ, ಆಲಿಕಲ್ಲು ಮಳೆಯಿಂದ ಸ್ಥಳೀಯವಾಗಿ ಉಂಟಾಗುವ ಬೆಳೆಹಾನಿ ಪ್ರಕರಣಗಳಲ್ಲಿ ನಿಯಮಾನುಸಾರ ಅರ್ಹ ಸಾರ್ವಜನಿಕರಿಗೆ, ರೈತ ಫಲಾನುಭವಿಗಳಿಗೆ ಸರ್ಕಾರದ ಆದೇಶದಂತೆ ಬರ ಪರಿಹಾರದ ಮೊತ್ತವನ್ನು ರೈತರಿಗೆ ಬರ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಆದರೆ, ಕೆಲ ಬ್ಯಾಂಕ್ ಅಧಿಕಾರಿಗಳು ಸಾರ್ವಜನಿಕರ, ರೈತರ ಪರಿಹಾರದ ಮೊತ್ತವನ್ನು ಅವರ ಸಾಲ ರೂಪದಲ್ಲಿ ಕಡಿತಗೊಳಿಸುತ್ತಿರುವುದಾಗಿ ಸಾರ್ವಜನಿಕರು, ರೈತರು ತಿಳಿಸಿರುತ್ತಾರೆ. ಪ್ರಯುಕ್ತ ಧಾರವಾಡ ಜಿಲ್ಲೆಯಲ್ಲಿನ ರೈತರ ಬ್ಯಾಂಕ್ ಖಾತೆಗಳಿಗೆ ಬರ, ಅತೀವೃಷ್ಟಿ, ಪ್ರವಾಹ ಹಾಗೂ ಇತರ ನೈಸರ್ಗಿಕ ವಿಕೋಪಗಳ ಪರಿಹಾರದ ಮೊತ್ತವು ಸರ್ಕಾರದಿಂದ ನೇರವಾಗಿ ಡಿ.ಬಿ.ಟಿ ಮೂಲಕ ಸಂದಾಯವಾಗುತ್ತದೆ. ಸದರ ಮೊತ್ತವನ್ನು ಯಾವುದೇ ಕಾರಣಕ್ಕಾಗಿ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಎಲ್ಲ ಬ್ಯಾಂಕ್‍ಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಿರ್ದೇಶಿಸಿದ್ದಾರೆ. ಈ ಕುರಿತು ಜಿಲ್ಲೆಯ ಎಲ್ಲ ಬ್ಯಾಂಕುಗಳು ಮುಖ್ಯಸ್ಥರಿಗೆ, ವ್ಯವಸ್ಥಾಪಕರಿಗೆ ಮತ್ತು ಶಾಖಾ ವ್ಯವಸ್ಥಾಪಕರಿಗೆ ಸೂಚನೆ ನೀಡಿ, ರೈತರಿಗೆ ತೊಂದರೆ ಆಗದಂತೆ ಮತ್ತು ಪರಿಹಾರ - [ಕನ್ನಡ ಮತ್ತು ಸಂಸ್ಕøತಿ ಇಲಾಖೆ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡಲು ಹಾಗೂ ಕಲಾವಿದರ ವಾದ್ಯ ಪರಿಕರ, ವೇಷಭೂಷಣಗಳ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ](https://independentsangramnews.com/department-of-kannada-and-culture-invites-applications-for-financial-assistance-to-registered-organizations-and-for-the-purchase-of-musical-instruments-and-costumes-for-artists/): ಧಾರವಾಡ : ರಾಜ್ಯಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ಕ್ರಿಯಾತ್ಮಕ ಸಾಂಸ್ಕøತಿಕ ಚಟುವಟಿಕೆಗಳ ಮೂಲಕ ನಾಡಿನ ಭಾಷಾ ಸಂವರ್ಧನೆ, ಕಲೆ, ಸಾಹಿತ್ಯ, ಸಂಗೀತ, ಜಾನಪದ, ನೃತ್ಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ ನೋಂದಾಯಿತ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡಲು ಹಾಗೂ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷಭೂಷಣಗಳ ಖರೀದಿಗೆ ಸಹಾಯಧನ ಹಾಗೂ ಚಿತ್ರಕಲೆ, ಶಿಲ್ಪ ಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯಧನ ನೀಡಲು 2025-26ನೇ ಸಾಲಿನ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆಯಡಿ ಸೇವಾಸಿಂಧು sevasindhu.karnataka.gov.in ಮುಖಾಂತರ ಡಿಸೆಂಬರ್ 30, 2025 ರೊಳಗೆ ಅರ್ಜಿ ಸಲ್ಲಿಸಬೇಕು. ಸರ್ಕಾರದ ಆದೇಶ ಸಂಖ್ಯೆ ಕಸಂವಾ 280 ಕಸಧ 2024 (ಭಾ-1) ದಿನಾಂಕ: 31.10.2025ರಲ್ಲಿನ ಮಾರ್ಗಸೂಚಿಯನ್ನು ಸೇವಾಸಿಂಧು ಪೋರ್ಟಲ್ ಹಾಗೂ ನಲ್ಲಿ ಅಳವಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್: www.kannadasiri.karnataka.gov.in ಹಾಗೂ ದೂರವಾಣಿ ಸಂಖ್ಯೆ 08024410547, 8792662814, 8792662816, 08022213530, 9986837037, 9900337738, 9448436877, 9480197511, 9916600027, 08022241325 ಗೆ ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ - [ಧಾರವಾಡ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ](https://independentsangramnews.com/legal-awareness-assistance-program-as-part-of-constitution-day-celebrations-at-dharwad-district-court-hall/): ಧಾರವಾಡ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದಂತೆ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅಭಿಯೋಜನೆ ಇಲಾಖೆ, ಧಾರವಾಡ ವಕೀಲರ ಸಂಘ ಇವರ ಸಹಯೋಗದೊಂದಿಗೆ ನಿನ್ನೆ (ನ.26) ಧಾರವಾಡ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಭಾರತದ ಸಂವಿಧಾನವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ಲಿಖಿತ ಸಂವಿಧಾನವಾಗಿದೆ. ಸಂವಿಧಾನದ ಸಂಪೂರ್ಣ ಅರ್ಥ ಅದರ ಪೀಠಿಕೆಯಲ್ಲಿ ಅಡಗಿದೆ. ಆದ್ದರಿಂದ, ಭಾರತದ ಪ್ರತಿಯೊಬ್ಬ ಪ್ರಜೆಯು ಸಂವಿಧಾನದ ಪೀಠಿಕೆಯನ್ನು ಅರಿತಿರಬೇಕು. ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳೊಂದಿಗೆ ಕರ್ತವ್ಯವನ್ನು ಪಾಲಿಸುವ ಮನೋಭಾವನೆ ಎಲ್ಲರಲ್ಲಿಯೂ ಮೂಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಾಯಂ ಜನತಾ ನ್ಯಾಯಾಲಯ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುವರ್ಣಾ ಕೆ. ಮಿರ್ಜಿ ಅವರು ಅಧ್ಯಕ್ಷತೆ ವಹಿಸಿದ್ದರು. - [ಹೆಚ್ಚುವರಿ ಅನುದಾನ ಬಿಡುಗಡೆ; ರೈತರ ಖಾತೆಗೆ ಡಿಬಿಟಿ ಮೂಲಕ ಇಂದೇ ಜಮೆ:ಜಿಲ್ಲಾಧಿಕಾರಿ ದಿವ್ಯ ಪ್ರಭು](https://independentsangramnews.com/additional-grant-released-to-be-deposited-in-farmers-accounts-through-dbt-today-district-magistrate-divya-prabhu/): ಧಾರವಾಡ ಜಿಲ್ಲೆಯಲ್ಲಿ ಆಗಸ್ಟ್-2025 ರಲ್ಲಿ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿಗಳಿಗೆ ಮುಖ್ಯಮಂತ್ರಿಗಳಿಂದ ವಿಶೇಷ ಪ್ಯಾಕೇಜ್ ಅಡಿ ಜಿಲ್ಲೆಗೆ ರೂ. 63.77 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ; ರೈತರ ಖಾತೆಗೆ ಡಿಬಿಟಿ ಮೂಲಕ ಇಂದೇ ಜಮೆ:ಜಿಲ್ಲಾಧಿಕಾರಿ ದಿವ್ಯ ಪ್ರಭು ಧಾರವಾಡ : ಆಗಸ್ಟ್-2025 ಮಾಹೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿಗಳಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ನ.27) ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಧಾರವಾಡ ಜಿಲ್ಲೆಗೆ 63.77 ಕೋಟಿ ಹೆಚ್ಚುವರಿಯಾಗಿ ಅನುದಾನವನ್ನು ಪ್ರತಿ ಹೆಕ್ಟರ್‍ಗೆ ರೂ. 8,500 ಗಳನ್ನು ವಿತರಿಸಲು ಕ್ರಮವಹಿಸಿ, ರೈತರ ಖಾತೆಗಳಿಗೆ ಇನ್‍ಪುಟ್ ಸಿಬ್ಸಿಡಿ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಸರ್ಕಾರದ ಆದೇಶದಂತೆ, 2025-26ನೇ ಸಾಲಿನ ಆಗಸ್ಟ್-2025 ಮಾಹೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಉಂಟಾದ ಬೆಳೆ ಹಾನಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು, ವಿಶೇಷ ಪ್ಯಾಕೇಜ್ ಅಡಿಯಲ್ಲಿ ರಾಜ್ಯ - [ಜೋಶಿಯವರ ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ](https://independentsangramnews.com/fruit-and-vegetables-distributed-to-patients-as-part-of-joshis-birthday-celebrations/): ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿಯವರ ಹುಟ್ಟು ಹಬ್ಬದ ಅಂಗವಾಗಿ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾದ ರಾಜು ಕಾಳೆ ನೇತೃತ್ವದಲ್ಲಿ ಚಿಟಗುಪ್ಪಿ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಲಿಂಗರಾಜ ಪಾಟೀಲರವರು ಮಾತನಾಡಿ ಮೋದಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿ ಪ್ರಲ್ಹಾದ ಜೋಶಿಯವರು  ಅನೇಕ ಜನೋಪಯೋಗಿ ಕೆಲಸಗಳನ್ನು ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನತೆಗೆ ಹತ್ತಿರವಾಗಿದ್ದಾರೆ ಮತ್ತು ಕೇಂದ್ರದಲ್ಲಿ ಸಚಿವರಾಗಿ ಇನ್ನೂ ವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೋಲಿಲ್ಲದ ಸರ್ದಾರ್ ಎನಿಸಿಕೊಂಡಿದ್ದಾರೆ ಮತ್ತು ಪ್ರತಿಯೊಬ್ಬ ಪದಾಧಿಕಾರಿಗೆ ಮತ್ತು ಕಾರ್ಯಕರ್ತರ ಹುಟ್ಟು ಹಬ್ಬದ  ದಿನದಂದು ತಮ್ಮ ಬಿಡುವಿಲ್ಲದ ಸಮಯದಲ್ಲೂ ಸಹ ಕರೆ ಮಾಡಿ ಶುಭಾಶಯ ಕೊರುತ್ತಾರೆ ಮತ್ತು ದೇವರು ಇನ್ನೂ ಹೆಚ್ಚಿನ ಆಯು ಆರೋಗ್ಯ ದಯಪಾಲಿಸಲಿ ಎಂದರು. ಕಾರ್ಯಕ್ರಮದಲ್ಲಿ ಸಂತೋಷ ಚವ್ಹಾಣ, ಮಹೇಂದ್ರ ಕೌತಾಳ ರಾಜನ್ನ ಕೊರವಿ, ಬೀರಪ್ಪ ಖಂಡೇಕರ, ಉಮಾ ಮುಕುಂದ,ವಸಂತ ನಾಡಜೋಷಿ,ಅಶೋಕ ವಾಲ್ಮೀಕಿ, ಪ್ರವೀಣ ಹುರಳಿ,ರಾಮನಗೌಡ ಶೇಟ್ಟನಗೌಡ್ರ,ಕ್ರಷ್ಣ ಗಂಡಗಾಳೆಕರ, ಅಕ್ಕಮ್ಮ ಹೆಗಡೆ,ಪ್ರಕಾಶ ಕ್ಯಾರಕಟ್ಟಿ, ವೆಂಕಟೇಶ ಚಚಡಿ,ಲಿಂಗರಾಜ ಬೆಳ್ಳಿಗಟ್ಟಿ,ಪ್ರಶಾಂತ - [ಪ್ರಲ್ಹಾದ್ ಜೋಶಿ ಜನ್ಮದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಬ್ಯಾಗ್, ಎಕ್ಸಾಂ ಕಿಟ್ ವಿತರಣೆ](https://independentsangramnews.com/distribution-of-bags-exam-kits-to-school-children-on-the-occasion-of-pralhad-joshis-birthday/): ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ನಾಗರಹಳ್ಳಿ ಹೊರವಲಯದ ಜ್ಞಾನಮಾತಾ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳಿಗೆ ವಿಎಕೆ ಫೌಂಡೇಶನ್ ವತಿಯಿಂದ ಧಾರವಾಡ ಸಂಸದರು ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಬ್ಯಾಗ್ ಹಾಗೂ ಎಕ್ಸಾಂ ಕಿಟ್ ವಿತರಿಸಲಾಯಿತು. ಬಳಿಕ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ವೆಂಕಟೇಶ ಕಾಟವೆ, ದೇವರನ್ನು ಯಾರು ನೋಡಿಲ್ಲ, ಆದರೆ ವಿದ್ಯಾರ್ಥಿಗಳು ಶಿಕ್ಷಕರಲ್ಲಿ ದೇವರನ್ನು ನೋಡಬೇಕು. ಅವರ ಮಾರ್ಗದರ್ಶನದಲ್ಲಿ ಉತ್ತಮ ಶಿಕ್ಷಣ ಪಡೆದು, ತಂದೆತಾಯಿಗಳ ಕನಸನ್ನು ಸಾಕಾರಗೊಳಿಸಬೇಕು ಎಂದರು. ಶಾಲಾ ವಿದ್ಯಾರ್ಥಿಗಳು ಸಮಯದ ಮೌಲ್ಯ ಹಾಳು ಮಾಡಿಕೊಳ್ಳದೆ ಶೈಕ್ಷಣಿಕ ಚಟುವಟಿಕೆಗೆ ಮಹತ್ವ ನೀಡಬೇಕು. ಹೆತ್ತ ತಾಯಿ, ತಂದೆ ಹಾಗೂ ಶಿಕ್ಷಣ ಕಲಿಸುವ ಗುರುಗಳಿಗೆ ಗೌರವ ನೀಡಬೇಕು. ಇವತ್ತಿನ ವಿದ್ಯಾರ್ಥಿಗಳು ನಾಳೆಯ ನಾಗರಿಕರು, ಈ ದಿಸೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆಯಿಂದ ಓದಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು ಎಂದು ಹೇಳಿದರು. ಈಗಾಗಲೇ ಕಲಘಟಗಿ, ಕುಂದಗೋಳ, ನವಲಗುಂದ, ಹು-ಧಾ ಸೇರಿದಂತೆ ವಿವಿಧ ಶಾಲೆಗಳಿಗೆ ಸುಮಾರು 18000 ಕ್ಕೂ - [ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿನ ದಂಡ ಭರಣಕ್ಕೆ ನೀಡಿರುವ ರಿಯಾಯೀತಿ ಅವಕಾಶ ಬಳಸಿಕೋಳ್ಳಿ: ಅಪರ ಸಾರಿಗೆ ಆಯುಕ್ತ ಕೆ. ಟಿ. ಹಾಲಸ್ವಾಮಿ](https://independentsangramnews.com/take-advantage-of-the-concession-given-for-paying-fines-in-traffic-violation-cases-additional-transport-commissioner-k-t-halaswamy/): ಧಾರವಾಡ : ರಾಜ್ಯ ಸರ್ಕಾರವು ವಿವಿಧ ರೀತಿಯ ಸಂಚಾರ ವಾಹನಗಳ ನಿಯಮ ಉಲ್ಲಂಘನೆ ಕುರಿತ ಪ್ರಕರಣಗಳಲ್ಲಿ ವಿಧಿಸಿದ ದಂಡದ ಮೊತ್ತದಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ, ಅಧಿಸೂಚನೆ ಹೊರಡಿಸಿದೆ. ಇಂತಹ ಪ್ರಕರಣಗಳನ್ನು ಇತ್ಯರ್ಥಕ್ಕೆ ಸಾರ್ವಜನಿಕರು, ವಿಶೇಷವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವವರಿಗೆ ಪೋಲೀಸ್ ಇಲಾಖೆಯ ಸಂಚಾರಿ ಈ ಚಲನಗಳಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ ಎಂದು ಅಪರ ಸಾರಿಗೆ ಆಯುಕ್ತ ಕೆ. ಟಿ. ಹಾಲಸ್ವಾಮಿ ಅವರು ಹೇಳಿದರು. ಅವರು ಬೆಳಿಗ್ಗೆ ನವನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸಾರಿಗೆ ಇಲಾಖೆಯ ವಿವಿಧ ವಿಷಯಗಳ ಕುರಿತು ಪತ್ರಿಕಾಗೋಷ್ಠಿ ಜರುಗಿಸಿ ಮಾತನಾಡಿದರು. ಕರ್ನಾಟಕ ಸರ್ಕಾರವು ಪೆÇಲೀಸ್ ಇಲಾಖೆಯ ಸಂಚಾರಿ ಇ-ಚಲನ್‍ನಲ್ಲಿ ದಿನಾಂಕ: 11/02/2023ರ ಒಳಗಾಗಿ ದಾಖಲಾಗಿರುವ ಪ್ರಕರಣಗಳಲ್ಲಿ ಹಾಗೂ ಸಾರಿಗೆ ಇಲಾಖೆಯಲ್ಲಿ 1991 ರಿಂದ 2020 ರವರೆಗೆ ದಾಖಲಾದ ಪ್ರಕರಣಗಳಲ್ಲಿ ಶೇ.50 ರಷ್ಟು ವಿನಾಯಿತಿಯನ್ನು ನೀಡಿದೆ. ಸಂಬಂಧಪಟ್ಟ ವಾಹನದ ಮಾಲೀಕರು ನವೆಂಬರ್ 21 ರಿಂದ 2025 ರಿಂದ - [ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ವಿವಿಧ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ](https://independentsangramnews.com/district-health-and-family-welfare-society-invites-applications-for-various-temporary-posts-under-the-national-health-mission-scheme/): ಧಾರವಾಡ : ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಸನ್ 2024-25 ನೇ ಸಾಲಿನಲ್ಲಿ ಭರ್ತಿಯಾಗಿ ಖಾಲಿ ಉಳಿದಿರುವ ಹುದ್ದೆಗಳು ಮತ್ತು ಸನ್ 2025-26 ನೇ ಸಾಲಿನ ಆರ್‍ಓಪಿ ಯಲ್ಲಿ ಅನುಮೋದನೆಯಾಗಿರುವ ಹುದ್ದೆಗಳಿಗೆ, ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿದಾರು ರಾಷ್ಟ್ರೀಯ ಆರೋಗ್ಯ ಅಭಿಯಾನದ ಸುತ್ತೋಲೆ ಅನುಸಾರ ಕಂಪ್ಯೂಟರ್ ಸಾಕ್ಷರತೆ ಪರಿಕ್ಷೆಯಲ್ಲಿ ತೇರ್ಗಡೆಯಾದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಒಟ್ಟು 42 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ, ಆಯ್ಕೆ ಪ್ರಕ್ರೀಯೆಯನ್ನು ಹಾಗೂ ಯೋಜನೆಯ ನಿಯಮಾನುಸಾರ ಮೇರಿಟ್ ಹಾಗೂ ರೊಷ್ಠರ್ ಆಧಾರದ ಮೇಲೆ ಮಾರ್ಚ್ 31, 2026 ವರೆಗೆ ಅಥವಾ ಸರ್ಕಾರದ ನಿಯಮಾವಳಿ ಸುತ್ತೋಲೆಯ ಪ್ರಕಾರ ಯಾವುದು ಮೊದಲು ಅದಕ್ಕೆ ಅನುಗುಣವಾಗಿ ವಿವಿಧ ಕಾರ್ಯಕ್ರಮದ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಡಿಸೆಂಬರ್ 02 ಮತ್ತು 03, 2025 ರಂದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿ, ಆಯ್ಕೆ ಪ್ರಕ್ರೀಯೆಯನ್ನು ಕೈಗೊಳ್ಳಲಾಗುವುದು. ಅರ್ಹ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಮೂಲ ದಾಖಲಾತಿಗಳೊಂದಿಗೆ ಡಿಸೆಂಬರ್ 02 ಮತ್ತು 03, - [ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇರ ಗುತ್ತಿಗೆ ಆಧಾರ ಮೇಲೆ ತಾಲ್ಲೂಕಾ ಯೋಜನಾ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ](https://independentsangramnews.com/women-and-child-development-department-invites-applications-for-the-post-of-taluka-project-coordinator-on-direct-contract-basis/): ಧಾರವಾಡ : ಬೆಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಹಾಗೂ ಧಾರವಾಡ ಜಿಲ್ಲಾಧಿಕಾರಿಗಳವರ ಅನುಮೋದನೆಯಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಹುಬ್ಬಳ್ಳಿ-ಧಾರವಾಡ (ಶಹರ) ಕಛೇರಿಯ ತಾಲ್ಲೂಕಾ ಯೋಜನಾ ಸಂಯೋಜಕರ ಹುದ್ದೆಯು ರಾಜೀನಾಮೆಯಿಂದ ತೆರವಾಗಿದ್ದು, ನೇರ ಗುತ್ತಿಗೆ ಆಧಾರ ಮೇಲೆ ನಿರ್ವಹಿಸಲ್ಪಡುವ ಸದರಿ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳೀಯ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಛೇರಿಗೆ ಖುದ್ದಾಗಿ ಭೇಟಿ ನೀಡಿ, ಅರ್ಜಿಯನ್ನು ಪಡೆದು ಡಿಸೆಂಬರ್ 12, 2025 ಸಂಜೆ 5:30 ರೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ 0836-2447850 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. - [ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ : ಸಭಾಪತಿ ಬಸವರಾಜ ಹೊರಟ್ಟಿ](https://independentsangramnews.com/it-is-the-responsibility-of-all-of-us-to-maintain-the-unity-and-integrity-of-the-country-speaker-basavaraj-horatti/): ಧಾರವಾಡ : ವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಲಿಖಿತ ಸಂವಿಧಾನ ನಮ್ಮದು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ನಮ್ಮ ಸಂವಿಧಾನ ರಚನೆಯಾಗಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು. ಅವರು  ಬೆಳಿಗ್ಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯು ಸಂಯುಕ್ತವಾಗಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯಗಳನ್ನು ಅರಿತುಕೊಳ್ಳಬೇಕು. ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ ಎಂದು ಅವರು ತಿಳಿಸಿದರು. ನಮ್ಮ ಸಂವಿಧಾನವು ಕೇವಲ ಕಾನೂನಿನ ಪುಸ್ತಕವಲ್ಲ. ಅದು ನಮ್ಮ ದೇಶದ ಆತ್ಮವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಜೊತೆಗೆ ಸಂವಿಧಾನ ವಿಧಿಸಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿಯು ಎಲ್ಲರ ಮೇಲಿದೆ ಎಂದು ಅವರು ತಿಳಿಸಿದರು. ಅಂಬೇಡ್ಕರ್ ಅವರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅವರ ಹೋರಾಟ, ಶಿಕ್ಷಣ ಮತ್ತು ಸಾಧನೆಗಳು ನಮಗೆ - [BJP ಕಚೇರಿಯಲ್ಲಿ ಸಂವಿಧಾನ ಸಮರ್ಪಣಾ ದಿವಸ ಆಚರಣೆ](https://independentsangramnews.com/constitution-dedication-day-celebration-at-bjp-office/): ಸಂವಿಧಾನ ಸಮರ್ಪಣಾ ದಿವಸವನ್ನು ಇಂದು ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಇಂದು ಅಧ್ಯಕ್ಷರಾದ ತಿಪ್ಪಣ್ಣಾ ಮಜ್ಜಗಿಯವರ ಅಧ್ಯಕ್ಷತೆಯಲ್ಲಿ ಡಾ-ಬಾಬಾಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವದರ ಮೂಲಕ ಆಚರಿಸಲಾಯಿತು. ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಹಣಮಂತ ಹರಿವಾಣ ಪ್ರಾಸ್ತಾವಿಕ ಮಾತನಾಡಿ ಸಂವಿಧಾನದ ಸಮಾನತೆಯ ಹರಿಕಾರ ಮತದಾನದ ಹಕ್ಕು ಸಾರ್ವಭೌಮತ್ವವನ್ನು ನೀಡಿದೆ. ಪ್ರತಿ ಜನತೆಯ ಬದುಕುವ ದಾರಿದೀಪವಾಗಿದೆ. ನಮಗೆ ಸಂವಿಧಾನದ ಬಗ್ಗೆ ಅರಿವಿರಬೇಕು ಸರ್ಕಾರದ ಹಾಗೂ ನಮ್ಮ ಪಕ್ಷದ ಮುಖಂಡರು ಅತೀ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಆಶಯದಂತೆ ಸೌಲಭ್ಯ ದೊರಕಬೇಕು. ಏಸ್ಸ್ ಜಿ ಪವಾರ್ ಸೀನಿಯರ್ ಸಿಟಿಜನ್ ಫಾರ್ ಇಂಡಿಯನ್ (ರಿಟೈರ್ಡ) ರವರು ಮಾತನಾಡಿ ಸಂವಿಧಾನದ 76 ನೇ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜನೇವರಿ 26 1950 ಸಂವಿಧಾನ ಸಮರ್ಪಣಾ ದಿನವನ್ನು ಸಂಪೂರ್ಣವಾಗಿ ಜಾರಿಗೆ ತರಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದುಳಿದವರಿಗೆ ಶೋಷಿತ ವರ್ಗದವರಿಗೆ ಹೆಚ್ಚಿನ ಪ್ರಾಶಸ್ತ್ಯ ವಿರಲಿಲ್ಲ 1936 ರಲ್ಲಿ ಬಾಬಾಸಾಹೇಬ್ ಲೇಬರಕ್ಲಾಸ್ ಪಕ್ಷವನ್ನು ಕಟ್ಟಿ ಲೇಬರ್ ಸಂಬಂಧವಾಗಿ ಹೋರಾಡಿ 14 ತಾಸು - [ತಾತ್ಕಾಲಿಕ ಸಿಎಂ ಬೇಡ; ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು : ಬಿ.ವೈ.ವಿಜಯೇಂದ್ರ](https://independentsangramnews.com/no-temporary-cm-we-need-a-chief-minister-who-will-respond-to-farmers-problems-b-y-vijayendra/): ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಡಿ ತಾತ್ಕಾಲಿಕ ಸಿಎಂ ಬೇಡ; ರೈತರ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಬೇಕು: ಬಿ.ವೈ.ವಿಜಯೇಂದ್ರ   ದಾವಣಗೆರೆ : ರಾಜ್ಯಕ್ಕೆ ತಾತ್ಕಾಲಿಕ ಮುಖ್ಯಮಂತ್ರಿಗಳು ಬೇಡ; ರೈತರ ಜ್ವಲಂತ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಮತ್ತು ಸರಕಾರ ಬೇಕೆಂಬ ಅಪೇಕ್ಷೆ ಜನರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಕ್ಕೆ ಇವತ್ತು ಚಾಲನೆ ನೀಡಿ ಅವರು ಮಾತನಾಡಿದರು. ಹಂಗಾಮಿ ಮುಖ್ಯಮಂತ್ರಿ, ತಾತ್ಕಾಲಿಕ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕಾಗಿಲ್ಲ; ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೋ, ಇನ್ಯಾರು ಸಿಎಂ ಆಗುತ್ತಾರೋ ಎಂಬುದು ರಾಜ್ಯದ ಜನರಿಗೆ ಆಸಕ್ತಿ ಇಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನ ಪ್ರಾರಂಭಕ್ಕೆ ಮುಂಚಿತವಾಗಿ ರೈತರ ಜ್ವಲಂತ ಸಮಸ್ಯೆಗೆ ಸ್ಪಂದಿಸುವ ಮುಖ್ಯಮಂತ್ರಿ ಮತ್ತು ಸರಕಾರ ಬೇಕೆಂಬ ಅಪೇಕ್ಷೆ ಜನರದು ಎಂದು ತಿಳಿಸಿದರು. ಕಾಟಾಚಾರಕ್ಕೆ ಬೆಳಗಾವಿಯಲ್ಲಿ ಅಧಿವೇಶನ ಮಾಡಬೇಡಿ. ಯಾವ ಪುರುಷಾರ್ಥಕ್ಕೆ ಅಧಿವೇಶನ ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ತಮ್ಮ ಸಮಸ್ಯೆಯನ್ನು - [ಕ.ವಿ.ವಿ ಪ್ರೊಫೆಸರ್ ನಾಟಿಕ‌ರ್ ಮನೆ ಮೇಲೆ ಲೋಕಾಯುಕ್ತ ದಾಳಿ](https://independentsangramnews.com/lokayukta-raids-k-v-v-professor-natikars-house/): ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೆಸರ್ ಸುಭಾಷಚಂದ್ರ ನಾಟಿಕರ್ ಅವರ ನಿವಾಸ ಹಾಗೂ ಅವರ ವಿಭಾಗದ ಮೇಲೆ ಮಂಗಳವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ನಾಟಿಕ‌ರ್ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಕವಿವಿ ಅಂಬೇಡ್ಕ‌ರ್ ಸ್ಟಡೀಸ್ ಸಂಯೋಜಕರೂ ಆಗಿದ್ದಾರೆ. ಧಾರವಾಡದ ಶೆಟ್ಟ‌ರ್ ಕಾಲೊನಿಯಲ್ಲಿ ಮನೆ ಹೊಂದಿರುವ ನಾಟಿಕ‌ರ್ ಅವರು ಕೊಪ್ಪಳದ ತಾಳಿಕೋಟೆಯಲ್ಲೂ ಸ್ವಂತ ಮನೆ ಹೊಂದಿದ್ದಾರೆ. ಎರಡೂ ಕಡೆಗಳಲ್ಲೂ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಇದರ ಜೊತೆಗೆ ಕವಿವಿ ಸಮಾಜಶಾಸ್ತ್ರ ವಿಭಾಗ, ಅಂಬೇಡ್ಕ‌ರ್ ಸ್ಟಡೀಸ್ ವಿಭಾಗದ ಮೇಲೂ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ. - [ವಕೀಲರ ಪರಿಷತ್ ನ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ವ್ಹಿ.ಡಿ.ಕಾಮರಡ್ಡಿ ಆಯ್ಕೆ](https://independentsangramnews.com/advocate-v-h-d-kamaraddi-elected-as-new-president-of-the-bar-council/): ಧಾರವಾಡ : ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ನ್ಯಾಯವಾದಿ ವ್ಹಿ.ಡಿ.ಕಾಮರಡ್ಡಿ ಅವರನ್ನು ಸೋಮವಾರ ಶರಣಬಸವ ಅಂಗಡಿ ಲಾ ಫಮ್೯ ನಲ್ಲಿ ಸನ್ಮಾನಿಸಲಾಯಿತು. ಧಾರವಾಡ ವಕೀಲರ ಸಂಘದ ಮಾಜಿ ಅಧ್ಯಕ್ಷರು ಆದ ಕಾಮರಡ್ಡಿ ಅವರನ್ನು ಶಾಲು‌ ಹೊದಿಸಿ, ಕಾಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಮರಡ್ಡಿ, ತಮ್ಮ ವಕೀಲ ವೃತ್ತಿಯಲ್ಲಿ ಹಿರಿ-ಕಿರಿಯರು ತೋರಿದ ಪ್ರೀತಿ ಅಪಾರ.ಧಾರವಾಡ ವಕೀಲರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿನ ಎಲ್ಲ ಸದಸ್ಯರ ಸಹಕಾರ ತಮ್ಮನ್ನು‌ ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿತು ಎಂದರು. ನ್ಯಾಯವಾದಿ ಶರಣಬಸವ ಅಂಗಡಿ ಮಾತನಾಡಿ, ಹಿರಿಯರಾದ ಕಾಮರಡ್ಡಿ‌ ಅವರ ವೃತ್ತಿಧರ್ಮ ಪಾಲನೆ‌ ಗಮನಾರ್ಹ ಸಂಗತಿ. ಅಲ್ಲದೇ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಕಾಣುವ ಅವರ ಸೌಜನ್ಯ, ಸರಳತೆ ಕಿರಿಯರಿಗೆ ಸದಾ ಅನುಕರಣೀಯ ಎಂದರು. ಧಾರವಾಡ ವಕೀಲರ ಸಂಘದ ಮಾಜಿ ಅಧ್ಯಕ್ಷ ‌ಸಿ.ಎಸ್. ಪೊಲೀಸ್ ಪಾಟೀಲ, ನ್ಯಾಯವಾದಿಗಳಾದ ಎಚ್.ಎಫ್.ಹೆಬ್ಬಾಳ, ರಾಚನಗೌಡ ಪಾಟೀಲ, ಗವಿಸಿದ್ದಪ್ಪ ದ್ಯಾಮಣ್ಣವರ, ಮೃತ್ಯುಂಜಯ ಮುಷ್ಠಿ, ಎ.ಸಿ.ಕೋರಿ ಇತರರಿದ್ದರು. - [ಕಾರ್ತಿಕ ದೀಪೋತ್ಸವ ಕಾರ್ಯಕ್ರಮ](https://independentsangramnews.com/karthika-dipotsava-programme/): ಧಾರವಾಡ : ಧಾರವಾಡ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ತಿಂಗಳ ಕೊನೆಯ ಕಾರ್ತಿಕ ಮಾಸದ ವೀರಾಂಜನೇ ಸ್ವಾಮಿಯ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಿತು. ಪೂಜ್ಯ ಶ್ರೀ ಷ.ಬ್ರ.ಅಭಿನವ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಪಂಚಗ್ರಹ ಹಿರೇಮಠ, ಅಮ್ಮಿನಭಾವಿ, ಪೂಜ್ಯ ಶ್ರೀ ಶಿವಾಚಾರ್ಯ ರತ್ನ ತಪೊಭೂಷಣ,ಶ್ರೀ ಷ.ಬ್ರ.ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು. ಶ್ರೀ ಗುರು ಗಡ್ಡದೇಶ್ವರ ಸಂಸ್ಥಾನ ಹಿರೇಮಠ ಕಟಕೋಳ,ಚಂದರಗಿ ಶ್ರೀ ಷ.ಬ್ರ.ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಶಿರಕೋಳ,ನವಲಗುಂದ, ಇವರೆಲ್ಲ ಸ್ವಾಮೀಜಿಗಳು ಕಾರ್ತಿಕ ದೀಪ ಬೆಳಗಿಸುವುದರ ಮುಖಾಂತರ ಲೋಕ ಕಲ್ಯಾಣಕ್ಕೆ ಒಳ್ಳಯದಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ನಾಗಯ್ಯ ಶಿವಪುತ್ರಯ್ಯ ಹಿರೇಮಠ, ಚಿದಾನಂದ ಬಸವಪ್ರಬು ಕೋರೆ,ಶಂಕರ ಮುಗದ,ಮಲ್ಲನಗೌಡ ಚಿಕ್ಕನಗೌಡ್ರ,ಲವಕುಶ್ ಹುಲಗೂರ್,ನಿಂಗಪ್ಪ ಜಟ್ಟಿನಗೌಡ್ರ,ಶಿವಾನಂದ ಜಾಲಗಾರ,ಸೋಮ್ಮಣ್ಣ ಬಳ್ಳೋಡಿ,ಮಾಂತಯ್ಯ,ನಿಂಗಪ್ಪ,ಬಸನಗೌಡ ಮತ್ತು ಗ್ರಾಮದ ತಾಯಂದಿರು,ಯುವಕರು ಹಾಜರಿದ್ದರು. - [ಜಾಗತಿಕ ಮಟ್ಟದಲ್ಲಿ ಸಂದಿಗ್ಧ ಪರಿಸ್ಥಿತಿ ಮತ್ತು ಸವಾಲುಗಳನ್ನು ಎದುರಿಸುವ ನಾಯಕತ್ವದ ಅವಶ್ಯಕತೆ ಇದೆ - ಕರಣ್ ಬಿಲಿಮೋರಿಯಾ](https://independentsangramnews.com/there-is-a-need-for-leadership-to-address-the-dilemmas-and-challenges-on-a-global-scale-karan-bilimoria/): ಧಾರವಾಡ : ಜಾಗತಿಕ ಮಟ್ಟದಲ್ಲಿ ಸಂದಿಗ್ಧ ಪರಿಸ್ಥಿತಿ ಮತ್ತು ಸವಾಲುಗಳನ್ನು ಎದುರಿಸುವ ನಾಯಕತ್ವದ ಅವಶ್ಯಕತೆ ಇದೆ ಎಂದು ಕ್ಯಾಂಬ್ರಿಡ್ಜ್ ವಿಶ್ವವಿದ್ಯಾಲಯದ ಸಿಡ್ನಿ ಸಸೆಕ್ಸ್ ಕಾಲೇಜಿನ ಫೆಲೋ ಲಾರ್ಡ್‌ ಕರಣ್ ಬಿಲಿಮೋರಿಯಾ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿಶ್ವವಿದ್ಯಾಲಯ ಡಾ.ಡಿ.ಸಿ.ಪಾವಟೆ ಮೆಮೊರಿಯಲ್ ಫೌಂಡೇಶನ್ ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ ವಿಶೇಷ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಂಧಿಗ್ದ ಸಮಯದಲ್ಲಿ ನಾಯಕತ್ವ’ ಎಂಬ ವಿಷಯದ ಕುರಿತು ಮಾತನಾಡಿದರು. ಭಯೋತ್ಪಾದಕರ ಧಾಳಿ, ಆರ್ಥಿಕ ಬಿಕ್ಕಟ್ಟು, ಹವಾಮಾನ ಬದಲಾವಣೆ ಮತ್ತು ಜಾಗತಿಕ ಆರೋಗ್ಯ ಬಿಕ್ಕಟ್ಟುಗಳ ಎದುರಿಸುವ ಸಾಮರ್ಥ್ಯ ದೇಶವನ್ನು ‌ಮುನ್ನಡೆಸುವವರು ಹೊಂದಿರಬೇಕು. ಜಗತ್ತಿನ ಅನೇಕ ಮಹಾನ್ ನಾಯಕರು ದೇಶವು ಸಂದಿಗ್ಧ ಸಮಯದಲ್ಲಿ ಉತ್ತಮ ನಾಯಕತ್ವ ಪ್ರದರ್ಶಿಸಿದ್ದು, ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ದಂತಹ ಅನೇಕ ಮಹಾನ್ ನಾಯಕರು ಸಂದಿಗ್ಧ ಸಮಯದಲ್ಲಿ ದೇಶವನ್ನು ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ಎಂದರು. ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಗೆಯೊಂದಿಗೆ ಜೀವನವನ್ನು ಸಕಾರಗೊಳಿಸುವದು, ಉದ್ಯಮಶೀಲತೆಯಲ್ಲಿ ನಾಯಕತ್ವ ಬೆಳಸಿಕೊಳ್ಳಬೇಕಾದರೆ ತಾರ್ಕಿಕ ಪ್ರಜ್ಞೆಯ ಮೂಲಕ ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಒಬ್ಬ ಉತ್ತಮ ಶಿಕ್ಷಕ - [ಸಚಿವ ಸ್ಥಾನ ನೀಡುವಂತೆ ಸಮಸ್ತ ಕರ್ನಾಟಕ ರಾಜ್ಯ (ಗೊಲ್ಲ) ಯಾದವ ಸಮಾಜದಿಂದ ಮನವಿ](https://independentsangramnews.com/request-from-the-entire-karnataka-state-golla-yadav-community-to-grant-ministerial-position/): ಧಾರವಾಡ 25 : ಸಮುದಾಯವು ಸುಮಾರು 1000 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದು, ರಾಜಕೀಯವಾ ಸಾವಿವಿಧ ಇಲ್ಲದಂತಾಗಿದೆ. ಕರ್ನಾಟಕದ ಯಾದವ ಸಮುದಾಯದ ಧೀಮಂತ ನಾಯಕರಾದ ದಿವಂಗತ ಎ.ಕೃಷ್ಣನ್ನ ರವರ ನಂತರ ಕರ್ನಾಟಕ ರಾಜ್ಯ ಗೋಲ್ಲ, (ಯಾದವ) ಸಂಘದ ಡಿ.ಟಿ.ಶ್ರೀನಿವಾಸ್ ರವರು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮುಖಾಂತರ ಆಯ್ಕೆಯಾದ ಮೊದಲ ಅಧ್ಯಕ್ಷರಾಗಿದ್ದು, ಮುನ್ನಡೆಸುತ್ತಿದ್ದಾರೆಎಂದು ಕೆ ರಂಗಸ್ವಾಮಿ ತಿಳಸಿದರು. ಪತ್ರಿಕಕಗೋಷ್ಟಿಯಲ್ಲಿ ಮಾತನಾಡಿದ ಅವರು ಶ್ರೀನಿವಾಸ ರವರ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅವರ ನೇತೃತ್ವದಲ್ಲಿ ತುಮಕೂರು, ಚಿತ್ರದುರ್ಗ, ಬಿಕ್ಕೋಡಿಗಳಲ್ಲಿ, ಕರ್ನಾಟಕ ರಾಜ್ಯ ಗೋಲ್ಲ, (ಮಾದವ) ಸಮಾವೇಶಗಳನ್ನು ಮಾಡಿ ಸಮಾಜವನ್ನು ಸಂಘಟನೆ ಮಾಡಿರುತ್ತಾರೆ ಎಂದರು. 2024 ರಲ್ಲಿ ನಡೆದ ಕರ್ನಾಟಕ ಶಿಕ್ಷಕರ ಕ್ಷೇತ್ರದ ಎಂ.ಎಲ್.ಸಿ ಚುನಾವಣೆಯಲ್ಲಿ ಇದುವರೆವಿಗೂ ಕಾಂಗ್ರೆಸ್ ಪಕ್ಷವು ಜಯಸಾಧಿಸದೇ ಇದ್ದು, ಇವರು ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ , ಬಿಇ,(ಸಿವಿಲ್) ಎಮ್ ಟೆಕ್, ಎಮ್ ಎ ಎಮ್ ಬಿ ಎ ಹಾಗೂ ಎಲ್ - [ನಾಳೆ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನ: ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ನಾಳೆ ವಿವಿಧ ಕಾರ್ಯಕ್ರಮಗಳ ಆಯೋಜನೆ](https://independentsangramnews.com/tomorrow-is-the-78th-birthday-of-reverend-dr-d-veerendra-heggade-jss-educational-institutions-to-organize-various-programs-tomorrow/): ಧಾರವಾಡ  24 : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಜನತಾ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 78ನೇ ಹುಟ್ಟುಹಬ್ಬದ ಅಂಗವಾಗಿ ನಾಳೆ (25ರಂದು) ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿವಿಧ ಸೇವಾಮೂಲಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ ಎಂದು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ್ ಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳು, ವಿವಿಧ ಸಮಾಜಮುಖಿ ಸಂಸ್ಥೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಂಯುಕ್ತವಾಗಿ ಹಲವಾರು ಸೇವಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಆಯೋಜಿಸಿರುವ ಮುಖ್ಯ ಕಾರ್ಯಕ್ರಮಗಳು : ಜೆ.ಎಸ್.ಎಸ್ ಮಹಾವಿದ್ಯಾಲಯಗಳು ಹಾಗೂ ರಕ್ತ ಭಂಡಾರಗಳ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ. ಜೆ.ಎಸ್.ಎಸ್ ಸಿ.ಬಿ.ಎಸ್.ಇ ಶಾಲೆಯ 3000 ವಿದ್ಯಾರ್ಥಿಗಳು ಮತ್ತು 200 ಶಿಕ್ಷಕರಿಂದ ಹುಟ್ಟುಹಬ್ಬದ ಗೀತಗಾಯನ. ಕಲಾಸುಜೇಯ ಕಲಾ ತಂಡದಿಂದ ಸನಾತನಿ ನೃತ್ಯರೂಪಕ. ಬಾಲವಿಭಾಗದಿಂದ ಸಂಸ್ಕೃತ ನೃತ್ಯರೂಪಕ ಮೂಲಕ ಶುಭಾಶಯ ಸಮರ್ಪಣೆ. ಡಾ. ಡಿ.ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದಿಂದ - [ದೇಶೀಯ ಆಟಗಳನ್ನು ಆಡಿ,ಆರೋಗ್ಯವಂತರಾಗಿ : ಶಿವಾನಂದ ನರಹಟ್ಟಿ](https://independentsangramnews.com/play-indigenous-games-and-stay-healthy-shivananda-narahatti/): ಧಾರವಾಡ : ನಗರದ ಪ್ರತಿಷ್ಠಿತ ರಾಷ್ಟ್ರೀಯ ಶಾಲೆಯಾದ ಕರ್ನಾಟಕ ಪ್ರೌಢಶಾಲೆಯಲ್ಲಿ, 2025-26 ನೇ ಶೈಕ್ಷಣಿಕ ವರ್ಷದ ಕ್ರೀಡಾಹಬ್ಬ ವು ದಿನಾಂಕ: ೨೪-೧೧-೨೦೨೫ ಸೋಮವಾರ ದಂದು ಜರುಗಿತು. ಈ ಕ್ರೀಡಾಹಬ್ಬದ ಉದ್ಘಾಟಕರಾಗಿ ಆಗಮಿಸಿದಂತಹ ಖ್ಯಾತ ಸಾಹಿತಿಗಳು ಹಾಗೂ ದೈಹಿಕ ಶಿಕ್ಷಣ ತಜ್ಞರು ಆದಂತಹ ಸನ್ಮಾನ್ಯ ಶ್ರೀ ಶಿವಾನಂದ ನರಹಟ್ಟಿ ಮಾತನಾಡುತ್ತಾ — “ಇಂದಿನ ಈ ಉದ್ಘಾಟನಾ ವೇದಿಕೆಯಲ್ಲಿ ನಿಲ್ಲುವುದು ನನಗೆ ದೊಡ್ಡ ಗೌರವ. ನಾವು ನಡೆಸುತ್ತಿರುವ ಈ ಕ್ರೀಡಾ ಸಮಾರಂಭ—ಕೇವಲ ಒಂದು ಸ್ಪರ್ಧೆಯ ದಿನವಲ್ಲ. ಇದು ನಮ್ಮೆಲ್ಲರ ಆರೋಗ್ಯ ಯಾತ್ರೆಯ ಹಬ್ಬ. ಇಂದಿನ ಮಕ್ಕಳ ಬದುಕಿನಲ್ಲಿ ವ್ಯಾಯಾಮಕ್ಕೆ, ನಿಜವಾದ ಆಟಕ್ಕೆ, ತಾಜಾ ಗಾಳಿಗೆ ಇರುವ ಅವಕಾಶ ತೀರಾ ಕಡಿಮೆ. ಆದರೆ ಆರೋಗ್ಯವೇ ಜೀವನದ ಮೂಲ ಬಂಡವಾಳ ಎಂದು ನಾವು ಮರೆತೇಬಿಟ್ಟಿದ್ದೇವೆ. ಈ ಕಾರಣಕ್ಕೇ ಇಂತಹ ಕಾರ್ಯಕ್ರಮಗಳು ಅತ್ಯಗತ್ಯ. ಮಕ್ಕಳು ಆಟಗಳಲ್ಲಿ ಗೆಲ್ಲುವುದು ಅಥವಾ ಸೋಲುವುದು ಸಹಜ.ಆದರೆ ಆಟಗಳಲ್ಲಿ ಭಾಗವಹಿಸುವುದರಿಂದ ದೊಡ್ಡ ಪ್ರಯೋಜನ ಇದೆ.ಅದೇನೆಂದರೆ ನಿಮ್ಮ ಆರೋಗ್ಯ. ಕ್ರೀಡೆಗಳಿಂದ ಆರೋಗ್ಯ ಬಲವಾಗುತ್ತದೆ,ನಿಮ್ಮ ಮನಸ್ಸು ಚೈತನ್ಯದಿಂದ - [ಎಐ ಪೂರ್ತಿಯಾಗಿ ಅವರಿಸುವ ಮುನ್ನ ನಿಮ್ಮ ಮಕ್ಕಳಲ್ಲಿ ಈ ಕೌಶಲ್ಯಗಳನ್ನ ಬೆಳೆಸಿ : ಪ್ರೊ.ಶ್ರೀಧರ ಉದಹಟ್ಟಿ](https://independentsangramnews.com/develop-these-skills-in-your-children-before-ai-completely-destroys-them-prof-sridhar-udahatti/): ಧಾರವಾಡ : ಎಐ ಯುಗದಲ್ಲಿ ಪೋಷಕರು ಮಕ್ಕಳಿಗೆ ಎಐ, ಡೇಟಾ ಕೌಶಲ್ಯ, ಸಂವಹನ ಮತ್ತು ವಿಮರ್ಶಾತ್ಮಕ ಚಿಂತನೆ ಕಲಿಸುವುದು ಅಗತ್ಯ ಎಂದು ಬಾಬಾ ಆಟೋಮಿಕ್ ರಿಸರ್ಚ್ ಸೆಂಟರ್ ನ ವಿಜ್ಞಾನಿಗಳಾದ ಪ್ರೊ. ಶ್ರೀಧರ ಉದಗಟ್ಟಿ ಹೇಳಿದರು. ಅವರು ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಕೆ.ಇ ಬೋರ್ಡ್ ಪ್ರೌಢಶಾಲೆ ಮಾಳಮಡ್ಡಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ 2ನೇ ಯುವ ಚಿಂತನಾ ಸಮಾವೇಶದ ಅಂಗವಾಗಿ ಕೆ.ಇ.ಬೋರ್ಡ್ ಪ್ರೌಢಶಾಲಾ ಸಭಾಭವನದಲ್ಲಿ ಏರ್ಪಡಿಸಿದ್ದ ಎ. ಐ. ತಂತ್ರಜ್ಞಾನದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಎಸ್ ಡಿ ಎಮ್ ಇಂಜಿನಿಯರಿಂಗ್ ಮಹಾ ವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಶ್ರೀಧರ್ ಐ ಜೋಶಿ ಎಐ ತಂತ್ರಜ್ಞಾನದ ಜಾಗೃತಿ ಅಭಿಯಾನದ ಕುರಿತು ಉಪನ್ಯಾಸದಲ್ಲಿ ಮಾತನಾಡಿ ಎಐ ಬಹುತೇಕ ಮಟ್ಟಿಗೆ ಕೆಲಸಗಳನ್ನು ನಿಭಾಯಿಸುವಂತಾಗಿದೆ. ಹಿಂದೆಲ್ಲಾ ಮೂರು ನಾಲ್ಕು ಜನರು ಮಾಡುವ ಕೆಲಸವನ್ನು ಈಗ ಎಐ ಕ್ಷಣ ಮಾತ್ರದಲ್ಲಿಯೇ ಮಾಡಿಕೊಡುತ್ತಿದೆ. ಹಾಗಾಗಿ - [ಎರಡೂವರೆ ವರ್ಷ ಪೂರೈಸಿದ್ದೇ ಸಾಧನೆ: ವಿಜಯೇಂದ್ರ](https://independentsangramnews.com/completing-two-and-a-half-years-is-an-achievement-vijayendra/): ದೆಹಲಿ: ನನ್ನ ಪ್ರಕಾರ ಹಾಗೂ ರಾಜ್ಯದ ಜನತೆಯ ಪ್ರಕಾರ ಎರಡೂವರೆ ವರ್ಷ ಪೂರೈಸಿದ್ದೇ ಒಂದು ಸಾಧನೆ ಎಂಬಂತಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಸರಕಾರದಿಂದ ರಾಜ್ಯದ ಜನತೆ, ಬಡವರು, ರೈತರಿಗೆ, ಯುವಜನರಿಗೆ ಯಾವುದೇ ರೀತಿ ನ್ಯಾಯ ಕೊಡುವುದರಲ್ಲಿ ಯಶಸ್ವಿ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ. ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಎರಡೂವರೆ ವರ್ಷಗಳನ್ನು ಪೂರೈಸಿದೆ. ನುಡಿದಂತೆ ನಡೆದ, ನುಡಿದಂತೆ ನಡೆಯುತ್ತಿರುವ ಸರಕಾರ, ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಎಲ್ಲವನ್ನೂ ಅನುಷ್ಠಾನ ಮಾಡಿದ್ದೇವೆ; ರಾಜ್ಯದ ಕಾಂಗ್ರೆಸ್ ಸರಕಾರ ಮಾದರಿ ಸರಕಾರ ಎಂದು ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾದಿಯಾಗಿ ಸಚಿವ ಸಂಪುಟದ ಸದಸ್ಯರು ಪದೇಪದೇ ಈ ಮಾತನಾಡುತ್ತಾರೆ. ಆದರೆ, ಈ ಸರಕಾರ ಜನತೆಗೆ ನ್ಯಾಯ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಜನರು ಬಳಸುವ ವಸ್ತುಗಳ ಬೆಲೆ ಏರಿಕೆಯನ್ನು - [ಸೌದಿ ಅರೇಬಿಯಾ ಬಸ್‌ ದುರಂತ: ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರಿಂದ ಕುಟುಂಬಸ್ಥರಿಗೆ ಸಾಂತ್ವನ](https://independentsangramnews.com/saudi-arabia-bus-tragedy-karnataka-legislative-council-chief-whip-salim-ahmed-offers-condolences-to-the-family/): ಹುಬ್ಬಳ್ಳಿ :- ಸೌದಿ ಅರೇಬಿಯಾದ ಮುಫ್ರಿಹತ್ ಬಳಿ ಸೋಮವಾರ ಮುಂಜಾನೆ ಸಂಭವಿಸಿದ ಬಸ್‌ ದುರಂತದಲ್ಲಿ ಹುಬ್ಬಳ್ಳಿಯ ಗಣೇಶ ಪೇಟೆ ನಿವಾಸಿ ಅಬ್ದುಲ್ ಘಣಿ ಶಿರಹಟ್ಟಿ (55) ಮೃತಪಟ್ಟಿದ್ದಾರೆ. ಅವರ ಕುಟುಂಬಸ್ಥರಿಗೆ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು ಇಂದು ಸಾಂತ್ವನ ತಿಳಿಸಿದರು. ಮಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಉಮ್ರಾ ಯಾತ್ರಿಕರಿದ್ದ ಬಸ್ ಸೌದಿ ಅರೇಬಿಯಾದ ಮುಫ್ರಿಹತ್ ಬಳಿ ಸೋಮವಾರ ಮುಂಜಾನೆ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 45 ಮಂದಿ ಭಾರತೀಯ ಯಾತ್ರಿಕರು ಮೃತಪಟ್ಟಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ಅಬ್ದುಲ್ ಘನಿ ಶಿರಹಟ್ಟಿ ಅವರು ಕೂಡ ಸೇರಿದ್ದಾರೆ. ಅವರ ಸಾವಿನ ದುಃಖ ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಅವರು ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಈ ಸಂದರ್ಭ ಮುಖಂಡರು, ಅಧಿಕಾರಿಗಳು, ಕುಟುಂಬಸ್ಥರು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು. - [26 ಕ್ಕೆ ಅಖಿಲ ಭಾರತ ವಿದ್ಯುತ್‌ ಬಳಕೆದಾರರ ಸಂಘ ದಕ್ಷಿಣ ಭಾರತ ವಲಯ ಸಮಾವೇಶ .](https://independentsangramnews.com/all-india-electricity-users-association-south-india-zone-conference-on-26th/): 26 ಕ್ಕೆ ಅಖಿಲ ಭಾರತ ವಿದ್ಯುತ್‌ ಬಳಕೆದಾರರ ಸಂಘ ದಕ್ಷಿಣ ಭಾರತ ವಲಯ ಸಮಾವೇಶ . ಧಾರವಾಡ 14 : ಬಳಕೆದಾರರ ಸಂಘ (AIECA) ದೇಶದಾದ್ಯಂತ ಗ್ರಾಹಕರ ಆಂದೋಲನವನ್ನು ಬೆಳೆಸುತ್ತಿದೆ. ಅದರ ಭಾಗವಾಗಿ ದೇಶದ 4 ಭಾಗಗಳಲ್ಲಿ ವಲಯವಾರು ಸಮಾವೇಶವನ್ನು ಸಂಘಟಿಸುತ್ತಿದ್ದು, ಅದರ ಭಾಗವಾಗಿ ದಕ್ಷಿಣ ಭಾರತ ವಲಯ ಸಮಾವೇಶವನ್ನು ಅಕ್ಟೋಬರ್ 26, 2025 ರಂದು ಕರ್ನಾಟಕದ ಬೆಂಗಳೂರಿನ ಕುಮಾರ ಪಾಕ೯ ಈಸ್ಟ ಗಾಂಧಿ ಭವನದಲ್ಲಿ ಬೆಳಿಗ್ಗೆ 10 : 30 ಕ್ಕೆ ಸಂಘಟಿಸಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ಬಳಕೆದಾರರ ಸಂಘ ರಾಜ್ಯ ಕಾರ್ಯದರ್ಶಿಗಳು ಜ್ಞಾನಮೂರ್ತಿ ತಿಳಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ತನ್ಮೂಲಕ ಖಾಸಗೀಕರಣ ಮತ್ತು ಸ್ಮಾರ್ಟ್ ಮೀಟರ್ ವಿರುದ್ಧ ಹೋರಾಟವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ 400 ಕ್ಕೂ ಅಧಿಕ ಬುದ್ಧಿಜೀವಿಗಳು, ಗ್ರಾಹಕರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶವನ್ನು ಸ್ವಪನ್ ಘೋಷ್, ಅಧ್ಯಕ್ಷರು, ಆಲ್ ಇಂಡಿಯಾ ಎಲೆಕ್ಸಿಸಿಟಿ ಕಂಜೂಮರ್ಸ್ ಅಸೋಸಿಯೇಷನ್ ಉದ್ಘಾಟಿಸಲಿದ್ದಾರೆ - [17 ಕ್ಕೆ ರಾಜ್ಯ ಮಟ್ಟದ ಉದ್ಯೋಗಾಕಾಂಕ್ಷಿಗಳ ಆಗ್ರಹ ಸಮಾವೇಶ.](https://independentsangramnews.com/state-level-job-seekers-demand-conference-at-17/): 17 ಕ್ಕೆ ರಾಜ್ಯ ಮಟ್ಟದ ಉದ್ಯೋಗಾಕಾಂಕ್ಷಿಗಳ ಆಗ್ರಹ ಸಮಾವೇಶ. ಧಾರವಾಡ  : ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಕರ್ನಾಟಕದ ವತಿಯಿಂದ 17 ಅಕ್ಟೋಬರ್ 2025 ಬೆಳಿಗ್ಗೆ 10.30 ಧಾರವಾಡದ ಕ.ವಿ.ವ. ಸಂಘದ ನಾಡೋಜ ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ರಾಜ್ಯ ಮಟ್ಟದ ಉದ್ಯೋಗಾಕಾಂಕ್ಷಿಗಳ ಆಗ್ರಹ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕದ ರಾಜ್ಯ ಕಾರ್ಯದರ್ಶಿ ಚನ್ನಬಸವ ಜಾನೇಕಲ್‌ ತಿಳಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅತಿಥಿಗಳಾಗಿ ಮಾಜಿ ಲೋಕಾಯುಕ್ತರು, ಕರ್ನಾಟಕ ಹಾಗೂ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಸಂತೋಷ್ ಹೆಗಡೆ ಮತ್ತು ಹಿರಿಯ ಸಾಮಾಜಿಕ ಹೋರಾಟಗಾರರು ಹಾಗೂ ಸಿಟಿಜನ್ಸ್ ಫಾರ್ ಡೆಮಾಕ್ರಸಿಯ ರಾಷ್ಟ್ರೀಯ ಅಧ್ಯಕ್ಷರಾದ ಎಸ್. ಆರ್. ಹಿರೇಮಠ ಆಗಮಿಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಯುವಜನತೆ ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಉದ್ಯೋಗ ಪಡೆಯಲು ಅವಿರತ ಅಧ್ಯಯನ, ಪರಿಶ್ರಮ ನಡೆಸಿದರೂ ಸಹ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆಯದೇ ಬೇಸತ್ತಿದ್ದಾರೆ. ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಂಡು ಸಿನಿಕತೆಗೆ ಬಲಿಯಾಗುತ್ತಿದ್ದಾರೆ ಎಂದರು. ನಮ್ಮ ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ - [ಕೃಷಿಕರು, ಪುರೋಹಿತರಿಗೆ ಕನ್ಯಾದಾನ ಮಾಡಿರಿ: ಕಣ್ವ ತೀರ್ಥರ ಕರೆ](https://independentsangramnews.com/farmers-offer-kanyadana-to-priests-kanva-tirthas-call/): ಕೃಷಿಕರು, ಪುರೋಹಿತರಿಗೆ ಕನ್ಯಾದಾನ ಮಾಡಿರಿ: ಕಣ್ವ ತೀರ್ಥರ ಕರೆ ಧಾರವಾಡ: ಯುವ ಬ್ರಾಹ್ಮಣ ಕೃಷಿಕರು, ಪಂಡಿತರು, ಪುರೋಹಿತರಿಗೆ ಕನ್ಯಾಪಿತೃಗಳು ಕನ್ಯಾದಾನ ಮಾಡಿ ಬ್ರಾಹ್ಮಣ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕೆಂದು ಹುಣಸಿಹೊಳೆ ಕಣ್ವಮಠದ ಶ್ರೀಮದ್ ವಿದ್ಯಾ ಕಣ್ವ ವಿರಾಜ ತೀರ್ಥ ಸ್ವಾಮೀಜಿ ಇಂದಿಲ್ಲಿ ಕರೆ ನೀಡಿದರು. ಇಲ್ಲಿಯ ಶ್ರೀ ಶಂಕರಾಚಾರ್ಯ ಮಠದಲ್ಲಿ ಶುಕ್ಲಯಜುರ್ವೇದಿಯರ ರಾಜ್ಯ ಮಟ್ಟದ ವಿಪ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಯುವಜನರ ಮದುವೆ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಬರೀ ವೈದ್ಯರು, ಇಂಜಿನೀಯರುಗಳಷ್ಟೇ ಸಮಾಜದಲ್ಲಿ ಇಲ್ಲ. ಉತ್ತಮ ನಡತೆಯ ಕೃಷಿಕರು, ಪಂಡಿತರು, ವಕೀಲರು, ಖಾಸಗಿ ಉದ್ಯೋಗ ಮಾಡುವ ಅನೇಕ ಬ್ರಾಹ್ಮಣ ಯುವಜನರಿದ್ದಾರೆ. ಬ್ರಾಹ್ಮಣ ಕನ್ಯೆಗಳು ಮತ್ತು ಪಾಲಕರು ಅವರನ್ನು ತಿರಸ್ಕರಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು. ಬ್ರಾಹ್ಮಣರಲ್ಲಿ ಅನೇಕ ಪಂಗಡಗಳಿದ್ದರೂ ಅವರಿಗೆಲ್ಲ ವೇದವೇ ಮೂಲ. ಅಕ್ಷಂತಿಗೂ, ಭಸ್ಮಕ್ಕೂ ಯಾವುದೇ ಬೇಧವಿಲ್ಲ. ಇದನ್ನು ಅರಿತು ಎಲ್ಲರೂ ವರ ಕನ್ಯೆಯರ ಸಂಬಂಧ ಬೆಳೆಸಲು ಮುಂದಾಗಬೇಕೆಂದರು. ಕಾರ್ಯಕ್ರಮ ದಲ್ಲಿ ಬ್ರಾಹ್ಮಣ ಕೃಷಿಕರನ್ನು ಸನ್ಮಾನ‌ ಮಾಡಿದ್ದಕ್ಕೆ - [ಕುರ್ತಕೋಟಿ ಅವರ ವಿಮರ್ಶೆ ಜ್ಞಾನ ಪ್ರಧಾನವಾದದ್ದು -- ಡಾ. ಶ್ರೀರಾಮ ಭಟ್ಟ](https://independentsangramnews.com/kurtakotis-critical-knowledge-is-paramount-dr-sri-rama-bhatta-or-keerthi-samuara-talk-show/): ಕುರ್ತಕೋಟಿ ಅವರ ವಿಮರ್ಶೆ ಜ್ಞಾನ ಪ್ರಧಾನವಾದದ್ದು — ಡಾ. ಶ್ರೀರಾಮ ಭಟ್ಟ. OR. ಕೀರ್ತಿ ನೆನಪು ಸಂವಾದ ಕಾರ್ಯಕ್ರಮ. ಧಾರವಾಡ : ಬೇಂದ್ರೆ ಅವರ ಕಾವ್ಯ ಭಾವ ಪ್ರಧಾನವಾದರೆ, ಕುರ್ತಕೋಟಿ ಅವರ ವಿಮರ್ಶೆ ಜ್ಞಾನ ಪ್ರಧಾನವಾದದ್ದು ಎಂದು ಕೀರ್ತಿ ನೆನಪು ಸಂವಾದ ಕಾರ್ಯಕ್ರಮದಲ್ಲಿ ಡಾ. ಶ್ರೀರಾಮ ಭಟ್ಟ ಅವರು ಹೇಳಿದರು. ಸುಮಾರು ಐದು ದಶಕಗಳ ಕಾಲ ಕುರ್ತಕೋಟಿ ಅವರು ಬೇಂದ್ರೆಯವರ ಜೀವನ ಮತ್ತು ಸಾಹಿತ್ಯ ಕುರಿತು ಬರೆದ ಕೃತಿ ಹಾಗೂ ಲೇಖನಗಳ ಸಮಗ್ರ ಕೃತಿ ‘ವಾಗರ್ಥ’. ಕುರ್ತಕೋಟಿ ಅವರ 97 ನೇ ಜನ್ಮ ದಿನದ ಅಂಗವಾಗಿ ವಾಗರ್ಥ ಕೃತಿ ಕುರಿತು ಸಂವಾದ ಕಾರ್ಯಕ್ರಮವನ್ನು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆ ಸಂವಾದದಲ್ಲಿ ಮೂಡಿಬಂದ ಮಾತುಗಳು. ಬೇಂದ್ರೆಯವರ ಕಾವ್ಯಕ್ಕೆ ಇರುವ ಮೌಲ್ಯವೇ ಕುರ್ತಕೋಟಿ ಅವರ ವಿಮರ್ಶೆಗೆ ಇದೆ. ಬೇಂದ್ರೆಯವರ ಕಾವ್ಯ ಅರ್ಥವಾಗ ಬೇಕಾದರೆ ಕುರ್ತಕೋಟಿ ವಿಮರ್ಶೆ ಓದಲೇ ಬೇಕು. ಮಾತು ಅರ್ಥದ ಅಭಿನ್ನತೆಯಿಂದ ಕೂಡಿದ್ದು ವಾಗರ್ಥ. ಕಾಳಿದಾಸನ ಈ ಶ್ಲೋಕ ಅದರಲ್ಲಿ ಬರುವ ವಾಗರ್ಥ ಎಂಬ - [ಅನ್ವೇಷಣೆ ಕೂಟ  ಸಜ್ಜನ ಸಾಹಿತಿ, ಸಂಘಟಕ  ದಿವಂಗತ ಡಾ|| ವರದರಾಜ ಹುಯಿಲಗೋಳರ 33 ನೇ ಪುಣ್ಯ ಸ್ಮರಣೆ](https://independentsangramnews.com/33rd-death-anniversary-of-late-dr-varadaraja-huilagol-the-great-writer-and-organizer-of-the-discovery-group/): ಅನ್ವೇಷಣೆ ಕೂಟ  ಸಜ್ಜನ ಸಾಹಿತಿ, ಸಂಘಟಕ  ದಿವಂಗತ ಡಾ|| ವರದರಾಜ ಹುಯಿಲಗೋಳರ 33 ನೇ ಪುಣ್ಯ ಸ್ಮರಣೆ ಧಾರವಾಡ: ಕೃಷ್ಣಾಬಾಯಿ ಕಲ್ಲೂಪಂತ ದಂಪತಿಗಳ ಮೂವರು ಹೆಣ್ಣುಮಕ್ಕಳು ಗಂಗಾ, ತುಂಗಾ ಮತ್ತು ನರ್ಮದಾ. ಒಂದಕ್ಕೊಂದು ಛಂದದ ಈ ಮೂವರು ಹುಡುಗಿಯರ ಧ್ವನಿಗಳೂ ಕೂಡ ಅತ್ಯಂತ ಮಧುರವಾಗಿದ್ದವು. ಇವರಿಗೆ ಸಂಗೀತ ಕಲಿಸಿರಿ. ಛೋಲೋ ಗುರುವಿನ ಕೈಯಾಂಥಾ ಶಿಷ್ಯಂದರು ಸಿಕ್ಕರೆ ಗುರುವಿಗೂ ಸ್ವರ್ಗ ಸಿಕ್ಕಷ್ಟಽ ಖುಶೀನೂ ಆಗ್ತದ. ಹೀಗೆ ಕಥೆ ಸರಾಗವಾಗಿ ಮುಂದುವರೀತಾನೇ ಹೋಗ್ತದೆ. ಇತಿಹಾಸ, ಪುರಾಣ, ವಾಸ್ತವಗಳೆಲ್ಲವನ್ನೂ ಹದವಾಗಿ ಸೇರಿಸಿ ಸುಂದರವಾಗಿ ಹೆಣೆಯತ್ತ ಹೋಗುವ ಹಿರಿಯ ಕಥೆಗಾರ ರಾಘವೇಂದ್ರ ಪಾಟೀಲರ ಮೂವರು ಹಾಡುಗಾರ್ತಿ ಹುಡುಗಿಯರ ಅಂದರೆ ಈ ಮೂವರು ಮಾಯಿಯರ ಸಂಗೀತ ಕಲಿಕೆಯ ಈ ಕಥೆ ಕಾಲ್ಪನಿಕವೂ ಅಲ್ಲದ, ರಮ್ಯವೂ ಅಲ್ಲದ ವಾಸ್ತವತೆಯ ಸುತ್ತ ಹಬ್ಬುತ್ತ ಹೋಗುವ ಅಪರೂಪದ ಕೃತಿಯಾಗಿದೆ. ಎಲ್ಲ ಕಾಲಕ್ಕೂ ಸಲ್ಲುವ ಮಹತ್ವದ ಕಥೆಯಾಗಿ ಹೊರಹೊಮ್ಮಿದೆ. ಒಟ್ಟಿನಲ್ಲಿ ಇಲ್ಲಿ ಜೀವನವನ್ನು ಶೋಧನೆ ಮಾಡುವದು ರಾಘವೇಂದ್ರ ಪಾಟೀಲರ ಪ್ರಯತ್ನವಾಗಿದ್ದು ಸ್ವಾರಸ್ಯಕರ ನಿರೂಪಣೆ, ಉತ್ತರ - [ಮೂರು ಹೊಸ ಸಸ್ಯ ಪ್ರಭೆಧಗಳನ್ನು ಪತ್ತೆ .](https://independentsangramnews.com/three-new-plant-species-discovered/): ಮೂರು ಹೊಸ ಸಸ್ಯ ಪ್ರಭೆಧಗಳನ್ನು ಪತ್ತೆ . ಧಾರವಾಡ : ದಾವಣಗೆರೆ ವಿಶ್ವವೀದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಡಾ. ಸಿದ್ದಪ್ಪ ಭೀ ಕಕ್ಕಳಮೇಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿಧ್ಯಾರ್ಥಿ ಪ್ರಶಾಂತ ಕಾರದಕಟ್ಟಿ ಇವರು ಪಶ್ಚಿಮ ಘಟ್ಟದ ಉಷ್ಣವಲಯದ ಮಳೆಕಾಡುಗಳಲ್ಲಿಸೊನೆರೆಲಾ ಎಂಬ ವರ್ಗದ ಮೂರು ಹೊಸ ಸಸ್ಯಪ್ರಭೇಧಗಳನ್ನು ಪತ್ತೆ ಹಚ್ಚುವುದರ ಮೂಲಕ ಸಸ್ಯ ವೃಂದಕ್ಕೆ ಹೆಚ್ಚಿನ ಕೊಡುಗೆ ನೀಡಿರುತ್ತಾರೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ಮೆಲೆಸ್ಟೊಮಾಟೇಶಿ ಕುಟುಂಬಕ್ಕೆ (Melastomataceae Family)) ಸೇರಿದ ಸೋನೆರೆಲಾ ಎಂಬ ಜಾತಿಯ 12 ಸಸ್ಯ ಪ್ರಭೇಧಗಳಿದ್ದು, ಪ್ಶಚಿಮ ಘಟ್ಟದಲ್ಲಿ 43 ಸೊನೆರೆಲಾ (Sonerlla) ಜಾತಿಯ ಸಸ್ಯ ಪ್ರಭೇಧಗಳಿರುವಿಕೆಯನ್ನು ಅಂದಾಜಿಸಲಾಗಿದೆ. ಈಗ ಸಂಶೊಧನಾ ತಂಡವು ಪಶ್ಚಿಮ ಘಟ್ಟದ ಚಿಕ್ಕಮಂಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿಯಲ್ಲಿ ಸೊನೆರೆಲಾ ಬಾಬಾಬುಡನ್ಗಿರಿಯೆನ್ಸಿಸ್‌(Sonerila bababudangiriensis) , ಕೊಡಗುಜಿಲ್ಲೆಯ ಕಡಮಕ್ಕಲ್‌ನ ಮಲ್ಲಳ್ಳಿ ಜಲಪಾತದಲ್ಲಿಸೊನೆರೆಲಾ ಜೈಜಾಂಶಿಯಾ (ಗಿಗ್ಯಾಂಶಿಯಾ) (Sonerila gigantea) ಮತ್ತು ಚಿಕ್ಕಮಂಗಳೂರು ಜಿಲ್ಲೆಯಿಂದ ದಕ್ಷಿಣಕನ್ನಡ ಜಿಲ್ಲೆಯ ವರೆಗಿನ ಚಾರ್ಮೂಡಿ ಘಾಟ್‌ ನಲ್ಲಿ ಸೊನೆರೆಲಾ ಚಾರ್ಮೂಡಿಯೆನ್ಸಿಸ್‌ (Sonerila charmadiensis) ಎಂಬ ಮೂರು ಹೊಸ - [ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದು ಅತಿ‌ ಅವಶ್ಯಕ -- ಪ್ರೊ. ಎ.ಎಮ್‌.ಖಾನ್](https://independentsangramnews.com/it-is-very-necessary-to-give-more-emphasis-to-eco-tourism-prof-a-m-khan/): ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದು ಅತಿ‌ ಅವಶ್ಯಕ — ಪ್ರೊ. ಎ.ಎಮ್‌.ಖಾನ್ ಧಾರವಾಡ : ಸ್ಥಿರವಾದ ಅಭಿವೃದ್ಧಿಗೆ ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಅನೇಕ ಯೋಜನೆಗಳನ್ನು ಅಳವಡಿಸಿಕೊಳ್ಳುವರಿಂದ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡುವುದು ಅತಿ‌ ಅವಶ್ಯಕತೆ ಇದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಮ್‌.ಖಾನ್ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ಕಲಾ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗವು ‘ಭುವನ ವಿಜಯ’, ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಪ್ರವಾಸೋದ್ಯಮ ಸೇರಿದಂತೆ ವೃತ್ತಿಪರ ಕೋರ್ಸುಗಳು ಆಯ್ಕೆ ಮಾಡಿಕೊಳ್ಳುವದು ಬಹಳ ಅಗತ್ಯವಿದೆ ಎಂದು ಭವಿಷ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಮಾಡಲು ಪ್ರಯತ್ನಿಸಲಾಗುವದು ಪ್ರವಾಸೋದ್ಯಮ ವಿದ್ಯಾರ್ಥಿಗಳು ವೃತ್ತಿಪರವಾಗಿ ಕೌಶಲಗಳನ್ನು ಅಳವಡಿಸಿಕೊಳ್ಳಿ ಎಂದ ಅವರು ಪ್ರವಾಸೋದ್ಯಮ ‌ಕ್ಷೇತ್ರವು ವಿಪುಲವಾದ ಅವಕಾಶಗಳೊಂದಿಗೆ ಹೆಚ್ಚು ವಿಕಸಿತಗೊಳ್ಳುತ್ತಿದೆ ಎಂದರು. ಅಹಮದಾಬಾದಿನ ಕೇಂದ್ರೀಯ ಪರಿಸರ ಶಿಕ್ಷಣದ ನಿರ್ದೇಶಕರಾದ ಡಾ‌. ಶ್ರೀಜಿ ಕುರುಪ್ ಅವರು ‘ಸ್ಥಿರವಾದ ಪರಿವರ್ತನೆಗೆ ಪ್ರವಾಸೋದ್ಯಮ’, - [ಕೆಆಯ್‌ಎಡಿಬಿ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳ ಕಚೇರಿ ಎದುರು ರೈತರು ಪ್ರತಿಭಟನೆ](https://independentsangramnews.com/farmers-protest-in-front-of-the-kiadb-special-land-acquisition-officers-office/): ಕೆಆಯ್‌ಎಡಿಬಿ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳ ಕಚೇರಿ ಎದುರು ರೈತರು ಪ್ರತಿಭಟನೆ. ಧಾರವಾಡ : ಧಾರವಾಡ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ರೈತರಿಗೆ ಭೂ ಪರಿಹಾರದ ಹಣ ಪಾವತಿಸಲು ವಿಳಂಬ ಮತ್ತು ರೈತರಿಂದ ಲಂಚ ಕೇಳುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜನಜಾಗೃತಿ ಸಂಘದ ನೇತೃತ್ವದಲ್ಲಿ ಇಲ್ಲಿನ ಕೆಆಯ್‌ಎಡಿಬಿ ವಿಶೇಷ ಭೂ-ಸ್ವಾಧೀನ ಅಧಿಕಾರಿಗಳ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. ಬಿ.ಎಮ್.ಆಯ್.ಸಿ. ಯೋಜನೆಗಾಗಿ ಧಾರವಾಡ ತಾಲೂಕಿನ ಕಲ್ಲಾಪೂರ, ಹೊಸವಾಳ, ವೆಂಕಟಾಪೂರ, ಕುಮ್ಮನಾಯಕನಕೊಪ್ಪ, ಮದಿಕೊಪ್ಪ, ಶಿಂಗನಹಳ್ಳಿ, ಕೋಟೂರ ಗ್ರಾಮಗಳ ಒಟ್ಟು 2170 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಪಡಿಸಿಕೊಂಡಿದೆ. ಈ ಗ್ರಾಮಗಳ ರೈತರು ಭೂ ಪರಿಹಾರದ ಹಣ ಪಡೆದುಕೊಳ್ಳಲು ದಾಖಲಾತಿಗಳನ್ನು ಸಲ್ಲಿಸಿ ಕಚೇರಿಗೆ ಪದೇ ಪದೇ ಅಲೆದಾಡುತ್ತಿದ್ದಾರೆ. ಆದರೆ ಈ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳು ಪರಿಹಾರದ ಹಣವನ್ನು ಪಾವತಿಸಲು ಶೇ.5 ರಷ್ಟು ಕಮೀಶನ್ ಕೇಳುತ್ತಿದ್ದಾರೆ. ನೊಂದಣಿ ರಿಯಾಯಿತಿ ಪ್ರಮಾಣ ಪತ್ರ ನೀಡಲು 30 ಸಾವಿರ ರೂಪಾಯಿಗಳನ್ನು ಕೊಡುವಂತೆ ಕೇಳುತ್ತಿದ್ದಾರೆ. - [ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್](https://independentsangramnews.com/72-crores-spent-on-construction-workers-minister-santosh-lad/): ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್ ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ 78 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಅವರು ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಾರಿಗೆ ಇಲಾಖೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹೊರಗುತ್ತಿಗೆ ನೌಕರರ ವೇತನ ಸಮಸ್ಯೆಗಳನ್ನು ಪರಿಹರಿಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದ ಸೊಸೈಟಿಗಳನ್ನು ಸ್ಥಾಪಿಸಿ ಹೊರಗುತ್ತಿಗೆ ನೌಕರರನ್ನು ನೋಂದಣಿ ಮಾಡಿಸಲಾಗುವುದು. ಆಶಾದೀಪ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ಯೋಗ ನೀಡಿದಲ್ಲಿ ಅಂತಹ ಕೈಗಾರಿಕೆಗಳಿಗೆ ಸರಕಾರದ ವತಿಯಿಂದ ವೇತನದಲ್ಲಿ ಶೇ.೫೦ ರಷ್ಟು ಸಹಾಯಧನ ನೀಡಲಾಗುವುದು. - [ಉಡುಪಿ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್](https://independentsangramnews.com/labour-minister-santosh-s-lad-at-the-smart-card-distribution-program-for-various-unorganized-workers-in-udupi-district-government-committed-to-protecting-the-interests-of-organized-and-unorganized-wo/): ಉಡುಪಿ ಜಿಲ್ಲೆಯ ವಿವಿಧ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಸಂಘಟಿತ, ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಸರ್ಕಾರ ಬದ್ಧ   ಉಡುಪಿ ಅಕ್ಟೋಬರ್ ೧೦ : ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಹಿತ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು ಹಲವಾರು ಕಾನೂನುಗಳನ್ನು ಜಾರಿಗೊಳಿಸಿದ್ದೇವೆ. ರಾಜ್ಯದ ಸಮಸ್ತ ಕಾರ್ಮಿಕರಿಗೆ ಅನುಕೂಲವಾಗುವ ರೀತಿಯಲ್ಲಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ನಮ್ಮ ರಾಜ್ಯದಲ್ಲಿ ಏಳು ಕಾಯ್ದೆಗಳನ್ನು ಜಾರಿಗೊಳಿಸಿ ಎಲ್ಲರಿಗೂ ನ್ಯಾಯ ಒದಗಿಸುವ ಕಾರ್ಯದಲ್ಲಿ ನಮ್ಮ ಸರ್ಕಾರ ಕಟಿಬದ್ಧವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಅವರು ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಾರಿಗೆ ಇಲಾಖೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶ್ರೀ ಆರೂರು ಲಕ್ಷ್ಮೀನಾರಾಯಣರಾವ್ ಸ್ಮಾರಕ ಪುರ ಭವನದಲ್ಲಿ ಉಡುಪಿ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು - [ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಮಾಧ್ಯಮ ಸಂಯೋಜಕರಾಗಿ ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಆಯ್ಕೆ.](https://independentsangramnews.com/journalist-ravikumar-kaggannavar-has-been-selected-as-the-media-coordinator-of-the-all-india-veerashaiva-lingayat-mahasabha-district-unit/): ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಮಾಧ್ಯಮ ಸಂಯೋಜಕರಾಗಿ ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಆಯ್ಕೆ. ಕವಿ ಕುಮಾರವ್ಯಾಸನ ಜನ್ಮಸ್ಥಳವಾದ ಕೋಳಿವಾಡ ಗ್ರಾಮದ ಕೃಷಿ ಹಾಗೂ ಬಡಕುಟುಂಬದಲ್ಲಿ ಜನಿಸಿದ ರವಿಕುಮಾರ ಅವರು ಪತ್ರಿಕೋದ್ಯಮ ಪದವಿ ಪಡೆದು ಪತ್ರಕರ್ತರಾದರು. ವಿಜಯ ಸಂದೇಶ, ಕೆಂಪುಜಲ, ಅಮೋಘ ನ್ಯೂಜ್, ಉಷಾಕಿರಣ, ಇನ್ ನ್ಯೂಜ್, ಸೃಷ್ಠಿರಾಜ ಟೈಮ್ಸ್, ಹುಬ್ಬಳ್ಳಿ ಸಂಜೆ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ 21 ವರುಷದಿಂದ ಪತ್ರಿಕಾ ರಂಗದಲ್ಲಿ ವಿಶಿಷ್ಟ ಸೇವೆ ಮಾಡುತ್ತಿದ್ದು ಇದೀಗ ಕನ್ನಡಮ್ಮ ದಿನ ಪತ್ರಿಕೆಯಲ್ಲಿ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೃದಯಿ ಹಾಗೂ ಸತ್ಯಶುದ್ದ ಕಾಯಕಯೋಗಿ ಆಗಿರುವ ಇವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ವಿಶೇಷ. 01 ಸಾವಿರ ಕ್ಕೂ ಅಧಿಕ ಸಮಾರಂಭದಲ್ಲಿ ನಿರೂಪಣೆ 3೦೦ ಕ್ಕೂ ಹೆಚ್ಚು ಸಮಾರಂಭದಲ್ಲಿ ಉಪನ್ಯಾಸ 250 ಕ್ಕೂ ಹೆಚ್ಚು ವಿಶೇಷ ಲೇಖನ ಬರೆದಿದ್ದಾರೆ. ಶರಣ ಕಾಯಕ ರತ್ನ, ಸುವರ್ಣ ಪುರಸ್ಕಾರ, ಕನ್ನಡ ರತ್ನ, ಮೌಲ್ಯ ಪತ್ರಿಕೋದ್ಯಮ - [ಕನ್ನಡ ಭಾಷೆಗೆ ದಕ್ಕೆ ಬಂದರೆ ಕೆಚ್ಚೆದೆಯ ಹೋರಾಟ ನಡೆಸುತ್ತೆವೆ : ಬಸವರಾಜ ಗುರಿಕಾರ](https://independentsangramnews.com/horanad-kannadigas-sammelana-kicks-off-we-will-fight-bravely-if-kannada-language-is-affected-basavaraja-gurikar/): ಹೊರನಾಡ ಕನ್ನಡಿಗರ ಸಮ್ಮೇಳನಕ್ಕೆ ಚಾಲನೆ. ಕನ್ನಡ ಭಾಷೆಗೆ ದಕ್ಕೆ ಬಂದರೆ ಕೆಚ್ಚೆದೆಯ ಹೋರಾಟ ನಡೆಸುತ್ತೆವೆ : ಬಸವರಾಜ ಗುರಿಕಾರ ಧಾರವಾಡ : ಕನ್ನಡಿಗರು ಯಾವುದೇ ಪ್ರದೇಶದಲ್ಲಿ ವಾಸಿಸಿದರು ನಮ್ಮ ಕನ್ನಡ ಭಾಷೆಯನ್ನು ಪೋಷಿಸಿ ಬೆಳೆಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಖಿಲ ಭಾರತ ಶಿಕ್ಷಕರ ಪಡೆರೇಷ್ ನ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಮಂಗಳೂರು ಕುದ್ಮಲ ರಂಗರಾವ ಪುರಭವನದಲ್ಲಿ ಜರುಗಿದ ಅನಿವಾಸಿ ಕನ್ನಡಿಗರ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಸಾವಿರಾರು ಐತಿಹಾಸಿಕ ಹಿನ್ನೆಲೆಯಲ್ಲಿ ಬೆಳೆದು ಬಂದಿರುವ ಕನ್ನಡ ಭಾಷೆ ಬದ್ರವಾದ ನೆಲೆಗಟ್ಟಿನಲ್ಲಿ ನಿಂತಿದೆ, ಕನ್ನಡಿಗರು ಅನ್ಯ ಭಾಷೆಯ ವಿರೋಧಿಗಳಲ್ಲ ಆದರೆ ನಮ್ಮ ಭಾಷೆಗೆ ದಕ್ಕೆ ಬಂದರೆ ಕೆಚ್ಚೆದೆಯ ಹೋರಾಟ ನಡೆಸುತ್ತೆವೆ ಎಂದು ಬಸವರಾಜ ಗುರಿಕಾರ ಆಕ್ರೋಶ ವ್ಯಕ್ತಪಡಿಸಿದರು. ಲೆಪಿನೆಂಟ್ಟ್ ಜನರಲ್ ಫ್ರಾಂಕ್ ಪರ್ನಾಂಡಿಸ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೇದವ್ಯಾಸ ಕಾಮತ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ ಪ್ರಥಮ ಸಮ್ಮೇಳಾನಾಧ್ಯಕ್ಷ ಡಾ ಸರ್ವೋತಮ್ಮ - [13 ಕ್ಕೆ ಕೀರ್ತಿ ನೆನಪು ಕಾಯ೯ಕ್ರಮ.](https://independentsangramnews.com/13-at-kirti-samuari-program/): 13 ಕ್ಕೆ ಕೀರ್ತಿ ನೆನಪು ಕಾಯ೯ಕ್ರಮ. ಧಾರವಾಡ : ಕನ್ನಡದ ಕೀರ್ತಿ ಕೀರ್ತಿನಾಥ ಕುರ್ತಕೋಟಿ ಅವರ 97ನೆ ಜನ್ಮದಿನವನ್ನು ಮನೋಹರ ಗ್ರಂಥಮಾಲೆ ಹಾಗೂ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಸಂಯುಕ್ತವಾಗಿ ‘ಕೀರ್ತಿ ನೆನಪು’ಎಂದು ದಿ 13 ಅಕ್ಟೋಬರ್ ಸೋಮವಾರದಂದು ರಂಗಾಯಣ ಸಮುಚ್ಚಯದಲ್ಲಿ ಬೆಳಗ್ಗೆ 11-00 ಕ್ಕೆ ಹಮ್ಮಿಕೊಂಡಿವೆ. ಅಂದು ಇತ್ತೀಚೆಗೆ ಬಿಡುಗಡೆ ಆದ ಅವರ ‘ವಾಗರ್ಥ’ ಕೃತಿ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಸುಮಾರು ಐದು ದಶಕಗಳ ಕಾಲ ಕುರ್ತಕೋಟಿ ಅವರು ಬೇಂದ್ರೆ ಸಾಹಿತ್ಯ ಕುರಿತು ಪ್ರಕಟಿಸಿದ ಕೃತಿಗಳು ಹಾಗೂ ಲೇಖನಗಳ ಸಂಗ್ರಹ ಅದಾಗಿದೆ. ಅವರ ವಿಮರ್ಶಾ ಲೇಖನಗಳು ಸಂಸ್ಕೃತ, ಕನ್ನಡ, ಇಂಗ್ಲಿಷ್ ಈ ಭಾಷೆಯ ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಕೂಡಿರುತ್ತವೆ. ಕನ್ನಡ ವಿಮರ್ಶಾ ಪ್ರಕಾರಕ್ಕೆ ಅಸ್ತಿಭಾರ ಹಾಕಿದವರು ಕುರ್ತಕೋಟಿ ಅವರು ಇಂದು ನಾಡಿನಲ್ಲಿ ಕುರ್ತಕೋಟಿ ವಿಮರ್ಶಾ ಪರಂಪರೆಯೆ ಇದೆ. ಅದನ್ನು ಕುರ್ತಕೋಟಿ ಕ್ರಿಟಿಸಿಜಮ್ ಸ್ಕೂಲ್ ಎಂದೆ ವಿಮರ್ಶಕರು ಉಲ್ಲೇಖಿಸುತ್ತಾರೆ. ಬೇಂದ್ರೆಯವರ ಕಾವ್ಯ ಅರ್ಥವಾಗ ಬೇಕಾದರೆ ಕೀರ್ತಿ ಅವರ ವಿಮರ್ಶಾ ಬರಹಗಳನ್ನು ಓದಲೇಬೇಕು. ಬೇಂದ್ರೆ - [ ನೂತನ ಕಾರ್ಮಿಕ ಭವನ ಉದ್ಘಾಟನೆ ನೆರವೇರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌](https://independentsangramnews.com/labour-minister-santosh-s-lad-inaugurated-the-new-labour-hall/):  ನೂತನ ಕಾರ್ಮಿಕ ಭವನ ಉದ್ಘಾಟನೆ ನೆರವೇರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ತುಮಕೂರು : ನಗರದ ಹನುಮಂತಪುರದ ಗಣೇಶನಗರದಲ್ಲಿ ರೂ 3.20 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಮಿಕ ಭವನವನ್ನು ಕಾರ್ಮಿಕ ಸಚಿವ ಸಂತೋಷ ಎಸ್.ಲಾಡ್ ಅವರು ಬುಧವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸರ್ಕಾರವು ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ವಸತಿ ಸೌಲಭ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ನಿಟ್ಟಿನಲ್ಲಿ, ಈ ಕಾರ್ಮಿಕ ಭವನವನ್ನು ನಿರ್ಮಿಸಲಾಗಿದ್ದು, ಭವನವು ಮುಂದಿನ ದಿನಗಳಲ್ಲಿ ಕಾರ್ಮಿಕರ ಸಭೆ, ತರಬೇತಿ ಶಿಬಿರಗಳಿಗೆ ಉತ್ತಮ ವೇದಿಕೆಯಾಗಿ ಉಪಯೋಗವಾಗಲಿದೆ ಎಂದು ತಿಳಿಸಿದರು. ಕಾರ್ಮಿಕ ವರ್ಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ, ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್ ಹಾಗೂ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ - [ಅಳ್ನಾವರ ಅಂಜುಮನ್ ಇಸ್ಲಾಂ ಹಣ ದುರುಪಯೋಗ -- ಅಬ್ದುಲ್ ಮುನಸಿ.](https://independentsangramnews.com/misappropriation-of-alnavar-anjuman-islam-funds-abdul-munasi/): ಅಳ್ನಾವರ ಅಂಜುಮನ್ ಇಸ್ಲಾಂ ಹಣ ದುರುಪಯೋಗ — ಅಬ್ದುಲ್ ಮುನಸಿ. ಧಾರವಾಡ : ಅಳ್ನಾವರ ಪಟ್ಟಣದ ಮೂರು ಮಸೀದಿಗೆ ನೀಡಬೇಕಾಗಿರುವವಾಣಿಜ್ಯ ಮಳಿಗೆ ಹಣ ಅಳ್ನಾವರದ ಅಂಜುಮನ್ ಇಸ್ಲಾಂ ದುರ್ಬಳಕೆ ಮಾಡಿಕೊಂಡಿದೆ ಎಂದು ಮುಸ್ಲಿಂ ಸಮಾಜದ ಮುಖಂಡ ಅಬ್ದುಲ್ ರೇಹಮಾನ್ ಮುನಸಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಳ್ನಾವರ ಪಟ್ಟಣದ ಪ್ಲಾಟ್ ನಂ-320 ಮತ್ತು 321 ರ ಆಸ್ತಿಯನ್ನು ಅಭಿವೃದ್ಧಿಪಡಿಸಿ, ವಾಣಿಜ್ಯ ಮಳಿಗೆ ಕಟ್ಟಡ ನಿರ್ಮಾಣಕ್ಕೆ ವಕ್ಫ ಬೋರ್ಡ್ 20 ಲಕ್ಷ ಅನುದಾನ ನೀಡಿತ್ತು ಎಂದು ಹೇಳಿದರು. 2007-2008 ರಲ್ಲಿ ಕಟ್ಟಡ ನಿರ್ಮಿಸಿದ ಬಳಿಕ ಬರುವ ಆದಾಯದಲ್ಲಿ ಖರ್ಚು ತೆಗೆದು, ಉಳಿದ ಹಣ ಅಳ್ನಾವರದ ಜಾಮೇ ಮಸೀದಿ, ಮದನಿ ಮಸೀದಿ, ಕೂಬಾ ಮಸೀದಿಗೆ ನೀಡಲು 1990 ರಲ್ಲಿ ಅಂಜುಮನ್ ಸಮಿತಿ ಠಾರಾವ್ ಮಾಡಿದ್ದಾಗಿ ತಿಳಿಸಿದರು. ಅಳ್ನಾವರದ ಈ ಆಸ್ತಿಯಿಂದ ಈಗ ತಿಂಗಳಿಗೆ ಲಕ್ಷಕ್ಕೂ ಅಧಿಕ ಆದಾಯವಿದೆ. ಆದರೆ ಅಳ್ನಾವರ ಅಂಜುಮನ್ ಸಮಿತಿ ಈ ಮೂರು ಮಸೀದಿಗಳಿಗೆ ಹಣ ನೀಡದ ಕುರಿತು ಸ್ವತಃ ಮಸೀದಿಗಳೇ ಮಾಹಿತಿ - [11 ರಂದು ನಿಧಿ ದೇಶಪಾಂಡೆ.](https://independentsangramnews.com/nidhi-deshpande-on-the-11th/): 11 ರಂದು ನಿಧಿ ದೇಶಪಾಂಡೆ. ಗುರುವಂದನಾ ಹಾಗೂ ನೃತ್ಯಾರ್ಪಣೆ ಕಾರ್ಯಕ್ರಮ. ಧಾರವಾಡ 09 : ಉಪಾಧ್ಯೆ ನೃತ್ಯವಿಹಾರ ಧಾರವಾಡ ಇವರ ಆಶ್ರಯದಲ್ಲಿ ಗುರುವಂದನಾ ಹಾಗೂ ನೃತ್ಯಾರ್ಪಣೆ ಯನ್ನು ಇದೆ ಬರುವ ದಿನಾಂಕ 11 ಶನಿವಾರ ಸಂಜೆ 5.30 ಗಂಟೆಗೆ ಸೃಜನಾ ರಂಗಮಂದಿರ ಧಾರವಾಡದಲ್ಲಿ ವಿದುಷಿ ಕುಮಾರಿ. ನಿಧಿ ಜಿ. ದೇಶಪಾಂಡೆ ರವರು ನಡೆಸಿಕೊಡುವರು. ವಿದುಷಿ ಪ್ರಮೋದಾ ಎನ್.ಉಪಾಧ್ಯಾಯ ರವರ ನೇತೃತ್ವದಲ್ಲಿ ಈ ನೃತ್ಯಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹಾ ಜಿ. ದೇಶಪಾಂಡೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಟ್ಯಾಚಾರ್ಯ ಪ್ರೊ. ಕೆ.ರಾಮಮೂರ್ತಿರಾವ್ ಮೈಸೂರು ಅಧ್ಯಕ್ಷತೆ ವಹಿಸಲಿದ್ದು, ಡಾ. ಸರ್ವಮಂಗಳಾ ದೇವರಾಜು ಉದ್ಘಾಟಿಸಲಿದ್ದಾರೆ, ಮುಖ್ಯ ಅಥಿತಿಗಳಾಗಿ ಅನಂತ ಪದ್ಮನಾಭ ಐತಾಳ ಹಾಗೂ ವರ್ಷಾ ಮನೋಜ ಹಂಚಿನಮನಿ ವಹಿಸಲಿದ್ದಾರೆ. ಅಂದು ವಿಶೇಷವಾಗಿ ವಿದುಷಿ ಪ್ರಮೋದಾ ನಟರಾಜ ಉಪಾಧ್ಯಾಯರವರಿಗೆ ಗುರುವಂದನೆಯನ್ನು ನಿಧಿ ಜಿ ದೇಶಪಾಂಡೆ ರವರು ಮಾಡುವರು. ನಂತರದಲ್ಲಿ ಕುಮಾರಿ ನಿಧಿ ಜಿ ದೇಶಪಾಂಡೆ ಇವರಿಂದ ಪುಷ್ಪಾಂಜಲಿ, ಆಲಾರಿಪು, ಜತಿಸ್ವರ, ದೇವಿ ಕೌತುವಂ, ಪದವರ್ಣ, ಜಾವಳಿ, - [ಮಕ್ಕಳು ದೇಶದ ಸಂಪತ್ತು ಮತ್ತು ಶಕ್ತಿ ಶಂಕರ ಹಲಗತ್ತಿ](https://independentsangramnews.com/children-are-the-wealth-and-strength-of-the-country-shankara-halagatti/): ಮಕ್ಕಳು ದೇಶದ ಸಂಪತ್ತು ಮತ್ತು ಶಕ್ತಿ ಶಂಕರ ಹಲಗತ್ತಿ. ಧಾರವಾಡ : ಮಕ್ಕಳು ಈ ದೇಶದ ಸಂಪತ್ತು, ಮತ್ತು ಶಕ್ತಿ ಮಕ್ಕಳಲ್ಲಿ ಹುದುಗಿರುವ ಕಲೆ ಸಂಗೀತ ಮತ್ತು ಸಾಹಿತ್ಯವನ್ನು ಹೊರಹಾಕಲು ಇಂತಹ ವೇದಿಕೆಗಳು ತುಂಬಾ ಅವಶ್ಯಕ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು, ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ, ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ, ಪವರ್ ಆಫ್ ಯುಥ್ಸ ಫೌಂಡೇಶನ್ ಕರ್ನಾಟಕ ಇವರು ಹಮ್ಮಿಕೊಂಡ, ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ, ಪವರ್ ಆಫ್ ಯುಥ್ಸ ಫೌಂಡೇಶನ್ ಕರ್ನಾಟಕ, ಸರಕಾರಿ ಶಾಲೆಗಳು,ಮತ್ತು ಪ್ರತಿಭಾವಂತ ಮಕ್ಕಳಿಗೆ ಗುರುತಿಸಿ, ಜನರಿಗೆ ಪರಿಚಯಯಿಸುವ ಇವರ ಸತ್ಕಾರ್ಯ ಮೆಚ್ಚುವಂತಹುದು, ಒಬ್ಬ ದೇವಸ್ಥಾನದ ಅರ್ಚಕರು ಕಥೆ ಕಾದಂಬರಿ ಬರೆದು ಲೇಖಕರಾಗಿದ್ದು ತುಂಬಾ ಒಳ್ಳೆಯ ಕಾರ್ಯ ಎಂದು ಹೆಬ್ಬಳ್ಳಿಯ ಶ್ರೀ ಮೂಗಬಸವಣ್ಣ ದೇವರ ಅರ್ಚಕರಾದ ಗುರು ಚರಂತಯ್ಯ ಕೊಣ್ಣೂರ ಹಿರೇಮಠ ಇವರ ಕೃತಿಯ ಕುರಿತು ಮೆಚ್ಚುಗೆ - [ಅತಿಯಾದ ಮಳೆಯಿಂದ ಆಗಿರುವ ಬೆಳೆ ಹಾನಿಯಾದ ಕ್ಷೇತ್ರ ಮತ್ತು ರೈತರ ಕರಡು ಪಟ್ಟಿ ಪ್ರಕಟ](https://independentsangramnews.com/draft-list-of-areas-and-farmers-whose-crops-were-damaged-due-to-excessive-rains-published/): ಅತಿಯಾದ ಮಳೆಯಿಂದ ಆಗಿರುವ ಬೆಳೆ ಹಾನಿಯಾದ ಕ್ಷೇತ್ರ ಮತ್ತು ರೈತರ ಕರಡು ಪಟ್ಟಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ 10 ಕೊನೆಯ ದಿನ: ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಧಾರವಾಡ : 2025ನೇ ಸಾಲಿನ ಅಗಸ್ಟ್ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ಉಂಟಾದ ಬೆಳೆಹಾನಿಗೆ ಸಂಬಂಧಿಸಿದಂತೆ. ಪರಿಹಾರವನ್ನು ಪಾವತಿಸುವ ಕುರಿತು ಜಂಟಿ ಸಮೀಕ್ಷೆಯನ್ನು ಜರುಗಿಸಲಾಗಿದೆ. ಈ ಕುರಿತು ಸ್ವೀಕೃತವಾದ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಸೆಪ್ಟಂಬರ್ 7, 2025 ರಂದು ಸಮೀಕ್ಷಾ ವರದಿಯನ್ನು ಅಂತಿಮಗೊಳಿಸಲಾಗಿದೆ ಮತ್ತು ತಾಲ್ಲೂಕುವಾರು FID ಹೊಂದಿದ ರೈತರ ಬೆಳೆಹಾನಿ ಕ್ಷೇತ್ರದ ವಿವರಗಳನ್ನು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಬೆಳೆಹಾನಿ ಸಮೀಕ್ಷೆಯ ಕ್ಷೇತ್ರ ವಿವರ : ಧಾರವಾಡ ತಾಲೂಕಿನಲ್ಲಿ 17,932 ರೈತರು ಮತ್ತು ಒಟ್ಟು 14,302.51 ಹೆಕ್ಟೇರ್ ಕ್ಷೇತ್ರ, ನವಲಗುಂದ ತಾಲೂಕಿನಲ್ಲಿ 25,890 ರೈತರು ಒಟ್ಟು 23,627.13 ಹೆಕ್ಟೇರ್ ಕ್ಷೇತ್ರ, ಹುಬ್ಬಳ್ಳಿ ತಾಲೂಕಿನಲ್ಲಿ 14,455 ರೈತರು ಒಟ್ಟು 15,858 ಹೆಕ್ಟೇರ್ ಕ್ಷೇತ್ರ, ಕುಂದಗೋಳ ತಾಲೂಕಿನಲ್ಲಿ 14,854 ರೈತರು ಒಟ್ಟು - [ಮಾನವ ಹಕ್ಕುಗಳು ಮತ್ತು ಕಾನೂನು ಮಾಹಿತಿ ವಿಚಾರ ಸಂಕೀರಣ.](https://independentsangramnews.com/human-rights-and-legal-information-seminar/): ಮಾನವ ಹಕ್ಕುಗಳು ಮತ್ತು ಕಾನೂನು ಮಾಹಿತಿ ವಿಚಾರ ಸಂಕೀರಣ. ಧಾರವಾಡ : ಸಂಸ್ಕೃತಿ ಸೇವಾ ಸಂಸ್ಥೆ ಧಾರವಾಡ ಹಾಗೂ ಅಖಿಲ ಭಾರತ ಮಾನವ ಹಕ್ಕುಗಳ ಸಂಘ ದೆಹಲಿ, ಇವರುಗಳ ಸಹಯೋಗದೊಂದಿಗೆ ಮಾನವ ಹಕ್ಕುಗಳು ಮತ್ತು ಕಾನೂನು ಮಾಹಿತಿ ವಿಚಾರ ಸಂಕಿರಣ ಹಮ್ಮಿಕೊಂಡಿದ್ದು. ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ನಿವೃತ್ತ ಎಸ್.ಪಿ. ಗುರು ಬಿ. ಮತ್ತೂರ ಇವರು ಬದಲಾವಣೆಗೆ ಎಲ್ಲರೂ ಕೈ ಜೋಡಿಸಬೇಕು ಹಾಗೂ ರಸ್ತೆಯ ಸಂಚಾರಿ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಕರೆ ಕೊಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ಸದಾನಂದ ಎಂ. ಪಾಟೀಲ ಇವರು ಭಾರತ ಮಾನವ ಹಕ್ಕುಗಳ ಸಂಸ್ಥೆಯ ಜನರಲ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸುತ್ತಿದ್ದು ಮಾನವ ಹಕ್ಕುಗಳ ಸಂಸ್ಥೆಯ ಕಾರ್ಯವೈಖರಿಯನ್ನು ತಿಳಿಸಿ ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರೇಮಲ್ಲೂರು ಈಶ್ವರನ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್‌. ಆರ್. ತೋಡಕರ್ ಇವರು ಮಾತನಾಡಿ ಮೌಲ್ಯಗಳ ಕುಸಿತಕ್ಕೆ ಕಾರಣವನ್ನು ವಿವರಿಸಿ, ಸಧೃಡ ಸಮಾಜದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಯುವಕರು - [ಸಮೀಕ್ಷೆಗೆ ವಿರೋಧಿಸುವವರು ಹಿಂದುಳಿದ ಸಮುದಾಯಗಳ ವಿರೋಧಿಗಳು - ಸಿ ಜಿ ಪಾಟೀಲ](https://independentsangramnews.com/those-who-oppose-the-survey-are-opponents-of-backward-communities-c-g-patil/): ಸಮೀಕ್ಷೆಗೆ ವಿರೋಧಿಸುವವರು ಹಿಂದುಳಿದ ಸಮುದಾಯಗಳ ವಿರೋಧಿಗಳು – ಸಿ ಜಿ ಪಾಟೀಲ. ಧಾರವಾಡ 07 : ಸಮೀಕ್ಷೆಗೆ ವಿರೋಧಿಸುವವರು ಹಿಂದುಳಿದ ಸಮುದಾಯಗಳ ವಿರೋಧಿಗಳು, ಸಾಮಾಜಿಕ ನ್ಯಾಯಕ್ಕಾಗಿ ಈ ಸಮೀಕ್ಷೆ ಅಗತ್ಯ ಮತ್ತು ಇದರಲ್ಲಿ ಸರ್ವ ಸಮುದಾಯಗಳ ಹಿಂದುಳಿದವರ ಹಿತ ಅಡಗಿದೆ, ಸಮೀಕ್ಷೆ ವಿರೋಧಿಸುವ ಸಾಮಾಜಿಕ ನ್ಯಾಯದ ವಿರೋಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ ಎಂದು ಸಿ ಜಿ ಪಾಟೀಲ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಭಾರತದಲ್ಲಿ ಜಾತಿ ವ್ಯವಸ್ಥೆ ವಾಸ್ತವ, ಅದೇ ರೀತಿ ಕೆಲವೇ ಕೆಲವು ಜಾತಿಗಳು ಮುಂದುವರೆದಿರುವುದು ಮತ್ತು ಹಲವು ಜಾತಿಗಳು ಹಿಂದುಳಿದಿರುವುದು ಕೂಡ ವಾಸ್ತವವೇ, ಅದಕ್ಕಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಯಾವ ಜಾತಿಗಳು ಎಷ್ಟು ಹಿಂದುಳಿದಿವೆ? ಎಷ್ಟು ಮುಂದುವರೆದಿವೆ? ಎನ್ನುವುದನ್ನು ಕಾಲಕಾಲಕ್ಕೆ ಅಧ್ಯಯನ ಮಾಡಬೇಕು, ಅಂದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಈ ಸಮೀಕ್ಷೆ ಆಧಾರದ ಮೇಲೆ ಸರ್ಕಾರಗಳು ನೀತಿ-ನಿರೂಪಣೆ ರೂಪಿಸಬೇಕು, ಜೊತೆಗೆ ಸಾಮಾಜಿಕ ನ್ಯಾಯವನ್ನು ಜಾರಿ ಮಾಡಲು ಪ್ರಯತ್ನಿಸಬೇಕು. ಇದೇ - [ಅಂತರರಾಷ್ಟ್ರೀಯ ಎಶೀಯಾ ಶ್ರವಣದೂಷ ಚದುರಂಗ ಸ್ಪದೆ೯ಯಲ್ಲಿ ಎರಡು ಚಿನ್ನದ ಪದಕ ಗೆದ್ದ ಧಾರವಾಡದ ಅಂಬಿಕಾ ಮಸಗಿ.](https://independentsangramnews.com/ambika-masagi-from-dharwad-won-two-gold-medals-at-the-international-asian-hearing-aid-chess-championship/): ಅಂತರರಾಷ್ಟ್ರೀಯ ಎಶೀಯಾ ಶ್ರವಣದೂಷ ಚದುರಂಗ ಸ್ಪದೆ೯ಯಲ್ಲಿ ಎರಡು ಚಿನ್ನದ ಪದಕ ಗೆದ್ದ ಧಾರವಾಡದ ಅಂಬಿಕಾ ಮಸಗಿ   ಧಾರವಾಡ  : ಉಜಕಿಸ್ಥಾನ ಟಾಸ್ಕಂಟನಲ್ಲಿ ನಡೆದ ಅಂತರರಾಷ್ಟ್ರೀಯ ಎಶಿಯಾ ಶ್ರವಣದೂಷ ಉಳ್ಳವರ ಚದುರಂಗ ಸ್ಪದೆ೯ಯಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಧಾರವಾಡದ ಅಂಬಿಕಾ ಮಸಗಿ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದು, ಇವಳು ಮೈಸೂರಿನ ಸುತ್ತೂರ ಮಠದಲ್ಲಿ ಡಿಪ್ಲೊಮಾ ಸಿ ಎಸ್ ಮುಗಿಸಿ ಹುಬ್ಬಳ್ಳಿಯ ಪ್ರತಿಷ್ಟಿತ ಜೈನ್ ಇಂಜನಿಯರಿಂಗ ಕಾಲೇಜಿನಲ್ಲಿ ಬಿ ಇ ಕಂಪ್ಯೂಟರ ಸೈನ್ಸ 2022 ಮುಗಿಸಿದ್ದಾಳೆ ಎಂದು ಮಂಜುನಾಥ ಮೂಹರೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಶಿಯಾ ಬಿಲ್ಝ ಡೆಫ್ ಚೆಸ್ ಟೀಮ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ,ಹಾಗೂ ಎಶೀಯಾ ರ್ಯಾಪಿಡ್ ಡೇಫ್ ಚೆಸ್ ಚಿನ್ನದ ಪದಕ ಪಡೆದಿದ್ದು ಇದಕ್ಕೆ ಮೈಸೂರಿನ ಅಜೀತ್ ಎಂ ಪಿ ಇವರು ಉಚಿತವಾಗಿ ಆನ್ ಲೈನ್ ಮಾಗ೯ದಶ೯ನ ಸ್ಮರಣೀಯ ಎಂದರು. ಎ ಐ ಡಿ ಎಸ್ ಓ ,ಕೆ ಎಸ್ ಎಪ್ ಡಿ, ಹಾಗೂ - [ದಸರಾದಂತೆ ವಿಜಯಶಾಲಿಗಳಾಗುತ್ತೇವೆ : ಡಾಕ್ಟರ್ ಶರಣಪ್ಪ ಕೊಟಗಿ](https://independentsangramnews.com/we-will-be-victorious-like-dasara-dr-sharanappa-kotagi/): ದಸರಾದಂತೆ ವಿಜಯಶಾಲಿಗಳಾಗುತ್ತೇವೆ : ಡಾಕ್ಟರ್ ಶರಣಪ್ಪ ಕೊಟಗಿ ಧಾರವಾಡ : ಪುರಾಣ, ಇತಿಹಾಸ ಸಾಕ್ಷಿಯಾಗಿದೆ. ಹಿಂಸವಾದಿಗಳು, ಜಾತಿವಾದಿಗಳು, ಕೋಮುವಾದಿಗಳು ತಾತ್ಕಾಲಿಕ ಜಯಶಾಲಿಗಳಾಗಿದ್ದಾರೆ. ತಾತ್ಕಾಲಿಕ ಸುಖ ಸಂತೋಷ ಅನುಭವಿಸುತ್ತಾರೆ. ಕಾಂಗ್ರೆಸ್ ಸದಾ ಅಹಿಂಸಾ ವಾದಿಗಳು, ಜಾತ್ಯತೀತ ವಾದಿಗಳು. ಮಹಾ ಮಾನವತಾವಾದಿಗಳಾದ ಬುದ್ಧ ಬಸವ ಅಂಬೇಡ್ಕರ್ ತತ್ವಗಳ ಮೇಲೆ ಜೀವನ ಹಾಗೂ ರಾಜ್ಯಭಾರ ಮತ್ತು ರಾಜಕೀಯ ಮಾಡುವ ಪಕ್ಷವಾಗಿದೆ ಎಂದು ಶ್ರೀ ಶರಣಬಸವೇಶ್ವರ ಎಜುಕೇಶನ್ ಅಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ನ ಅಧ್ಯಕ್ಷರು ಸಮಾಜವಾದಿಗಳು ಶಿಕ್ಷಣ ಪ್ರೇಮಿಗಳು ಆಗಿರುವ ಡಾಕ್ಟರ್ ಶರಣಪ್ಪ ಕೋಟಗಿ ಹೇಳಿದರು. ನಗರದ ತತ್ತೂರಿನ ಶ್ರೀ ತಳದ ಕರಿಯಮ್ಮ ದೇವಿ ಉದ್ಭವ ಮೂರ್ತಿ ಟ್ರಸ್ಟ್ ಕಮಿಟಿ ವತಿಯಿಂದ ದಸರಾ ಜಂಬು ಸವಾರಿ ಮೆರವಣಿಗೆಯಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಡಾಕ್ಟರ್ ಶರಣಪ್ಪ ಕೊಟಗಿ ಮಾತನಾಡಿದರು. ದಸರಾ ಹಬ್ಬವನ್ನು ಕೆಟ್ಟದರ ಮೇಲೆ ಒಳ್ಳೆಯದ ವಿಜಯ ಎಂದು ಆಚರಿಸಲಾಗುತ್ತದೆ. ಈ ಹಬ್ಬವು ದೇಶದಾದ್ಯಂತ ಉತ್ಸಾಹ ಮತ್ತು ಸಮರ್ಪಣೆಯಿಂದ ಆಚರಿಸಲ್ಪಡುತ್ತದೆ, ಕೆಲವಡೆ ಜನರು ವಿಜಯದಶಮಿ ಎಂದು ಕರೆಯುತ್ತಾರೆ. ಇದು - [VIVIDLIPI ಯಿಂದ ವೈಶಿಷ್ಟ್ಯಪೂರ್ಣ ಸ್ಪರ್ಧೆಗಳೊಂದಿಗೆ 10 ವರ್ಷಗಳ ದಶಮಾನೋತ್ಸವ ಸಂಭ್ರ](https://independentsangramnews.com/vividlipi-celebrates-10-years-of-decadence-with-exclusive-competitions/): VIVIDLIPI ಯಿಂದ ವೈಶಿಷ್ಟ್ಯಪೂರ್ಣ ಸ್ಪರ್ಧೆಗಳೊಂದಿಗೆ 10 ವರ್ಷಗಳ ದಶಮಾನೋತ್ಸವ ಸಂಭ್ರಮ ಬೆಂಗಳೂರು : ಸೆಪ್ಟೆಂಬರ್ 2025 – ಕನ್ನಡ ಸಾಹಿತ್ಯ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ VIVIDLIPI ಸಂಸ್ಥೆಯು ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕದಾದ್ಯಂತದ ಲೇಖಕರು, ಕಥೆಗಾರರು ಮತ್ತು ಕಲಾವಿದರಿಗಾಗಿ ಮೂರು ವಿಶಿಷ್ಟ ಸೃಜನಶೀಲ ಸ್ಪರ್ಧೆಗಳನ್ನು ಆಯೋಜಿಸಿದೆ. ಕಳೆದ ಒಂದು ದಶಕದಲ್ಲಿ, VIVIDLIPI ಯು ಕನ್ನಡ ಪುಸ್ತಕಗಳು, ಇ-ಪುಸ್ತಕಗಳು, ಆಡಿಯೊ ಬುಕ್‌ಗಳು, ಪಾಡ್‌ಕಾಸ್ಟ್‌ಗಳು, ಬ್ಲಾಗ್‌ಗಳು ಮತ್ತು ಯೂಟ್ಯೂಬ್ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಸಾಹಿತ್ಯಾಸಕ್ತರನ್ನು ತಲುಪಿದೆ. ಈ ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಯೋಜಿಸಲಾದ ಸ್ಪರ್ಧೆಗಳು ಮತ್ತು ಬಹುಮಾನದ ವಿವರಗಳು ಇಂತಿವೆ. 1. ಕಥಾಸಂಭ್ರಮ – ಸಣ್ಣಕಥಾ ಸ್ಪರ್ಧೆ ಸಣ್ಣ ಕಥೆಗಳನ್ನು ಗರಿಷ್ಠ 3000 ಪದಗಳು ಮೀರದಂತೆ ಬರೆದು ಕಳುಹಿಸಬಹುದು. ಪ್ರಥಮ ಬಹುಮಾನ ₹2500, ದ್ವಿತೀಯ ₹1500, ತೃತೀಯ ₹1000 ಮತ್ತು 3 ಸಮಾಧಾನಕರ ಬಹುಮಾನಗಳು. ಬಹುಮಾನ - [ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಡಾ, ಸಲೀಮ್ ಸೊನ್ನೆಖಾನ್ : ಕಾಂಗ್ರೇಸ್ ಟಿಕೇಟಗಾಗಿ ಅರ್ಜಿ ಸಲ್ಲಿಕೆ](https://independentsangramnews.com/dr-salim-sonnekhan-files-for-congress-ticket-for-west-graduate-constituency/): ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಡಾ, ಸಲೀಮ್ ಸೊನ್ನೆಖಾನ್ : ಕಾಂಗ್ರೇಸ್ ಟಿಕೇಟಗಾಗಿ ಅರ್ಜಿ ಸಲ್ಲಿಕೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಡಾ, ಸಲೀಮ್ ಸೊನ್ನೆಖಾನ್ ಇಂದು ಪಶ್ಚಿಮ ಪದವೀಧರ ಮತಕ್ಷೇತ್ರದಿಂದ ನಡೆಯುವ ಚುನಾವಣೆಗೆ ಕಾಂಗ್ರೇಸ್ ಟಿಕೇಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದರು. ಸಲೀಮ್ ಸೊನ್ನೆಖಾನ ಅವರು ಕಳೆದ 25 ವರ್ಷಗಳಿಂದ ಕಾಂಗ್ರೇಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದು, ಪಕ್ಷವನ್ನು ಕೆಳಮಟ್ಟದಿಂದ ಸಂಘಟನೆ ಮಾಡಿದ್ದಾರೆ. ಅಲ್ಲದೇ ನಿರುದ್ಯೋಗಿ ಪದವೀಧರರಿಗೆ ಅನುಕೂಲ ಕಲ್ಪಿಸಿದ್ದಾರೆ. ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಸ್ಪರ್ಧಿಸಲು ಕಳೆದ ಒಂದು ವರ್ಷದಿಂದ ತಯಾರಿ ನಡೆಸಿದ್ದಾರೆ. ಗದಗ, ಹಾವೇರಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮದೇ ಆದ ಗೆಳೆಯರ ಬಳಗ ಹಾಗೂ ಅಭಿಮಾನಿಗಳನ್ನು ಹೊಂದಿರುವ ಡಾ, ಸಲೀಮ್ ಸೊನ್ನೆಖಾನ ಕಾಂಗ್ರೇಸ್ ಪಕ್ಷ ಟಿಕೇಟ್ ಕೊಟ್ಟಲ್ಲಿ ಗೆಲವು ತಂದು ಕೊಡುವ ಸಾಮರ್ಥ್ಯ ಹೊಂದಿರುವದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೇಸ್ ಅಧ್ಯಕ್ಷ ಅಲ್ತಾಪ್ ## Pages - [Testing Home Page](https://independentsangramnews.com/testing-home-page/) [comment]: # (Generated by Hostinger Tools Plugin)